ಚಳ್ಳಕೆರೆ : ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ ವಯೋನಿವೃತ್ತಿ,ಮುಂಬಡ್ತಿ ಹೊಂದಿದವರಿಗೆ ಬೀಳ್ಕೊಡುಗೆ ಹಾಗೂ ಕಾಲೇಜಿಗೆ ವರ್ಗಾವಣೆಯಾಗಿ ಬಂದಿರುವ ಪ್ರಾಂಶುಪಾಲರು ಮತ್ತು ಉಪನ್ಯಾಸಕರಿಗೆ ಸ್ವಾಗತ ಸಮಾರಂಭದಲ್ಲಿ ಸುಮಾರು 22 ವರ್ಷಗಳ ಕಾಲ ಭೌತಶಾಸ್ತ್ರ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಜಿ.ಟಿ ಪುಷ್ಪಲತಾ ವೀರೇಶ್ ರವರನ್ನು ಕಾಲೇಜ್ ವತಿಯಿಂದ ಸನ್ಮಾನಿಸಿ ” ರಾಜಮಾತೆ ” ಎಂಬ ಬಿರುದು ಕೊಡಲಾಯಿತು.

ಸನ್ಮಾನಿತ ಜಿ.ಟಿ ಪುಷ್ಪಲತಾ ಮಾತನಾಡಿ ನನ್ನ ಉಪನ್ಯಾಸಕ ವೃತ್ತಿ ನನಗೆ ತೃಪ್ತಿ ತಂದಿದೆ. ಈ ಕಾಲೇಜು ನನಗೆ ಎಲ್ಲಾ ರೀತಿಯ ಗೌರವವನ್ನು ದೊರಕಿಸಿಕೊಟ್ಟಿದೆ. ನನ್ನ ಸೇವಾ ಅವಧಿಯಲ್ಲಿ ಪ್ರಾಮಾಣಿಕ ಕರ್ತವ್ಯ ನಿರ್ವಹಿಸಿ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಮತ್ತು ಫಲಿತಾಂಶ ಹೆಚ್ಚಿಸುವುದಕ್ಕೆ ಶ್ರಮಿಸಿದ್ದೇನೆ ಎಂದರು. ನನ್ನನ್ನು ಗೌರವಿಸಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ ) ಉಪ ನಿರ್ದೇಶಕ ಕೆ. ತಿಮ್ಮಯ್ಯ ಮಾತನಾಡಿ ಬೌತಶಾಸ್ತ್ರ ಅಂದರೆ ಪುಷ್ಪಲತಾ ಪುಷ್ಪಲತಾ ಅಂದರೆ ಭೌತಶಾಸ್ತ್ರ ಎಂದು ಬಣ್ಣಿಸಿ
ವೃತ್ತಿ ಜೀವನದಲ್ಲಿ ಸಾಕಷ್ಟು ಸವಾಲುಗಳಿವೆ ಆ ಸವಾಲುಗಳನ್ನು ಹೆದರಿಸಿದಾಗ ಮಾತ್ರ ನಾವು ಉತ್ತಮ ವ್ಯಕ್ತಿಯಾಗಿ ಹೊರಹೊಮ್ಮುತ್ತೇವೆ ಅದರಲ್ಲಿ ಪುಷ್ಪಲತಾ ಸಹ ಒಬ್ಬರು ಎಂದರು. ನನ್ನ ಅದೃಷ್ಟ ಆರಂಭ ಮುತ್ತು ಮುಕ್ತಾಯದ ಕಾಲೇಜು ಅಂದರೆ ಅದು ಚಳ್ಳಕೆರೆ ಕಾಲೇಜು ಎಂದು ಹೇಳಿ ಈಗ ಕಾಲೇಜು ಜೀವನ ಸ್ಪರ್ಧ ಜೀವನವಾಗಿದೆ
ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಹತ್ತಿರವಾದಾಗ ಮಾತ್ರ ಫಲಿತಾಂಶ ಹೆಚ್ಚಾಗುತ್ತದೆ.

