ಚಳ್ಳಕೆರೆ : ಚೆನ್ನಮ್ಮ ನಾಗತಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೂತನ ರಾಜೀವ್ ನಗರ ಸಿ ಅಂಗನವಾಡಿ ಕೇಂದ್ರಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು,
ಡಾ.ಬಿಆರ್ ಅಂಬೇಡ್ಕರ್ ಬಾಬಾ ಸಾಹೇಬ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಅಧಿಕೃತವಾಗಿ ಅಂಗನವಾಡಿ ಕೇಂದ್ರವನ್ನು ಪ್ರಾರಂಭಿಸಿದರು.
ಈದೇ ಸಂಧರ್ಭದಲ್ಲಿ ಗ್ರಾಮದ ಮುಖಂಡ ಗುಜ್ಜರಪ್ಪ ಮಾತನಾಡಿ, ಗ್ರಾಮದ ಮಕ್ಕಳು ಅಂಗನವಾಡಿಗೆ ತೆರಳಲು ದೂರದ ಇನ್ನೋಂದು ಕೇಂದ್ರಕ್ಕೆ ತೆರಳಬೇಕಾಗಿತ್ತು ಆದರೆ ನೂತನವಾಗಿ ಇಂದು ಆರಂಭಗೊAಡ ಈ ಅಂಗನವಾಡಿ ಕೇಂದ್ರ ಮಕ್ಕಳಿಗೆ ವರದಾನವಾಗಿದೆ ಆದ್ದರಿಂದ ಇಲ್ಲಿನ ಕಾರ್ಯಕರ್ತರು ಮಕ್ಕಳ ಹಿತ ದೃಷ್ಠಿಯಿಂದ ಬೆಳೆಯುವ ವಯಸ್ಸಿನಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದರು.
ಈ ಸಮಾರಂಭದಲ್ಲಿ ಗ್ರಾಮದ ಮುಖಂಡ ಗುಜ್ಜರಪ್ಪ, ನವೀನ್ಕುಮಾರ್, ಗ್ರಾಮಸ್ಥರು, ಇಲಾಖೆ ಅಧಿಕಾರಿ ರಾಮಾಂಜನೇಯ, ಎಸಿಡಿಪಿಓ ಮತ್ತು ಕ್ಷೇತ್ರದ ಮೇಲ್ವಿಚಾರಕಿ, ಅಂಗನವಾಡಿ ಸಿ ಕೇಂದ್ರದ ಕಾರ್ಯಕರ್ತ ಮಹದೇವಮ್ಮ, ಸಹಾಯಕಿ ಶಾಂತಲಾ, ಇತರರು ಪಾಲ್ಗೊಂಡಿದ್ದರು.