ಚಳ್ಳಕೆರೆ : ಮಳೆಇರಲಿ, ಗುಡುಗು ಬರ್ಲಿ, ಚಳಿಯೆನ್ನದೆ ನಿತ್ಯದ ಕಾಯಕ ಮೆರೆವ ಪತ್ರಿಕಾ ವಿತರಕರ ಸೇವೆ ಅನನ್ಯ ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ಪತ್ರಿಕಾ ಸಂಪಾದಕರ ಸಂಘ ಚಳಕೆರೆ ಶಾಖೆ ವತಿಯಿಂದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯಲ್ಲಿ ಭಾಗವಹಿಸಿ ಪತ್ರಿಕಾ ವಿತರಕರಿಗೆ ಜರ್ಕಿನ್ ವಿತರಿಸಿ ಮಾತನಾಡಿದ ಅವರು
ಪತ್ರಿಕೆ ವಿತರಣೆಯಲ್ಲಿ ತೊಡಗಿದ ನಿಮಗೆ ಸಲಾಂ, ದಿನ ನಿತ್ಯವೂ ಪತ್ರಿಕೆ ವಿತರಣೆಯಲ್ಲಿ ಎಲ್ಲಾರು ಸೂರ್ಯ ನೋಡುವ ಮೊದಲೆ ನಿಮ್ಮ ಕಾರ್ಯ ಪ್ರಾರಂಭವಾಗುತ್ತದೆ ಎಂದು ಹೇಳಿದ್ದರೆ.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಟಿ, ತಿಪ್ಪೇಸ್ವಾಮಿ, ತಾಲೂಕು ಅಧ್ಯಕ್ಷ ಪಿ, ಗಂಗಾಧರ, ಪದಾಧಿಕಾರಿಗಳಾದ ಡಿ, ತಿಪ್ಪೇಸ್ವಾಮಿ, ಹೊನ್ನೂರು ಮಾರಣ್ಣ, ಡಿ ನಿಂಗರಾಜ್, ಕೆಟಿ ರಾಜಣ್ಣ, ಸಿದ್ದರಾಜ್, ಅನಿಲ್ ಇತರರು ಇದ್ದರು