ಪುನೀತ್ ರಾಜಕುಮಾರ್ ಅಭಿಮಾನಿ ಬಳಗದಿಂದ ಸರ್ಕಾರಿ ಶಾಲೆಗೆ ಸುಣ್ಣಬಣ್ಣ ಜಿ ಪಿ ನವೀನ್ ಘಟಪರ್ತಿ

ತಳಕು ::ಹೋಬಳಿಯ ಘಟಪರ್ತಿ ವ್ಯಾಪ್ತಿಯ ಹೊಸ ಕಪಿಲೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಪುನೀತ್ ರಾಜಕುಮಾರ್ ಅಭಿಮಾನಿ ಬಳಗದಿಂದ ಸುಣ್ಣ ಬಣ್ಣ ಹಾಗೂ ಅಂಬೇಡ್ಕರ್ ಮಹತ್ವ ಗಾಂಧೀಜಿ ಸುಭಾಷ್ ಚಂದ್ರ ಬೋಸ್ ಜವಾಹರ್ ನೆಹರು ಬಿತ್ತಿ ಚಿತ್ರಗಳ ಬಿಡಿಸಿ ಕೊಡಲಾಗಿದೆ ಎಂದು ಪುನೀತ್ ರಾಜಕುಮಾರ್ ಅಭಿಮಾನಿ ಬಳಗದ ಅಧ್ಯಕ್ಷರಾದ ಜಿ ಪಿ ನವೀನ್ ಘಟಪರ್ತಿ ರವರು ಹೇಳಿದ್ದಾರೆ

ಘಟಪರ್ತಿ ಪಂಚಾಯಿತಿ ವ್ಯಾಪ್ತಿಯ ಹೊಸ ಕಪಿಲೆ ಶಾಲೆಯ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಸಸಿಗೆ ನೀರಿರುವ ಮುಖಾಂತರ ಉದ್ಘಾಟಿಸಿ ಚಾಲನೆ ನೀಡಿ ಮಾತನಾಡಿ
ಕರ್ನಾಟಕದ ಯುವರತ್ನ ದಿವಂಗತ ಪುನೀತ್ ರಾಜಕುಮಾರ್ ರವರು ತಮ್ಮಜೀವಿತ ಅವಧಿಯಲ್ಲಿ ಸರ್ಕಾರಿ ಶಾಲೆ, ವೃದ್ಧಾಶ್ರಮ ಬಡವರಿಗೆ ದೀನ ದಲಿತರಿಗೆ ಸಾಕಷ್ಟು ಸಹಕಾರವನ್ನು ನೀಡಿದ್ದಾರೆ ಅವರ ಕಾರ್ಯ ಶ್ಲಾಘನೀಯ
ಈ ನಿಟ್ಟಿನಲ್ಲಿ ಪುನೀತ್ ರಾಜಕುಮಾರ್ ರವರ ಅಭಿಮಾನಿ ಬಳಗದಿಂದ ಘಟಪರ್ತಿ ವ್ಯಾಪ್ತಿಯ ಹೊಸ ಕಪಿಲೆ ಶಾಲೆಗೆ ಸುಣ್ಣಬಣ್ಣವನ್ನ ಬಳಸಿ ತೆರಳು ತೋರಣಗಳಿಂದ ಶೃಂಗರಿಸಿ ಚಂದದ ರೂಪ ಕೊಡಲಾಗಿದೆ ಎಂದು ಪುನೀತ್ ರಾಜಕುಮಾರ್ ಅಭಿಮಾನಿ ಬಳಗದ ಜಿ ಪಿ ನವೀನ್ ಘಟಪರ್ತಿ ರವರು ತಿಳಿಸಿದರು.

ಇವೇಳೆ ನಲಗೇತನಹಟ್ಟಿ ಗಾಯಕ ಕೆ ಟಿ ಮುತ್ತುರಾಜ್ ಪುನೀತ್ ರಾಜಕುಮಾರ್ ರವರ ಅಭಿನಯದ ಚಿತ್ರದ ಗೀತೆಗಳನ್ನು ಹಾಡಿ ವಿದ್ಯಾರ್ಥಿಗಳಿಗೆ ಮನರಂಜನೆ ನೀಡಿದರು.

ಇದೇ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಮಂಜಪ್ಪ, ಶಿಕ್ಷಕರಾದ ಪ್ರಹ್ಲಾದ್, ಸಿ ಆರ್ ಪಿ ಶಿವಣ್ಣ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಸತ್ಯನಾರಾಯಣ ರೆಡ್ಡಿ, ಬಸವರಾಜ್, ರವಿಕುಮಾರ್ ಕಾಮಸಮುದ್ರ, ಶಿವಣ್ಣ ಉಪ್ಪಾರಹಟ್ಟಿ, ಶಾಲಾ ಸಿಬ್ಬಂದಿಗಳು ಹಾಗೂ ಪೋಷಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು

About The Author

Namma Challakere Local News
error: Content is protected !!