ಚಳ್ಳಕೆರೆ : ಜನನಾಯಕ ಎಂದೇ ಬಿಂಬಿತವಾದ ಕೆ.ಸಿ.ವೀರೇಂದ್ರ ಪಪ್ಪಿ ರವರ 48 ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಅಭಿಮಾನಿ ಬಳಗ, ಜಿಲ್ಲಾ ಖೋ-ಖೋ ಅಸೋಷಿಯನ್ ಹಾಗೂ ಅಶೋಕ ಸ್ಪೋಟ್ಸ್ ಕ್ಲಬ್ ವತಿಯಿಂದ ಕ್ರೀಡಾಪಟುಗಳಿಗೆ ಸನ್ಮಾನ ಸಮಾರಂಭ ಆಯೋಜಿಸಲಾಗಿದೆ.
ಇದೇ ಜೂನ್ 30 ರಂದು ಯುವ ನಾಯಕ ಕೆ.ಸಿ.ವೀರೇಂದ್ರ ಪಪ್ಪಿರವರ ಜನ್ಮ ದಿನಾಚರಣೆ ಅಂಗವಾಗ ಸ್ನೇಹಿತರ ಬಳಗವೊಂದು ವ್ಯಾಸಂಗ ಮಾಡುವ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ.90 ರಷ್ಟು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಆಯೋಜಿಸಲಾಗಿದೆ.
ಹಾಗೇಯೇ ವಿವಿಧ ಕ್ರಿಡೆಗಳಲ್ಲಿ ಜಿಲ್ಲಾ ಮಟ್ಟದಿಂದ ರಾಜ್ಯ, ರಾಷ್ಟ್ರ , ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಕ್ರೀಡೆಗಳಲ್ಲಿ ಪ್ರತಿನಿಧಿಸಿರುವ ಜಿಲ್ಲೆ ಹಾಗೂ ಚಳ್ಳಕೆರೆ ತಾಲೂಕಿನ ಕ್ರೀಡಾ ಪಟು ಸಾಧಕರಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ ಏರ್ಪಡಿಸಲಾಗಿದೆ.
ಆಸಕ್ತಿ ಕ್ರೀಡಾ ಪಟುಗಳು ಹಾಗೂ ಪ್ರತಿಭಾ ಪುರಸ್ಕಾರಕ್ಕೆ ಒಳಪಟ್ಟ ವಿದ್ಯಾರ್ಥಿಗಳು ಈ ಕೆಳಕಂಡ ದೂರವಾಣಿ ಸಂಖ್ಯೆಗೆ ಹೆಸರು ನೊಂದಾಯಿಸಿಕೊಳ್ಳಲು ಕೋರಿದೆ.
ಆಯೋಜಕರು–
ಕರ್ನಾಟಕ ಖೋ-ಖೋ ಸಂಸ್ಥೆಯ ಜಂಟಿ ಕಾರ್ಯದರ್ಶಿ ಶ್ರೀನಿವಾಸ್ – 9620019405
ಪಪ್ಪಿ ಅಭಿಮಾನಿ ಬಳಗದ ನಟರಾಜ್ -9620565350
ಖೋ ಖೋ ತರಬೇತುದಾರ ದೊಡಗಟ್ಟ ನಾಗರಾಜ್ -9902780722
ಶಿವಕುಮಾರ್, ನವೀನ, ಶ್ರೀಧರ್ ಯಾದವ್, ಭೋರೇಶ್, ಶ್ರೀನಿವಾಸ್ ಇತರರು ಪಾಲ್ಗೊಂಡಿದ್ದರು.
ವರದಿ-
ರಾಮುದೊಡ್ಮನೆ- 9740799983