ಚಳ್ಳಕೆರೆ :
ಮೊಳಕಾಲ್ಮೂರು ತಾಲೂಕು ರಾಂಪುರ ಗ್ರಾಮದ ಎಸ್. ಪಿ.ಎಸ್ ಆರ್ ಪದವಿ ಪೂರ್ವ ಕಾಲೇಜು ವತಿಯಿಂದ ಏರ್ಪಡಿಸಿದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಂದ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಹಾಗೂ ಕ್ರೀಡೆ ಸಾಂಸ್ಕೃತಿಕ ಚಟುವಟಿಕೆ ಮತ್ತು ಎನ್ ಎಸ್ ಎಸ್ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಶಿಕ್ಷಣ ಇಲಾಖೆ ( ಪದವಿ ಪೂರ್ವ) ಉಪ ನಿರ್ದೇಶಕರಾದ ಕೆ.ತಿಮ್ಮಯ್ಯ ಉದ್ಘಾಟನೆ ನೆರವೇರಿಸಿ ನಂತರ ಮಾತನಾಡಿದರು.

ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ಸ್ವಾಗತ ಮಾಡುವುದು ತುಂಬಾ ಸಂತೋಷ. ಈ ವರ್ಷ ಜಿಲ್ಲೆಯ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಪ್ರವೇಶ ಕಡಿಮೆಯಾಗಿದೆ ಆದರೆ ಗಡಿ ಭಾಗದಲ್ಲಿರುವ ಈ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪ್ರವೇಶ ಹೆಚ್ಚು ಇರುವುದನ್ನು ನೋಡಿ ತುಂಬಾ ಸಂತೋಷವಾಯಿತು ಇದಕ್ಕೆ ಆಡಳಿತ ಮಂಡಳಿ ಮತ್ತು ಕಾಲೇಜಿನ ಪ್ರಾಚಾರ್ಯರು ಹಾಗೂ ಸಿಬ್ಬಂದಿ ಕಾರಣ ಎಂದರು.

ಪಿಯುಸಿ ಶಿಕ್ಷಣ ಬಹಳ ಮಹತ್ವವಾದದ್ದು ಇದನ್ನು ಸದು ಪಯೋಗಪಡಿಸಿಕೊಂಡು ಜೀವನ ರೂಪಿಸಿಕೊಳ್ಳಬೇಕೆಂದು ತಿಳಿಸಿದರು.
ಥಾಮಸ್ ಆಳ್ವ ಎಡಿಸನ್ ರವರ ಸಾಧನೆ ಮತ್ತು ಸಂಶೋಧನೆ ಬಗ್ಗೆ ತಿಳಿಸಿದರು.

ಉಪನ್ಯಾಸಕರು ಕೇವಲ ಮಾರ್ಗದರ್ಶಕರು ಜೀವನ ರೂಪಿಸಿಕೊಳ್ಳುವವರು ನೀವೇ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಸರ್ಕಾರ ಸಾಕಷ್ಟು ಸೌಲಭ್ಯಗಳನ್ನು ಒದಗಿಸಿದೆ ಆ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಜೀವನ ರೂಪಿಸಿಕೊಳ್ಳಬೇಕೆಂದರು.

ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಬೋಧನೆ ಮೂಲಕ ಹತ್ತಿರವಾಗಬೇಕು ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ಕಾಣಬೇಕು. ನಾನು ಈ ವರ್ಷ ಜಿಲ್ಲೆಯ ಪಿಯುಸಿ ಫಲಿತಾಂಶ ಕ್ರಮ ಸಂಖ್ಯೆ 20 ರ ಒಳಗೆ ಬರಬೇಕೆಂದು ನನ್ನ ಆಸೆಯಾಗಿದೆ ಹಾಗಾಗಿ ನಾನು ಈಗಾಗಲೇ ಎಲ್ಲಾ ತಾಲೂಕುಗಳಲ್ಲಿ ಪ್ರಾಚಾರ್ಯರ ಮತ್ತು ಉಪನ್ಯಾಸಕರ ಸಂವಾದ ಕಾರ್ಯಕ್ರಮಗಳನ್ನು ಮಾಡಿ ಜಿಲ್ಲೆಯ ಫಲಿತಾಂಶ ಹೆಚ್ಚಿಸುವುದಕ್ಕೆ ಪ್ರಯತ್ನಿಸುತ್ತಿದ್ದೇನೆ ಎಂದರು.

ಸಂಸ್ಥೆಯ ಕೋಶದ ಅಧ್ಯಕ್ಷ ಗಂಗಾಧರಪ್ಪ ಮಾತನಾಡಿ ನಮ್ಮ ಸಂಸ್ಥೆ ಸೇವಾ ಮನೋಭಾವ ಸಂಸ್ಥೆಯಾಗಿದೆ ಆ ದೃಷ್ಟಿಯಿಂದ ಗಡಿ ಭಾಗದಲ್ಲಿ ಈ ಕಾಲೇಜನ್ನು ಪ್ರಾರಂಭಿಸಿದ್ದೇವೆ ಹಾಗಾಗಿ ವಿದ್ಯಾರ್ಥಿಗಳು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದರು
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜಿಲ್ಲಾ ಉಪನ್ಯಾಸಕರ ಸಂಘದ ಮಾಜಿ ಅಧ್ಯಕ್ಷ ಎಸ್ ಲಕ್ಷ್ಮಣ ಮಾತನಾಡಿ ಅಂತರ್ ರಾಜ್ಯ ಅಂತರ ಜಿಲ್ಲೆ ಗಡಿ ಭಾಗದ ಶಿಕ್ಷಣವನ್ನು ನೀಡುವ ಸಂಸ್ಥೆ ಜಿಲ್ಲೆಯಲ್ಲಿ ಇದೆ ಅಂದರೆ ಅದು ಶ್ರೀ ಜಟ್ಟಿಂಗಿ ರಾಮೇಶ್ವರ ವಿದ್ಯಾಸಂಸ್ಥೆ ಯಾಗಿದೆ ಎಂದರು.

