ಚಳ್ಳಕೆರೆ : ಮಕ್ಕಳಿಗೆ ಆಸ್ತಿ ಮಾಡಲು ಬದಲು, ಮಕ್ಕಳನ್ನು ಆಸ್ತಿಯಾನ್ನಾಗಿ ಮಾಡಿ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದ್ದಾರೆ.
ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ತಾಲೂಕು ಶಾಖೆ ವತಿಯಿಂದ ಹಾಗೂ ಪ್ರ‍್ರಗತಿಪರ ಶಿಕ್ಷಕರ ವೇದಿಕೆ ಇವರ ಸಹಯೋಗದೊಂದಿಗೆ ನಗರದ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಉತ್ತಮ ಶಾಲಾ ಶಿಕ್ಷಕರ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಉದ್ಘಾಟನೆ ಮಾಡಿ ಮಾತನಾಡಿದ ಅವರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದರೆ ಅದನ್ನೆ ಆಸ್ತಿಯನ್ನಾಗಿ ಮಾಡುವ ಈಗೀನ ಪೋಷಕರನ್ನು ಇಂದು ಕಾಣಬಹುದು,
ಶಿಕ್ಷಕರು ಮಕ್ಕಳಿಗೆ ಅಭಿನಂದನೆ ಸಲ್ಲಿಸುವ ಮೂಲಕ ಅವರನ್ನು ಇನ್ನಷ್ಟು ಕ್ರಿಯಾಶೀಲರನ್ನಾಗಿ ಮಾಡಬಹುದು ಎಂದರು.
ಜಿಲ್ಲೆಗೆ ಹಾಗೂ ತಾಲೂಕಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕೀರ್ತಿ ತಂದ ಶಿಕ್ಷಕರ ಕಾರ್ಯ ಶ್ಲಾಘನೀಯ ಆದ್ದರಿಂದ ನಗರದಲ್ಲಿ ನಿರ್ಮಾಣ ಹಂತದಲ್ಲಿ ಇರುವ ಗುರುಭವನಕ್ಕೆ ಹೆಚ್ಚುವರಿಯಾಗಿ ಸುಮಾರು 25ಲಕ್ಷ ಅನುದಾನ ನೀಡಿ ಅದರ ಜೋತೆ ಜೊತೆಗೆ ಕ್ಷೇತ್ರದಲ್ಲಿ ಸುಮಾರು ಎರಡು ಕೋಟಿ ಅನುದಾನ ನೀಡಿ ತಾಲೂಕಿನ ಹಲವು ಶಾಲಾ ಕಾಲೇಜುಗಳನ್ನು ಸುಸ್ಥಿಯಲ್ಲಿ ಇಟ್ಟಿದ್ದೆನೆ ಎಂದರು

ತಹಶೀಲ್ದಾರ್ ಎನ್.ರಘುಮೂರ್ತಿ ಮಾತನಾಡಿ, ತಾಲೂಕಿನಲ್ಲಿ ಶಿಕ್ಷಣಕ್ಕೆ ಪೂರಕವಾದಂತಹ ಚಟುವಟಿಕೆಗಳು ಸರ್ಕಾರಿ ಇಲಾಖೆ ಅಧಿಕಾರಿಗಳೂ ನೇರವಾಗಿ ಶೈಕ್ಷಣಿಕ ನೆಲೆಗಟ್ಟಿನ, ಭದ್ರಗೊಳಿಸಲು ಸಹಕಾರ ನೀಡಬೇಕು, ತಾಲೂಕಿನಲ್ಲಿ ಮಂತ್ರಿಗಳು ಹಾಗೂ ಶಾಸಕರ ದೂರ ದೃಷ್ಠಿಯಿಂದ ಸರ್ಕಾರಿ ಶಾಲೆಗಳಿಗೆ ಈಗಾಗಲೇ ಗರಿಷ್ಠ ಪ್ರಮಾಣದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ.
ಇದರ ಜೊತೆಯಲ್ಲಿ ಶಿಕ್ಷಣ ಇಲಾಖೆ ಮತ್ತು ಕಂದಾಯ ಇಲಾಖೆ ಸಹಯೋಗದಲ್ಲಿ ಹಲವಾರು ದಾನಿಗಳನನ್ನು ಒಪ್ಪಿಸಿ ಸುಮಾರು 9 ಸ್ಮಾರ್ಟ್ ಕ್ಲಾಸ್‌ನ್ನಾಗಿ ಪರಿವರ್ತಿಸಲಾಗಿದೆ, ಇನ್ನೂ ಶಿಕ್ಷಣಕ್ಕೆ ಪೂರಕವಾಗಿ ಕಲವು ಶಾಲೆಗಳಿಗೆ ಅಗತ್ಯವಿರುವ ಶುದ್ದ ಕುಡಿಯುವ ನೀರನ ಘಟಕದ ವ್ಯವಸ್ಥೆಯನ್ನು ಮಾಡಲಾಗಿದೆ. ಜನಪ್ರತಿನಿಧಿಗಳ ಮತ್ತು ಅಧಿಕಾರಗಳ ದೂರದೃಷ್ಠಿಯಿಂದ ತಾಲೂಕಿನಲ್ಲಿ ಶಿಕ್ಷಣದ ಕ್ರಾಂತಿ ನಡೆದಿದೆ ಎಂದರು,

ಈದೇ ಸಂಧರ್ಭದಲ್ಲಿ ರಾಜ್ಯ ಶಿಕ್ಷಕರ ಸಂಘದ ಅಧ್ಯಕ್ಷ ಶಂಭುಲಿAಗನಗೌಡ, ರಾಜ್ಯದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ನುಕ್ಲಿ, ಪ್ರಧಾನ ಕಾರ್ಯದರ್ಶಿ ಹೆಚ್.ಹನುಮಂತಪ್ಪ, ತುಮಕೂರು ಜಿಲ್ಲಾ ಅಧ್ಯಕ್ಷ ನರಸಿಂಹಮೂರ್ತಿ, ಜಿಲ್ಲಾ ಪ್ರಗತಿಪರ ವೇದಿಕೆ ಅಧ್ಯಕ್ಷ ಮಾರುತೇಶ್, ಪಾವಗಡ ತಾಲ್ಲೂಕು ಅಧ್ಯಕ್ಷ ರಾಮಾಂಜನೇಯ, ತಾಲೂಕು ಅಧ್ಯಕ್ಷ ಬಿ.ವೀರಣ್ಣ, ಸಂಗಟನಾ ಕಾರ್ಯದರ್ಶಿ ನಟೇಶ್, ಹಿರಿಯೂರು ತಾಲೂಕು ಅದ್ಯಕ್ಷ ಮಂಜುನಾಥ್, ತಾಲೂಕು ಮಟ್ಟದ ಶಿಕ್ಷಕರ ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು

About The Author

Namma Challakere Local News
error: Content is protected !!