ಚಳ್ಳಕೆರೆ : ಹಿರಿಯೂರು ನಗರದ ಶ್ರೀ ವಾಸವಿ ಕಲ್ಯಾಣ ಮಂಟಪದಲ್ಲಿ ವಾಲ್ಮೀಕಿ ಧ್ವನಿ ಪತ್ರಿಕೆಯ ವತಿಯಿಂದ ಆಯೋಜಿಸಿದ್ದ ವಾಲ್ಮೀಕಿ ಧ್ವನಿ ಪತ್ರಿಕೆಯ 17ನೇ ವರ್ಷದ ವಾರ್ಷಿಕೋತ್ಸವ ಹಾಗೂ ನಾಯಕ ಸಮಾಜದ ಸಮಾಜ ಸುಧಾರಕರಿಗೆ ಸನ್ಮಾನ ಸಮಾರಂಭ ಮತ್ತು ಶ್ರೀ ಡಿ. ಸುಧಾಕರ್ ಅವರ ಪುಸ್ತಕ ಬಿಡುಗಡೆ ಸಮಾರಂಭ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಟಿ ರಘುಮೂರ್ತಿ ಭಾಗವಹಿಸಿ ಮಾತನಾಡಿದರು ಅವರು ಇಂದಿನ ಪ್ರಸ್ತುತ ದಿನಗಳಲ್ಲಿ ಪತ್ರಿಕೆ ತನ್ನ ಗಟ್ಟಿತನ ಉಳಿಸಿಕೊಂಡಿದೆ ಎಷ್ಟೆ ಟೆಕ್ನಲಾಜಿ ಮುಂದುವರೆದರೂ, ಪತ್ರಿಕೆ ತನ್ನ ಕೈಯಲ್ಲಿ ಹಿಡಿದು ಓದುವವರ ಸಂಖ್ಯೆ ಇನ್ನೂ ಜೀವಂತವಾಗಿದೆ ಇದರಿಂದ ಪತ್ರಿಕೆ ಮಹತ್ವವನ್ನು ಹರಿಯುವ ಅನಿವಾರ್ಯತೆಯಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಡಿ.ಸುಧಾಕರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಾಜ್‌ಪೀರ್, ವಾಲ್ಮೀಕಿ ಧ್ವನಿ ಪತ್ರಿಕೆಯ ಸಂಪಾದಕ ಸೊಂಡೆಕೆರೆ ಶಿವಣ್ಣ, ಯಾದಲಗಟ್ಟೆ ಜಗನ್ನಾಥ್, ಪತ್ರಕರ್ತ ಬೊಮ್ಮಲಿಂಗಪ್ಪ, ಹಾಗೂ ಮುಖಂಡರು, ಕಾರ್ಯಕರ್ತರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

About The Author

Namma Challakere Local News

You missed

error: Content is protected !!