ಚಳ್ಳಕೆರೆ : ತಂಬಾಕು ಸಂಬAಧಿತ ಕಾಯಿಲೆ ಮತ್ತು ಸಾವಿನ ಪ್ರಮಾಣ ಹೆಚ್ಚಾಗಿದೆ ಮನೆಯ ದೈನಂದಿನ ಆಹಾರ ಮತ್ತು ಮೂಲಭೂತ ಅಗತ್ಯಗಳಿಗೆ ವೆಚ್ಚಗಳನ್ನುಮಾಡುವ ಬದಲಾಗಿ ತಂಬಾಕಿಗೆ ಖಚ್ಚು ಮಾಡುವ ಮೂಲಕ ತಂಬಾಕು ಬಳಕೆಯು ಬಡತನಕ್ಕೆ ಕಾರಣವಾಗಿದೆ ಎಂದು ತಹಶೀಲ್ದರ್ ಎನ್.ರಘುಮೂರ್ತಿ ಹೇಳಿದರು.
ನಗರದಲ್ಲಿ ಇಂದ ಸಮನ್ವ ಸಮಿತಿ ಪೋಲಿಸ್ ಇಲಾಖೆ ಆರೋಗ್ಯ ಇಲಾಖೆ ನಗರ ಸಭೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ತಂಬಾಕು ಮುಕ್ತ ನಗರ ಕಾರ್ಯಕ್ರಮದಲ್ಲಿ ಚಳ್ಳಕೆರೆ ನಗರದ ವಾಸವಿ ಕಾಲೇಜ್ ಸರ್ಕಾರಿ ಪಿಯು ಕಾಲೇಜ್ ಬಾಪೂಜಿ ಕಾಲೇಜ್ ಹಾಗೂ ಸಾರ್ವಜನಿಕ ಸ್ಥಳಗಳಾದ ಕೋಟ್ ಮುಂಭಾಗ ವಾಲ್ಮೀಕಿ ಸರ್ಕಲ್ ಪರಿವೀಕ್ಷಣ ಮಂದಿರ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾರಾಟ ಹಾಗೂ ಮಧ್ಯಪಾನ ಮಾರಾಟ ಮಾಡುತ್ತಿದ್ದ ಅಂಗಡಿಗಳಿಗೆ ದಾಳಿ ನಡೆಸಿ ದಾಳಿಯಲ್ಲಿ ಧೂಮಪಾನದ ಉತ್ಪನ್ನಗಳಾದ ಬೀಡಿ ಸಿಗರೇಟ್ ತಂಬಾಕು ಗುಟುಕ ಹೊಗೆ ಸೊಪ್ಪು ಹಾಗೂ ಮಧ್ಯದ ಪೌಚ್ ವಶಕ್ಕೆ ಪಡೆದು ಸುಮಾರು 16 ಪ್ರಕರಣಗಳನ್ನು ದಾಖಲಿಸಿಕೊಂಡರು.
ಸಾರ್ವಜನಿಕ ಆರೋಗ್ಯದ ದೊಡ್ಡ ಬೆದರಿಕೆಗಳಲ್ಲಿ ತಂಬಾಕು ಸೇವನೆಯು ಒಂದಾಗಿದೆ, ಇದು ವಿಶ್ವದಾದ್ಯಂತ ವಷಕ್ಕೆ 8 ದಶಲಕ್ಷಕ್ಕೂ ಹೆಚ್ಚೂ ಜನರನ್ನು ಕೊಲ್ಲುತ್ತಿದೆ ಹಾಗೂ ಪ್ರತ್ಯಕ್ಷ ಧೂಮಪಾನ ಮಾಡುವುದರಿಂದ ಸುಮಾರು ದಶಲಕ್ಷಗಳಷ್ಟು ಜನರು ಸಾವಿಗೀಡಾದರೆ ಧೂಮಪಾನ ಮಾಡದವರು ಪರೋಕ್ಷ ಧೂಮಪಾನಕ್ಕೆ ಬಲಿಯಾಗಿ 1.2 ದಶಲಕ್ಷ ಜನರು ಸಾವಿಗೀಡಾಗುತ್ತಿದ್ದಾರೆ ವಿಶ್ವಾದಾದ್ಯಂತ ಇರುವ 1.1 ಶತಕೋಟಿ ಧೂಮಪಾನಿಗಳಲ್ಲಿ ಸುಮಾರು 80% ರಷ್ಟು ಜನ ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ವಾಸಿಸುತ್ತಿದ್ದಾರೆ ಅಂಗಡಿ ಮಾಲೀಕರಿಗೆ ಎಚ್ಚರಿಕೆಯನ್ನು ನೀಡಿದರು.

