ಜಿಲ್ಲೆಯ ಎಲ್ಲಾ ರೈತ ಬಾಂಧವರು ಈ ಕಾಲಾವಕಾಶವನ್ನು
ಚಳ್ಳಕೆರೆ :
ಕಳೆದ ಹಲವಾರು ವರ್ಷಗಳಿಂದ ಪಹಣಿಯಲ್ಲಿ ಲೋಪ ದೋಷಗಳು ಇರುವಂತಹ ರೈತರು ಸೆಪ್ಟೆಂಬರ್ ಒಂದರಿಂದ 15ನೇ ತಾರೀಖಿನ ವರೆಗೆ ಪಹಣಿ ವಿಶೇಷ ಆಂದೋಲನದ ಮೂಲಕ ಎಲ್ಲಾ ರೈತರು ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿ ಪಹಣಿಯಲ್ಲಿರುವಂತ ಲೋಪದೋಷಗಳನ್ನು ಸರಿಪಡಿಸಿಕೊಳ್ಳುವಂತೆ ಚಿತ್ರದುರ್ಗ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಕರೆ ನೀಡಿದ್ದಾರೆ.
ಜಿಲ್ಲೆಯ ಎಲ್ಲಾ ರೈತ ಬಾಂಧವರು ಈ ಕಾಲಾವಕಾಶವನ್ನು ಸದುಪಯೋಗಪಡಿಸಿಕೊಂಡು ಎಲ್ಲ ರೈತರು ಪಹಣಿಯಲ್ಲಿರುವಂತಹ ಸಣ್ಣ ಪುಟ್ಟ ಲೋಪದೋಷಗಳನ್ನು ಸರಿಪಡಿಸಿಕೊಳ್ಳಲು ತಾಲೂಕ ಕಚೇರಿ ಎಸಿ. ಕಚೇರಿ ವರೆಗೂ ಅಲಿಯುವಂತಹ ರೈತರ ಕಾಲ ವಿಳಂಬ ಆಗುವುದನ್ನು ತಪ್ಪಿಸಲು ನಿಮ್ಮ ಸ್ಥಳೀಯವಾಗಿ ತಾಲೂಕು ಕಚೇರಿಯಲ್ಲಿ ಅರ್ಜಿ ಸಲ್ಲಿಸಿದರೆ ನಮ್ಮ ವಿಶೇಷ ಆಂದೋಲನದಲ್ಲಿ ಪರಿಗಣಿಸಿ ಅತಿ ತುರ್ತಾಗಿ ಪಹಣಿಯಲ್ಲಿರುವಂತಹ ಹೆಸರು ಕೈ ಬಿಟ್ಟಿರುವುದು, ಹೆಸರುಗಳು ತಿದ್ದುಪಡಿ ಮಾಡಲು ಅವಕಾಶವಿರುತ್ತದೆ ಆದ್ದರಿಂದ ಎಲ್ಲಾ ರೈತ ಕುಲಬಾಂಧವರು ಇದರ ಸದುಪಯೋಗಪಡಿಸಿಕೊಳ್ಳಬೇಕು ಹಾಗೂ ಪೌತಿಖಾತೆಗೆ ಸಂಬಂಧಿಸಿದಂತೆ ಕುಟುಂಬದ ಆಸ್ತಿ ಹೊಂದಿರುವಂತಹ ವ್ಯಕ್ತಿಗಳು ಮೃತರಾದ ಸಂದರ್ಭದಲ್ಲಿ ಅವರ ಮರಣ ದಾಖಲೆ ಪ್ರಮಾಣ ಪತ್ರವನ್ನು ಜೊತೆಗೆ ಸಂಬಂಧಪಟ್ಟ ದಾಖಲಾತಿಗಳನ್ನು ಲಗತಿಸುತ್ತದೆ ಅವರಿಗೆ ಕಾಲಮಿತಿಯೊಳಗೆ ಅರ್ಜಿ ವಿಲೇವಾರಿ ಮಾಡಲು ಅವಕಾಶ ನೀಡಲಾಗುವುದು ಆದ್ದರಿಂದ ಜಿಲ್ಲೆಯ ಎಲ್ಲಾ ರೈತ ಬಾಂಧವರು ಈ ಕೂಡಲೇ ತಾಲೂಕ ಕಚೇರಿಗೆ ಭೇಟಿ ನೀಡಿ ತಮ್ಮ ಪಹಣಿಯಲ್ಲಿರುವಂತ ಲೋಪದೋಷಗಳನ್ನು ಸರಿಪಡಿಸಿಕೊಳ್ಳಲು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ.