ಪ್ರತಿಭೆಗಳು ಗುಡಿಸಿಲಲ್ಲಿ ಹುಟ್ಟಿ ಅರಮನೆಯಲ್ಲಿ ಸಾಯುತ್ತವೆ ಎಂಬಂತೆ ಈ ಕಾಲೇಜಿನ ಕೀರ್ತಿ ರಾಷ್ಟ್ರ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಬೆಳೆಗಿದೆ. ತಾಲೂಕು ಆರ್ಥಿಕವಾಗಿ ಬಡವಾಗಿದ್ದರೂ ಸಹ ಇತಿಹಾಸ ಶಿಲಾ ಶಾಸನ ಮತ್ತು ಸ್ಮಾರಕಗಳಲ್ಲಿ ಶ್ರೀಮಂತಿಕೆಯನ್ನು ಹೊಂದಿದೆ ಎಂದರು

ಜಿಲ್ಲಾ ಪ್ರಾಚಾರ್ಯರ ಸಂಘದ ಮಾಜಿ ಅಧ್ಯಕ್ಷ ದೇವೇಂದ್ರಪ್ಪ ಮಾತನಾಡಿ ಒಬ್ಬ ಗಂಡು ಒಬ್ಬರನ್ನು ಸಾಕಬಹುದು ಆದರೆ ಒಂದು ಹೆಣ್ಣು ಇಡೀ ಕುಟುಂಬವನ್ನೇ ಸಾಕುತ್ತದೆ ಎಂದು ತಿಳಿಸಿ ವಿದ್ಯಾರ್ಥಿನಿಯರ ಶಿಕ್ಷಣ ಹೆಚ್ಚಾಗಬೇಕೆಂದು ತಿಳಿಸಿದರು
ಚಳ್ಳಕೆರೆ ಬ್ರಹ್ಮಕುಮಾರಿ ಸಮಾಜದ ಅಕ್ಕನವರು ವಿದ್ಯಾರ್ಥಿಗಳಿಗೆ ಬೋಧನೆ ನೀಡಿದರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಕಾರ್ಯದರ್ಶಿ ಶಂಕರ್ ರೆಡ್ಡಿ ತಮ್ಮ ಅಧ್ಯಕ್ಷತೆ ನುಡಿಗಳಲ್ಲಿ ನಾವು ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಸಹಾಯವಾಗಲೆಂದು ಈ ವಿದ್ಯಾ ಸಂಸ್ಥೆಯನ್ನು ಪ್ರಾರಂಭಿಸಿದ್ದೇವೆ ಇದರ ಸದುಪಯೋಗ ತಾವುಗಳು ಪಡೆದುಕೊಳ್ಳಬೇಕೆಂದರು.

ವಿದ್ಯಾರ್ಥಿಗಳು ದೇಶದ ಶಕ್ತಿ ಉತ್ತಮ ವಿದ್ಯಾರ್ಥಿಗಳನ್ನು ರೂಪಿಸುವುದಕ್ಕೆ ನುರಿತ ಉತ್ತಮ ಉಪನ್ಯಾಸಕರನ್ನು ನೇಮಕ ಮಾಡಿಕೊಂಡಿದ್ದೇವೆ ಎಂದರು. ಇದು ಸಾರ್ವಜನಿಕ ಸಂಸ್ಥೆ ಅರ್ಹತೆ ಇದ್ದವರಿಗೆ ಮಾತ್ರ ಆಡಳಿತ ಮಂಡಳಿಯಲ್ಲಿ ಕೆಲಸ ಮಾಡುವ ಅವಕಾಶ ಸಿಗುತ್ತದೆ ಎಂದು ಹೇಳಿ ಇದೇ ಸಂದರ್ಭದಲ್ಲಿ ಕಾಲೇಜಿನ ಮೂಲಭೂತ ಸಮಸ್ಯೆಗಳ ಬಗ್ಗೆ ಮಾನ್ಯ ಉಪ ನಿರ್ದೇಶಕರಿಗೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಲಿಂಗಾರೆಡ್ಡಿ, ಗಂಗಾಧರಪ್ಪ ಶ್ರೀಕಾಂತ್ ರೆಡ್ಡಿ ಬಸವ ರೆಡ್ಡಿ ರಾಜು ಮೋಹನ್ ಕಾಲೇಜಿನ ಪ್ರಾಚಾರ್ಯ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ. ತಿಮ್ಮಣ್ಣ ಉಪನ್ಯಾಸಕರಾದ ಬೋರಯ್ಯ , ಶಕೀಲ್, ವಿಶಾಲಾಕ್ಷಿ ಸಿದ್ದಪ್ಪ ವಸಂತ್ ಜಗನ್ ಮುಂತಾದ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು

About The Author

Namma Challakere Local News
error: Content is protected !!