ಚಳ್ಳಕೆರೆ :
ಈಡೀ ಜಿಲ್ಲೆಯಲ್ಲೆ ಬಿಜೆಪಿ ಅಲೆ ಇರುವಾಗ ಕೇವಲ ಚಳ್ಳಕೆರೆ ಕ್ಷೇತ್ರ ಮಾತ್ರ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಶಾಸಕ ಟಿ.ರಘುಮೂರ್ತಿ ಇದ್ದು 2023 ರಲ್ಲಿ ನಾಲ್ಕು ಜನ ಶಾಸಕರನ್ನು ಗೆಲ್ಲಿಸಿಕೊಳ್ಳುವಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ ಆದ್ದರಿಂದ ಮುಖ್ಯಮಂತ್ರಿಗಳು ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೌಳೂರು ಪ್ರಕಾಶ್ ಸರಕಾರವನ್ನು ಒತ್ತಾಯಿಸಿದರು.
ಅವರು ಚಿತ್ರದುರ್ಗ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,
ಚಿತ್ರದುರ್ಗ ಜಿಲ್ಲೆ ಐತಿಹಾಸಿಕ ಹಿನ್ನೆಲೆಯಿಂದ ಕೂಡಿ ತನ್ನದೆ ಆದ ಸಾಂಸ್ಕೃತಿಕ ವೈಭವವನ್ನು ಹೊಂದಿದ್ದು,
ರಾಜಕೀಯವಾಗಿ ರಾಜ್ಯಕ್ಕೆ ಮತ್ತು ರಾಷ್ಟ್ರ ಮಟ್ಟದ ನಾಯಕರನ್ನು ಕೊಡುಗೆಯಾಗಿ ನೀಡಿದೆ, ಆದರೆ ಅಭಿವೃದ್ಧಿ
ವಿಚಾರದಲ್ಲಿ ಕುಂಟುತ ಸಾಗಿರುವುದು ಅಷ್ಟೆ ಸತ್ಯ, ಭೌಗೊಳಿಕವಾಗಿ ಬಹುಭಾಗ ಬಯಲು ಸೀಮೆ
ಪ್ರದೇಶವಾಗಿದ್ದು, ಸ್ವತಂತ್ರ್ಯ ಪೂರ್ವದಿಂದ ಇಲ್ಲಿಯವರೆಗೆ ಅನೇಕ ಬಾರಿ ಬರಗಾಲಕ್ಕೆ ತುತ್ತಾದ ಜಿಲ್ಲೆಯಾಗಿದೆ.
ಅದರಲ್ಲಿ ಮೊಳಕಾಲ್ಕೂರು & ಚಳ್ಳಕೆರೆ ತೀರಾ ಬರಗಾಲಕ್ಕೆ ತುತ್ತಾದ ಪ್ರದೇಶಗಳಾಗಿದ್ದು, ಇಂತಹ ಸನ್ನಿವೇಶದಲ್ಲಿ
ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವು ಹೇಳಲು ಹೆಸರಿಲ್ಲದಿರುವಾಗ ಶಾಸಕರಾದ
ಟಿ.ರಘುಮೂರ್ತಿಯವರು ಭೂತ್ ಮಟ್ಟದಿಂದ ಪಕ್ಷ ಸಂಘಟಿಸಿ ಸ್ಥಳೀಯ ಕಾಂಗ್ರೇಸ್ ಮುಖಂಡರಿಗೆ ಆತ್ಮ
ಸೈರ್ಯ ತುಂಬಿ 2013 ರಲ್ಲಿ ಚುನಾವಣೆಗೆ ಆಯ್ಕೆಯಾಗಿ 2023 ರವರೆಗೆ ಸುಮಾರು 3 ಬಾರಿ ಶಾಸಕರಾಗಿದ್ದಾರೆ ಆದ್ದರಿಂದ
