ಕಡಿಮೆ ತೂಕ ಹೊಂದಿದ ಮಕ್ಕಳಿಗೆ ದಾವಣಗೆರೆ ನ್ಯೂಟ್ರಾ ಮಿಕ್ಸ್ ಮತ್ತು ಮೊಟ್ಟೆ ಆಹಾರ ಫುಡ್ ಪಾಕೆಟ್ ವಿತರಣೆ ತಾಲೂಕು ಮೇಲ್ವಿಚಾರಿಕಿ ಸೌಮ್ಯ

ನಾಯಕನಹಟ್ಟಿ:: ಅಪೌಷ್ಟಿಕ ಮಕ್ಕಳಿಗೆ ತೂಕ ಕಡಿಮೆ ಒಂದಿದ್ದರೆ ಅಂತ ಮಕ್ಕಳಿಗೆ ಬಲಿಷ್ಠವಾಗಿ ಬೆಳೆಯಲು ನ್ಯೂಟ್ರೋಮಿಕ್ಸ್ ಪದಾರ್ಥವನ್ನು ನೀಡಲು ಮುಂದಾಗಬೇಕು ಎಂದು ತಾಲೂಕು ಮೇಲ್ವಿಚಾರಿಕಿ ಸೌಮ್ಯ ಹೇಳಿದರು.

ಅವರು
ಪಟ್ಟಣದ, ಎಫ್ .ಅಂಗನವಾಡಿ ಕೇಂದ್ರದಲ್ಲಿ ಅಪೌಷ್ಟಿಕ ಮಕ್ಕಳಿಗೆ ದಾವಣಗೆರೆ ನ್ಯೂಟ್ರೂಮಿಕ್ಸ್ ಮತ್ತು ಮೊಟ್ಟೆ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಚಾಲನೆ ನೀಡಿ ಮಾತನಾಡಿ ನ್ಯೂಟ್ರೋಮಿಕ್ಸ್ ಪದಾರ್ಥ ನೀಡಲು ಉದ್ದೇಶವೇನೆಂದರೆ ವಿಪರೀತ ತೂಕ ಕಡಿಮೆ ಹೊಂದಿದ ಮಗು ಬೆಳವಣಿಗೆ ಆಗಲು ಅನುಕೂಲವಾಗುತ್ತದೆ ಪೋಷಕರು ತಮ್ಮ ಮಗುವಿಗೆ ನಮ್ಮ ಅಂಗನವಾಡಿ ಕೇಂದ್ರದಲ್ಲಿ ನೀಡುವ ನ್ಯೂಟ್ರೋ ಮಿಕ್ಸ್ ಪದಾರ್ಥವನ್ನು ಪಡೆದುಕೊಂಡು ಮನೆಯಲ್ಲಿ ಬಿಸಿ ನೀರು ಅಥವಾ ತುಪ್ಪದಲ್ಲಿ ಹುಂಡಿ ಮಾಡಿ ಮಗುವಿಗೆ ತಿನ್ನಿಸಿದರೆ ಮಗು ಬೆಳವಣಿಗೆಯಾಗಿ ರಕ್ತ ಹೆಚ್ಚಾಗುತ್ತದೆ ಎಂದು ತಿಳಿಸಿದರು.

ಇದೇ ವೇಳೆ ವಿನಾಯಕ ಮಹಿಳಾ ಸಂಘ ಮತ್ತು ಗಾಯತ್ರಿ ಸ್ವಸಾಯ ಸಂಘದ ವತಿಯಿಂದ ಸ್ಲೇಟು ಮತ್ತು ಚಾಪೀಸ್ ಅಂಗನವಾಡಿ ಮಕ್ಕಳಿಗೆ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾಜಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷರ ಪತಿ ಕೌಸರ್ ಭಾಷಾ, ಅಂಗನವಾಡಿ ಶಿಕ್ಷಕಿ ನಾಗರತ್ನಮ್ಮ, ಶಿಲ್ಪ, ಜ್ಯೋತಿ ಗಾಯತ್ರಿ, ಸರೋಜಮ್ಮ, ಜಯಲಕ್ಷ್ಮಿ, ಅಂಗನವಾಡಿ ಶಿಕ್ಷಕಿ ಸರಸ್ವತಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು

Namma Challakere Local News
error: Content is protected !!