ತಳಕು :: ಚಿಕ್ಕವರಿಗೆ ಚಿಕ್ಕವನಾಗಿ ದೊಡ್ಡವರಿಗೆ ದೊಡ್ಡವನಾಗಿ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಮತ್ತು ಕಾರ್ಯಕರ್ತರಿಗೆ ನಾನು ಆಭಾರಿಯಾಗಿರುತ್ತೇನೆ ಎಂದು ಡಾ ಯೋಗೇಶ್ ಬಾಬು ಹೇಳಿದರು.
ಅವರು ತಳಕು ಹೋಬಳಿಯ ವರವಲಯದಲ್ಲಿ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಡಾಕ್ಟರ್ ಯೋಗೇಶ್ ಬಾಬು ರವರ 39ನೇ ವರ್ಷದ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ಆರೋಗ್ಯ ಶಿಬಿರ ವಿವಿಧ ಕ್ಷೇತ್ರಗಳಲ್ಲಿ ಸಾಧಕರಿಗೆ ಸನ್ಮಾನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಚಾಲನೆ ನೀಡಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನ ಕುರಿತು ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ಬರದ ನಾಡು ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರ ಬಹಳ ಹಿಂದುಳಿದ ಪ್ರದೇಶ 2023ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ನಮ್ಮ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರವನ್ನ ನೀರಾವರಿ ನೀರಾವರಿ ಕ್ಷೇತ್ರವನ್ನಾಗಿ ಮಾಡುವುದಾಗಿ ಬರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮೊಳಕಾಲ್ಮುರು ಪಟ್ಟಣದ ಪಟೇಲ್ ಪಾಪನಾಯಕ, ಎಂ ಡಿ ಮಂಜುನಾಥ್, ರಾಂಪುರ ಅಶೋಕ್ , ಮೊಳಕಾಲ್ಮೂರು ಬ್ಲಾಕ್ ಅಧ್ಯಕ್ಷರು ಕಲಿಮುಲ್ಲಾ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಜಯಮ್ಮ ಬಾಲರಾಜ್, ತಳಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ರೆಡ್ಡಿ, ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಬಾಲರಾಜ್, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಪಟೇಲ್ ತಿಪ್ಪೇಸ್ವಾಮಿ ಎನ್ ಮಹದೇಪುರ, ಎನ್ ದೇವರಹಳ್ಳಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಕಾಟಯ್ಯ, ಬ್ಯಾಂಕ್ ಸೂರನಾಯಕ, ತಿಮ್ಮಪ್ಪನಹಳ್ಳಿ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಬಂಡೆ ಕಪಿಲೆ ಓಬಣ್ಣ, ಘಟಪರ್ತಿ ಗ್ರಾಮ ಪಂಚಾಯತಿ ಸದಸ್ಯ ವೀರಭದ್ರಪ್ಪ, ದೇವರೆಡ್ಡಿಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬೊಮ್ಮಣ್ಣ, ತೊರೆಕೋಲಮ್ಮನಹಳ್ಳಿ ಜವಳಿ ಗಂಗಣ್ಣ, ಜವಳಿ ಕೃಷ್ಣಪ್ಪ, ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಆರ್ ಬಸಪ್ಪ, ಕೆಜಿ ತಿಪ್ಪಣ್ಣ, ಜಗದೀಶ್ ಓಬಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿಓಬಿಸಿ, ರಾಯಪುರ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಲ್ಲಿಕಾರ್ಜುನ,ದೊಡ್ಡ ಉಳ್ಳಾತಿ ಹರೀಶ್, ಯಾದಗಟ್ಟೆ ಪಾಲಯ್ಯ, ಗೌಡಗೆರೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಟಿ ರಂಗಪ್ಪ ,ಎಚ್ ಬಿ ತಿಪ್ಪೇಸ್ವಾಮಿ ಜೋಗಿಹಟ್ಟಿ, ವೆಂಕಟೇಶ್ ಜೋಗಿಹಟ್ಟಿ, ತೊರೆಕೋಲಮ್ಮನಹಳ್ಳಿ ಮಂಜು ಜವಳಿ, ಜಿ ಟಿ ತಿಪ್ಪೇಸ್ವಾಮಿ ಗೌಡಗೆರೆ, ಇಮ್ರಾನ್ ಬಿಜಿಕೆರೆ, ಜೆ ಮಲ್ಲಿಕಾರ್ಜುನ್ ಗ್ರಾಮ ಪಂಚಾಯತಿ ಸದಸ್ಯರು ಉಪ್ಪಾರಹಟ್ಟಿ, ಹಾಗೂ ಮೊಳಕಾಲ್ಮುರಿನ ಎಲ್ಲಾ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಪಂಚಾಯತಿಯ ಸರ್ವ ಸದಸ್ಯರು, ಹಾಗೂ ಮುಖಂಡರುಗಳು, ಕಾಂಗ್ರೆಸ್ ಪದಾಧಿಕಾರಿಗಳು ಭಾಗವಹಿಸಿದ್ದರು.