ಸಮಾಜದ ಸ್ವಾಸ್ಥ್ಯ ಕಾಪಾಡಲು ಪ್ರತಿಯೊಬ್ಬರು ಸಹಕರಿಸಬೇಕು ಶಾಲಾ ಆಭರಣ ಶಾಲಾ ಮುಂಭಾಗ ಮುಖ್ಯರಸ್ತೆ ಸಾರ್ವಜನಿಕ ಸ್ಥಳ ಆಸ್ಪತ್ರೆ ಸರ್ಕಾರಿ ಕಚೇರಿ ಅಂಗನವಾಡಿ ಇಂತಹ ಸ್ಥಳಗಳಲ್ಲಿ ಧೂಮಪಾನ ಮಾಡುವುದು ಅಪರಾಧ ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಇದನ್ನು ಅರ್ಥ ಮಾಡಿಕೊಂಡು ಪ್ರತಿಯೊಬ್ಬರು ಇಂತಹ ಸ್ಥಳಗಳಲ್ಲಿ ಧೂಮಪಾನವಾಗಲಿ ಮಧ್ಯಪಾನವಾಗಲಿ, ಮಾಡಿದರೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಟಿ.ಎಚ್.ಓ ಡಾ. ಕಾಶಿ, ಈಗಾಗಲೇ ನಗರದ ಎಲ್ಲಾ ಅಂಗಡಿ ಹಾಗೂ ಡಾಬಾ ಬಸ್ ನಿಲ್ದಾಣ ಶಾಲಾ ಅಕ್ಕಪಕ್ಕ ಅಂಗಡಿಗಳಿಗೆ ತಂಬಾಕು ಮಾರಾಟ ನಿಷೇಧ ನಾಮಫಲಕಾಗುವಂತೆ ಸೂಚನೆ ನೀಡಲಾಗಿದೆ ಅದರಂತೆ ಇಂದು ಸಹ ಸಮನ್ವಯ ಸಮಿತಿ ವತಿಯಿಂದ ನಗರದಲ್ಲಿ ಹಲವು ಅಂಗಡಿಗಳ ಮೇಲೆ ದಾಳಿ ತಂಬಾಕು ಉತ್ಪನ್ನ ಹಲವು ವಸ್ತುಗಳನ್ನು ವಶಕ್ಕೆ ಪಡೆದು ದಂಡ ವಿಧಿಸಲಾಗಿದೆ ಎಂದರು

ಆರೋಗ್ಯ ಶಿಕ್ಷಣಾಧಿಕಾರಿ ಎಸ್ ಬಿ ತಿಪ್ಪೇಸ್ವಾಮಿ, ತಂಬಾಕು ನಿಯಂತ್ರಣ ಅಧಿಕಾರಿ ತಿಪ್ಪೇಸ್ವಾಮಿ, ಸಿಡಿಪಿಓ ಕೃಷ್ಣಪ್ಪ ಪೌರಯುಕ್ತ ಚಂದ್ರಪ್ಪ, ಪಿ ಎಸ್ ಐ ತಿಮ್ಮಪ್ಪ ಆರೋಗ್ಯ ಅಧಿಕಾರಿಗಳಾದ ಮಹಾಲಿಂಗಪ್ಪ ಗಣೇಶ್ ಏ ಎಸ್ ಐ ಗಳಾದ ರವಿ ಪಿಸಿ ಗಳಾದ ಶ್ರೀನಿವಾಸ್ ಚಂದ್ರು ಸೇರಿದಂತೆ ನಗರಸಭೆ ಅಧಿಕಾರಿಗಳು ಆರೋಗ್ಯ ಅಧಿಕಾರಿಗಳು ಕಂದಾಯ ಅಧಿಕಾರಿಗಳು ಇದ್ದರು.

ವರದಿ : ರಾಮುದೊಡ್ಮನೆ ಚಳ್ಳಕೆರೆ
ಪೋ-9740799983

About The Author

Namma Challakere Local News
error: Content is protected !!