ಚಳ್ಳಕೆರೆ :
ದಾರಕ್ಕೆ ಕಟ್ಟಿದ ಸೂಜಿಯು ಕಳೆದುಹೋಗದಂತೆ ರಕ್ಷಿಸಿದಂತೆಯೇ, ಸ್ವಯಂ ಅಧ್ಯಯನದಲ್ಲಿ ತೊಡಗಿರುವ ವ್ಯಕ್ತಿಯನ್ನು ಕಳೆದುಹೋಗದಂತೆ ರಕ್ಷಿಸಲಾಗುತ್ತೆ
ಸತ್ಯವನ್ನು ತಿಳಿಯಲು, ಚಂಚಲ ಮನಸ್ಸನ್ನು ನಿಯಂತ್ರಿಸಲು ಮತ್ತು ಆತ್ಮವನ್ನು ಶುದ್ಧೀಕರಿಸಲು ಸಹಾಯ ಮಾಡುವದನ್ನು ಜ್ಞಾನ ಎಂದು ಕರೆಯಲಾಗುತ್ತದೆ ಎಂದು ಶಾಸಕಟಿ.ರಘುಮೂರ್ತಿ ಹೇಳಿದರು.
ಅವರು ನಗರದ ತಾಲೂಕು ಕಛೇರಿಯಲ್ಲಿ ಶ್ರೀ ಮಹಾವೀರ ಜಯಂತಿಯಲ್ಲಿ ಭಾವಚಿತ್ರಕ್ಕೆ ಪುಷ್ಪರ್ಚಾನೆ ಮಾಡಿ ಮಾತನಾಡಿದರು,
ಪ್ರತಿಯೊಂದು ಜೀವಿಯ ಬಗ್ಗೆ ಸಹಾನುಭೂತಿ ಹೊಂದಿದ ಮಹಾವೀರರು, ದ್ವೇಷವು ವಿನಾಶಕ್ಕೆ ಕಾರಣವಾಗುತ್ತದೆ
ಎಲ್ಲಾ ಮಾನವರು ತಮ್ಮದೇ ಆದ ದೋಷಗಳಿಂದಾಗಿ ಶೋಚನೀಯರಾಗಿದ್ದಾರೆ. ಅವರು ತಮ್ಮದೇ ಆದ ತಪ್ಪುಗಳನ್ನು ಸರಿಪಡಿಸುವ ಮೂಲಕ ಸಂತೋಷವಾಗಿರಬಹುದು
ಆತ್ಮವು ಏಕಾಂಗಿಯಾಗಿ ಬರುತ್ತದೆ, ಏಕಾಂಗಿಯಾಗಿ ಹೋಗುತ್ತದೆ, ಯಾರೂ ಅದರೊಂದಿಗೆ ಬರುವುದಿಲ್ಲ ಮತ್ತು ಯಾರೂ ಅದರ ಸ್ನೇಹಿತರಾಗುವುದಿಲ್ಲ
ಮಹಾವೀರ ಜಯಂತಿ ಜೈನ ಸಮುದಾಯದ ಪ್ರಮುಖ ಹಬ್ಬವಾಗಿದೆ ಎಂದರು.
ತಹಶಿಲ್ದಾರ್ ರೇಹಾನ್ ಪಾಷ ಮಾತನಾಡಿ,
ಮಹಾವೀರ್ ಜಯಂತಿಯನ್ನು ದೇಶಾದ್ಯಂತ ಆಚರಿಸಲಾಗುತ್ತದೆ. ಭಗವಾನ್ ಮಹಾವೀರರು ಜೈನ ಧರ್ಮದ ಕೊನೆಯ ಅಧ್ಯಾತ್ಮಿಕ ನಾಯಕರಾಗಿದ್ದರು ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ದಂಡಾಧಿಕಾರಿ ಗಳಾದ ರೇಹಾನ್ ಪಾಷಾ, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಗಳಾದ ಶಶಿಧರ, ನಗರಸಭೆ ಅಧ್ಯಕ್ಷರಾದ ಮಂಜುಳಾ ಆರ್ ಪ್ರಸನ್ನಕುಮಾರ್, ಉಪಾಧ್ಯಕ್ಷರಾದ ಸುಮಾ ಭರಮಯ್ಯ, ಸದಸ್ಯರುಗಳು, ನಾಮ ನಿರ್ದೇಶನ ಸದಸ್ಯರುಗಳು, ತಾಲ್ಲೂಕು ಪಂಚಾಯತ್ ಕೆಡಿಪಿ ನಾಮ ನಿರ್ದೇಶನ ಸದಸ್ಯರಾದ ರಮೇಶ್, ತಾಲ್ಲೂಕು ಗ್ಯಾರೆಂಟಿ ಸಮಿತಿಯ ಅಧ್ಯಕ್ಷರಾದ ಗದ್ದಿಗೆ ತಿಪ್ಪೇಸ್ವಾಮಿ, ಜೈನ ಸಮುದಾಯದ ಮುಖಂಡರುಗಳು, ಕಾರ್ಯಕರ್ತರು, ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