ನಾನು ಈ ವರ್ಷ ಫಲಿತಾಂಶ ಹೆಚ್ಚಿಸುವುದಕ್ಕಾಗಿ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದ್ದೇನೆ ಹಾಗೂ ಇಲಾಖೆ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಿದ್ದೇನೆ ಹಾಗಾಗಿ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಸಹಕರಿಸಬೇಕೆಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಪ್ರಾಚಾರ್ಯ ಗೋವಿಂದಪ್ಪ ಮಾತನಾಡಿ ಇದೊಂದು ಭಾವನಾತ್ಮಕ ಕಾರ್ಯಕ್ರಮ ಬಡತನದಿಂದ ಬಂದವರು ಶಿಕ್ಷಕರಾಗುತ್ತಾರೆ ಯಾವ ಶಿಕ್ಷಕರು ಮಕ್ಕಳಿಗೆ ಚೆನ್ನಾಗಿ ಪಾಠ ಮಾಡುತ್ತಾರೆ ಅವರ ಮಕ್ಕಳು ಸಹ ಬುದ್ದಿವಂತರಾಗುತ್ತಾರೆ ಎಂದು ತಿಳಿಸಿ ಜಪಾನ್ ದೇಶದ ಶಿಕ್ಷಣವನ್ನು ಸ್ಮರಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಉಪನ್ಯಾಸಕರ ಸಂಘದ ಮಾಜಿ ಅಧ್ಯಕ್ಷ ಎಸ್. ಲಕ್ಷ್ಮಣ ಮಾತನಾಡಿ ನಾನು ಮತ್ತು ಪುಷ್ಪಾಲರವರು ಅರೆ ಕಾಲಿಕ ಉಪನ್ಯಾಸಕ ವೃತ್ತಿಯಿಂದ ಖಾಯಂ ಉಪನ್ಯಾಸಕರಾಗಿ ನೇಮಕಗೊಂಡವರು, ಸರ್ಕಾರ ಅರೆ ಕಾಲಿಕ ಉಪನ್ಯಾಸಕರನ್ನು ಖಾಯಂ ಗೊಳಿಸುವುದಕ್ಕಾಗಿ ಮಾಡಿದ ಹೋರಾಟಗಳನ್ನು ನೆನಪಿಸಿ ಇವರ ನಿವೃತ್ತಿ ಜೀವನ ಸುಖಕರವಾಗಿರಲೆಂದು ಹಾರೈಸಿದರು.

ಇದೇ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ಉಪ ನಿರ್ದೇಶಕರಾಗಿ ಪದೋನ್ನತಿ ಹೊಂದಿದ ಕೆ ತಿಮ್ಮಯ್ಯ ರವರು ತಾನು ಅಧಿಕಾರ ವಹಿಸಿಕೊಂಡ ಒಂದೇ ತಿಂಗಳಿನಲ್ಲಿ ಜಿಲ್ಲೆಯ ಎಲ್ಲಾ ತಾಲೂಕಿನ ಪ್ರಾಚಾರ್ಯರು ಮತ್ತು ಉಪನ್ಯಾಸಕರೂಗಳನ್ನು ಸಂಪರ್ಕಿಸಿ ಫಲಿತಾಂಶ ಹೆಚ್ಚಿಸುವುದಕ್ಕೆ ಮಾರ್ಗದರ್ಶನ ನೀಡಿ ಅಲ್ಪಾವಧಿಯಲ್ಲಿಯೇ ಮಾನ್ಯ ನಿರ್ದೇಶಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ ಎಂದರು.

ಈ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಅಧಿಕಾರ ವಹಿಸಿಕೊಂಡಿರುವ ಕೆ.ಎಚ್. ರಾಜು ರವರು ಹೊಸ ಹೊಸ ಆಲೋಚನೆಗಳನ್ನು ಮತ್ತು ಕಾರ್ಯಪ್ರವೃತ್ತಿಯನಿಟ್ಟು ಕೊಂಡು ಬಂದಿದ್ದಾರೆ ಉಪನ್ಯಾಸಕರು ಸಹಕರಿಸಬೇಕೆಂದು ತಿಳಿಸಿದರು.