ಚಳ್ಳಕೆರೆ ತಾಲ್ಲೂಕಿನ ಕೃಷಿಕ, ಕೈಗಾರಿಕಾ, ಯುವಸಮುದಾಯ, ವರ್ತಕರಿಗೆ ಚಳ್ಳಕೆರೆಯ ಸರ್ವಾಂಗಿಣ
ಜನಾಂಗದವರಿಗೆ ಭರವಸೆಯ ನಾಯಕರಾಗಿ ಬರಗಾಲದ ಭಗೀರಥರಾಗಿ ಮತದಾರರ ಹೃದಯಲ್ಲಿ
ಜೀವಂತವಾಗಿ ಉಳಿದಿದ್ದಾರೆ, ಅದಕ್ಕೆ ಜೀವಂತ ಸಾಕ್ಷಿ ಎಂಬಂತೆ ಅನೇಕ ಅಭಿವೃದ್ಧಿ ಕಾರ್ಯಗಳು
ಮಾಡಿರುತ್ತಾರೆ,
ಅದರಲ್ಲಿ ಪ್ರಮುಖವಾಗಿ ವಾಣಿ ವೀಲಾಸ ಸಾಗರ ಜಲಾಶಯದಿಂದ ವೇದಾವತಿ ನದಿಗೆ 0.25
ಟಿ.ಎಂ.ಸಿ. ನೀರನ್ನು ಶಾಶ್ವತವಾಗಿ ಒದಗಿಸಿರುವುದು, ತುಂಗಭದ್ರ ಕುಡಿಯುವ ಹಿನ್ನೀರು ಯೋಜನೆ, ಹಾಗೂ
ಕ್ಷೇತ್ರ ಗ್ರಾಮೀಣ ಭಾಗದ ಪ್ರತಿ ಹಳ್ಳಿಗೂ ರಸ್ತೆ ನಿರ್ಮಾಣ, ಶುದ್ಧ ಕುಡಿಯುವ ನೀರಿನ ಘಟಕ, ಸರ್ಕಾರಿ
ಇಂಜಿನಿಯರಿಂಗ್ ಕಾಲೇಜು, ಜಿ.ಟಿ.ಟಿ.ಸಿ ತರಭೇತಿ ಕೇಂದ್ರ, ಸರ್ಕಾರಿ ಬಸ್ ನಿಲ್ದಾಣ, ಸರ್ಕಾರಿ ಪದವಿ
ಪೂರ್ವ ಕಾಲೇಜು, ಬಿ.ಎಂ.ಜಿ.ಎಚ್.ಎಸ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪ್ರವಾಸಿ ಮಂದಿರ, ಹೆಗ್ಗೆರೆ
ತಾಯಮ್ಮ ಪ್ರೌಢಶಾಲೆ, ತಾಲೂಕು ವಿಭಾಗೀಯ ಕಚೇರಿ, ಜಿಲ್ಲಾ ಪಂಚಾಯಿತಿ ಕಟ್ಟಡ, ಲೋಕೋಪಯೋಗಿ
ಇಲಾಖೆ ಕಟ್ಟಡ, ತುರವನೂರು ಗ್ರಾಮದಲ್ಲಿ ತೆರವಾಗಿದ್ದ ಪದವಿ ಪೂರ್ವ ಕಾಲೇಜು ಮರುಸ್ಥಾಪನೆ ಮತ್ತು
ಅಭಿವೃದ್ಧಿ, ಹಾಗೂ ನಿರ್ಮಾಣ ಹಂತದಲ್ಲಿರುವ ಕ್ರೀಡಾಂಗಣ, ಜವಳಿ ಪಾರ್ಕ್, ನಗರಸಭೆ ಕಟ್ಟಡ, ಚಳ್ಳಕೆರೆ
ಪಟ್ಟಣದಲ್ಲಿ ರಸ್ತೆ ಅಗಲಿಕರಣ, ಹಾಗೂ ವಿವಿಧ ಸಮುದಾಯದ ಸಮುದಾಯ ಭವನಗಳು, ಹೀಗೆ ಅಭಿವೃದ್ಧಿ
ಪರ್ವ ನಿರ್ಮಿಸಿರುವ ಟಿ.ರಘುಮೂರ್ತಿಯವರಿಗೆ ಸಚಿವ ಸಂಪುಟದಲ್ಲಿ ಅವಕಾಶ ಮಾಡಿಕೊಡಬೇಕೆಂದು
ಮತ್ತು ಸೂಕ್ತ ಇಲಾಖೆಯನ್ನು ನೀಡಿದ್ದೇ ಆದರೆ ಕಾಂಗ್ರೇಸ್ ಪಕ್ಷದ ಕೀರ್ತಿಯನ್ನು ಕರ್ನಾಟಕ ಸರ್ಕಾರದ
ಘನತೆಯನ್ನು ಉತ್ತುಂಗಕ್ಕೆ ತೆಗೆದುಕೊಂಡು ಹೋಗುವುದರಲ್ಲಿ ಸಂಶಯವಿಲ್ಲ.
