ಚಳ್ಳಕೆರೆ :
ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸಿದಾಗ ತಾವು ಏನನ್ನಾದರೂ ಸಾಧಿಸಬೇಕು ಎಂಬ ಛಲವನ್ನು ಇಟ್ಟುಕೊಳ್ಳಬೇಕು ಕ್ರೀಡೆಗಳಲ್ಲಿ ಸೋಲು ಗೆಲುವು ಸಹಜವಾದದ್ದು ಎಲ್ಲವನ್ನು ಸಮಾನವಾಗಿ ಸ್ವೀಕರಿಸಿ ಕ್ರೀಡಾ ಸ್ಪೂರ್ತಿಯನ್ನು ಮೆರೆಯಬೇಕು ಎಂದು ಹೊಂಗಿರಣ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಅಧ್ಯಕ್ಷ ರಾಜೇಶ್ ಗುಪ್ತ ಹೇಳಿದರು.
ಅವರು ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಸಮೀಪ ಅಶೋಕ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಆಯೋಜಿಸಿದ್ದ ಕರ್ನಾಟಕ ಅಮೇಚ್ಯೂರ್ ಸೆಪೆಕ್ ಟಕ್ರಾ ಅಸೋಸಿಯೇಷನ್ ದಾವಣಗೆರೆ, ಹಾಗೂ ಚಿತ್ರದುರ್ಗ ಜಿಲ್ಲಾ ಸೆಪೆಕ್ ಟಕ್ರಾ ಅಸೋಸಿಯೇಷನ್ ಚಳ್ಳಕೆರೆ , ಸಹಯೋಗದಲ್ಲಿ ಮಾಕಂಸ್ ರೋಟರಿ ವಿದ್ಯಾಸಂಸ್ಥೆ, ಎಸ್ ಆರ್ ಎಸ್ ಹೆರಿಟೇಜ್ ಸ್ಕೂಲ್ ಹಾಗೂ ಹೊಂಗಿರಣ ಇಂಟರ್ನ್ಯಾಷನಲ್ ಸ್ಕೂಲ್, ಚಳ್ಳಕೆರೆ ಇವರ ಸಂಯುಕ್ತ ಆಶ್ರಯದಲ್ಲಿ 12ನೇ ರಾಜ್ಯಮಟ್ಟದ ಸೆಪೆಕ್ ಚಾಂಪಿಯನ್ ಶಿಪ್ ಸಬ್ ಜೂನಿಯರ್ ಅಂಡ್ ಸೀನಿಯರ್ ವಿಭಾಗದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ತಾಲೂಕಿನಲ್ಲಿ ರಾಜ್ಯ ಹಾಗೂ ರಾಷ್ಟ್ರದ ಮಟ್ಟದ ಕ್ರೀಡಾಪಟುಗಳು ಇರುವುದು ಸಂತಸ , ಇಂತಹ ಪ್ರತಿಭೆಗಳನ್ನು ಸ್ಪೂರ್ತಿಯಾಗಿಸಿಕೊಂಡು ಇಂದು ನಡೆಯುತ್ತಿರುವ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳು ಜಯಗಳಿಸಿ ರಾಷ್ಟ್ರಮಟ್ಟದಲ್ಲಿ ತಾಲೂಕಿಗೆ ಕೀರ್ತಿ ತರುವಂತಾಗಬೇಕು ಎಂದು ಆಶಿಸಿದರು.
ಅಶೋಕ್ ಸ್ಪೋರ್ಟ್ಸ್ ಕ್ಲಬ್ ನ ಸಂಸ್ಥಾಪಕ ಅಧ್ಯಕ್ಷ ನಾರಾಯಣ್ ರಾವ್ ಮಾತನಾಡಿ
ಕ್ರೀಡೆಗಳು ಯಶಸ್ವಿಯಾಗಿ ಜರುಗಲು ಕ್ರೀಡಾಪಟುಗಳು ಹಾಗೂ ಶಾಲೆಗಳ ದೈಹಿಕ ಶಿಕ್ಷಕರು ಸಹಕರಿಸಬೇಕು ತೀರ್ಪುಗಾರರ ತೀರ್ಪನ್ನು ಒಮ್ಮತದಿಂದ ಸ್ವೀಕರಿಸಬೇಕು ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ ಕ್ರೀಡಾ ಮನೋಭಾವದಿಂದ ಕ್ರೀಡಾಕೂಟವನ್ನು ಯಶಸ್ವಿಗೊಳಿಸಬೇಕು ಕ್ರೀಡಾಪಟುಗಳಿಗೆ ಕ್ರೀಡೆಗಳಲ್ಲಿ ಕೇವಲ ಗೆಲುವೊಂದೇ ಮಾನದಂಡವಲ್ಲ ಕ್ರೀಡೆಯಲ್ಲಿ ಭಾಗವಹಿಸುವುದು ಅತ್ಯಂತ ಪ್ರಮುಖವಾಗಿರುತ್ತದೆ ಎಂದು ತಿಳಿಸಿದರು
ಇದೇ ಸಂಧರ್ಭದಲ್ಲಿ
ಅಸೋಸಿಯೇಷನ್ ಕಾರ್ಯದರ್ಶಿಯಾದ ಕೇಶವ ಸೂರ್ಯವಂಶಿ, ಜಂಟಿ ಕಾರ್ಯದರ್ಶಿ ಮಂಜುನಾಥ್, ಅಶೋಕ ಸ್ಪೋರ್ಟ್ಸ್ ಕ್ಲಬ್ ಸಂಸ್ಥಾಪಕರಾದ ನಾರಾಯಣ್ ರಾವ್, ಎಂ ಎಸ್ ಶ್ರೀನಿವಾಸ್, ಎಸ್ ಅರ್ ಎಸ್ ಹೆರಿಟೇಜ್ ಶಾಲೆಯ ಮುಖ್ಯೋಪಾಧ್ಯಾಯರಾದ ಬಿ.ಎಸ್. ವಿಜಯ್ , ನಿವೃತ್ತ ದೈಹಿಕ ಶಿಕ್ಷಕರಾದ ನಾಗಭೂಷಣ್, ಹೊಂಗಿರಣ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯ ನಿರ್ದೇಶಕರಾದ ಡಿ ಶಿವಪ್ರಸಾದ್, ಮುಖ್ಯೋಪಾಧ್ಯಾಯರಾದ ಡಿವಿಎನ್ ಪ್ರಸಾದ್, ಆಡಳಿತ ಅಧಿಕಾರಿಗಳಾದ ಮಹಾದೇವ , ಆಮ್ ಆದ್ಮಿ ಪಕ್ಷದ ತಾಲೂಕು ಅಧ್ಯಕ್ಷ ಬಿ ಪಾಪಣ್ಣ, ಶ್ರೀನಿವಾಸ್ ಇತರರು ಕ್ರೀಡಾ ಪಟುಗಳು ಇದ್ದರು.