ಪ್ರಾಚಾರ್ಯರಾಗಿ ಪದೋನ್ನತಿ ಹೊಂದಿದ ಕೆ.ಎನ್. ವಸಂತ್ ಕುಮಾರ್ ಮತ್ತು ಟಿ.ಲಲಿತಮ್ಮ ಕಾಲೇಜಿನ ಸೇವಾ ಅವಧಿಯನ್ನು ಜ್ಞಾಪಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಕೆ.ಹೆಚ್. ರಾಜು ರವರು ತನ್ನ ಅಧ್ಯಕ್ಷತೆ ನುಡಿಯಲ್ಲಿ ಬಡ್ತಿ, ವರ್ಗಾವಣೆ ಮತ್ತು ನಿವೃತ್ತಿ ಇವು ಸರ್ಕಾರಿ ನೌಕರರ ಸಂಗಮ ಎಂದರು. ಉಪನ್ಯಾಸಕರು ಮತ್ತು ಪ್ರಾಚಾರ್ಯರ ಸಹಕಾರದಿಂದ ಸಾಧನೆ ಮಾಡಬಹುದು ನನ್ನ ಸೇವಾವಧಿಯಲ್ಲಿ ಕಾಲೇಜಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಉಪ ನಿರ್ದೇಶಕರಾಗಿ ಮುಂಬಡ್ತಿ ಹೊಂದಿದ ಕೆ ತಿಮ್ಮಯ್ಯ ಪ್ರಾಚಾರ್ಯರುಗಳಾಗಿ ಮುಂಬಡ್ತಿ ಹೊಂದಿದ ಕೆ.ಎನ್.ವಸಂತ್ ಕುಮಾರ್ , ಟಿ.ಲಲಿತಮ್ಮ ರವರನ್ನು ಕಾಲೇಜ್ ವತಿಯಿಂದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ನಂತರ ಇದೇ ಸಂದರ್ಭದಲ್ಲಿ ಕಾಲೇಜಿಗೆ ವರ್ಗಾವಣೆಯಾಗಿ ಬಂದಿರುವ ಪ್ರಾಂಶುಪಾಲ ಕೆ.ಹೆಚ್. ರಾಜು ಮತ್ತು ಉಪನ್ಯಾಸಕರುಗಳಾದ ಆಶಾ ರಾಣಿ ಹನುಮಂತಪ್ಪ ಸಹೀದ ಬೇಗಂ ರವರುಗಳನ್ನು ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ ಪ್ರಾಚಾರ್ಯ ಭೀಮರೆಡ್ಡಿ ಸರ್ಕಾರಿ ನೌಕರರ ಸಂಘದ ತಾಲೂಕು ಉಪಾಧ್ಯಕ್ಷ ಎಂ ಶ್ರೀನಿವಾಸ್ ಕಾಲೇಜಿನ ಸಾಂಸ್ಕೃತಿಕ ಚಟುವಟಿಕೆಗಳ ಕಾರ್ಯದರ್ಶಿ ಸಾಹಿತಿ ನಾಗರಾಜ್ ಬೆಳಗಟ್ಟ ಯುವ ಸಂಸತ್ ಅಧ್ಯಕ್ಷ ಎಚ್ ಆರ್ ಜಬಿವುಲ್ಲ ಎನ್ಎಸ್ಎಸ್ ಅಧಿಕಾರಿ ಶಾಂತಕುಮಾರಿ ಎಚ್ ಆರ್ ಅಭಿವುಲ್ಲ ಡಾ. ರೇಖಾ ಹೀನ ಕೌಸರ್ ಜಾನಕಮ್ಮ ಚಂದ್ರಶೇಖರ್ ಕುಮಾರಸ್ವಾಮಿ ನಾಗಭೂಷಣಸ್ವಾಮಿ ತಿಪ್ಪೇಸ್ವಾಮಿ ಜಗದೀಶ್ ಪಾಲಯ್ಯ ವೀರಣ್ಣ ರಾಮಾಂಜನೇಯ ಗ್ರಂಥಪಾಲಕ ನರಸಿಂಹಮೂರ್ತಿ ಇತರರು ಉಪಸ್ಥಿತರಿದ್ದರು

About The Author

Namma Challakere Local News
error: Content is protected !!