ಚಳ್ಳಕೆರೆ : ಲಾರಿ ಓಮಿನಿ ಮುಖ ಮುಖಿ ಡಿಕ್ಕಿ ಓರ್ವ ಸಾವು
ನಗರದ ಬೆಂಗಳೂರು ರಸ್ತೆಯ ಎಲ್ ಪಿ.ಗೇಟ್ ಸಮೀಪ ಬೆಳಗೆರೆ ಮಾರ್ಗವಾಗಿ ಬಂದ ಓಮಿನಿ ಕಾರು ಚಳ್ಳಕೆರೆ ಮಾರ್ಗವಾಗಿ ವೇಗವಾಗಿ ಬಂದ ಲಾರಿ ಎರಡು ಮುಖ ಮುಖಿಯಾಗಿ ಡಿಕ್ಕಿ ಒಡೆದ ಪರಿಣಾಮ ಓಮಿನಿಯಲ್ಲಿದ್ದ ಮೂರು ಜನರಲ್ಲಿ ಚಾಲಕ ಶ್ರೀಪತಿ 35 ವರ್ಷ ಎಂಬುವವರು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ.
ಇನ್ನು ಪಾತಲಿಂಗಪ್ಪ ,ಕಿಶೋರ್ ಇಬ್ಬರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸ್ಥಳಕ್ಕೆ ಚಳ್ಳಕೆರೆ ಪೊಲೀಸ್ ಠಾಣೆಯ ವ್ಯಾಪ್ತಿಯ ಅಧಿಕಾರಿಗಳು ಬೇಡಿನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.