ಟಿ.ರಘುಮೂರ್ತಿಯವರು ಸುಮಾರು 2012 ರಿಂದ ತಾಲ್ಲೂಕಿನಲ್ಲಿ ಪಕ್ಷ ಸಂಘಟನೆ ಹಾಗೂ ಆ ಸಂದರ್ಭದಲ್ಲಿ
ವಿರೋದ ಪಕ್ಷದ ನಾಯಕರಾಗಿದ್ದ ಶ್ರೀ ಸಿದ್ದರಾಮಯ್ಯನವರ ಬೆಂಗಳೂರಿನಿಂದ ಬಳ್ಳಾರಿಯವರಿಗೆ ಪಾದ
ಯಾತ್ರೆ, ಹಾಗೂ ಕಾಂಗ್ರೇಸ್ ಡಿಜಿಟಲ್ ಸದಸ್ಯತ್ವ ನೊಂದಣಿ ಹಾಗೂ ಐತಿಹಾಸಿಕ ಭಾರತ ಜೋಡೋ
ಯಾತ್ರೆಯ ಚಳ್ಳಕೆರೆ ಸಮಾವೇಶವನ್ನು ಯಶಸ್ವಿಗೊಳಿಸಿರುತ್ತಾರೆ.
ಇವರಿಗೆ, ಸಚಿವರ ಸ್ಥಾನ ನೀಡಿದರೆ
ಮುಂಬರುವ ಸ್ಥಳೀಯ ಚುನಾವಣೆಗಳನ್ನು ಕಾಂಗ್ರೆಸ್ ಪಕ್ಷ ಗೆಲ್ಲಲು ಅನುಕೂಲವಾಗುತ್ತದೆ. ಚಿತ್ರದುರ್ಗ
ಜಿಲ್ಲೆಯಲ್ಲಿ ರಾಜಕೀಯವಾಗಿ ಕಾಂಗ್ರೇಸ್ ಪಕ್ಷದಲ್ಲಿ ಶಿಸ್ತಿನ ಸಿಪಾಯಿ ಎಂದು ಹೆಸರು ಪಡೆದಿರುವ ಶಾಸಕ
ರಘುಮೂರ್ತಿಯವರಿಗೆ ಚಿತ್ರದುರ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಬಲಿಷ್ಟವಾಗುತ್ತದೆ. ಹಾಗೂ ಬಯಲು ಸೀಮೆ,
ಅತಿ ಹಿಂದುಳಿದ ಬಹುತೇಕ ಪ.ಜಾತಿ, ಪ.ಪಂಗಡ ಬುಡಕಟ್ಟು ಸಮುದಾಯ ಹೆಚ್ಚಿರುವ ಚಿತ್ರದುರ್ಗ ಜಿಲ್ಲೆಗೆ
ಮಧ್ಯ ಕರ್ನಾಟಕದಲ್ಲಿ ಧೀಮಂತ ನಾಯಕ ನಿಜಲಿಂಗಪ್ಪನವರಂತಹ ಮತ್ತೊಬ್ಬ ನಾಯಕನನ್ನು ಮರು
ಸ್ಥಾಪಿಸಿದಂತಾಗುತ್ತದೆಂದು ಈ ಮೂಲಕ ಕಾಂಗ್ರೇಸ್ ಹೈಕಮಂಡ್ ಹಾಗೂ ಮುಖ್ಯಮಂತ್ರಿಗಳಾದ
ಸಿದ್ದರಾಮಯ್ಯನವರು ಹಾಗೂ ಕೆ.ಪಿ.ಸಿ.ಸಿ. ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಇವರಲ್ಲಿ ಮಾಧ್ಯಮದ
ಮುಖಾಂತರ ಒತ್ತಾಯಿಸುತ್ತೇವೆ ಎಂದರು.
ಇದೇ ಸಂಧರ್ಭದಲ್ಲಿ ದೇವರಾಜ್, ಜಗಲೂರಸ್ವಾಮಿ, ಪ್ರದೀಪ್ ಗೌಡ, ಹನುಮಂತಪ್ಪ ಎಲ್, ಸಿ.ರಾಜಶೇಖರ್ ಇತರರು ಇದ್ದರು.

