ಚಳ್ಳಕೆರೆ : ಗೌರಸಮುದ್ರ ಗ್ರಾಮ ಪಂಚಾಯತಿ ಅಭಿವೃದ್ಧಿಯ ನೋಡಿ ಸಹಿಸಿಕೊಳ್ಳಲಾರದ ಕೆಲವು ದೃಷ್ಠ ಮನಸ್ಥಿತಿವುಳ್ಳ ವ್ಯಕ್ತಿಗಳು ಸುಖ ಸುಮ್ಮನೆ ನಮ್ಮ ಬಗ್ಗೆ ಗ್ರಾಮ ಪಂಚಾಯಿತಿಯ ಬಗ್ಗೆ ಅಪಪ್ರಚಾರ ಮಾಡುತ್ತಾ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿರುವುದು ಸತ್ಯಕ್ಕೆ ದೂರವಾದ ಮಾತು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ. ಓಬಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರು ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಚಳ್ಳಕೆರೆ ತಾಲೂಕಿನ ಗೌರಸಮುದ್ರ ಗ್ರಾಮ ಪಂಚಾಯಿತಿಯಲ್ಲಿ ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಗ್ರಾಮ ಪಂಚಾಯತಿಯನ್ನು ಅಭಿವೃದ್ಧಿಯತ್ತ ಕೊಂಡುಯ್ಯುತ್ತಿರುವ ಸರ್ವ ಸದಸ್ಯರು ಗೌರಸಮುದ್ರ ಗ್ರಾಮ ಇಡೀ ಜಿಲ್ಲೆಗೆ ಮಾದರಿ ಗ್ರಾಮ ಪಂಚಾಯತಿಯವನ್ನಾಗಿ ಮಾಡಲು ಮುಂದಾಗಿದ್ದೆವೆ.
ಗ್ರಾಮದಲ್ಲಿ ವಿನೂತನವಾದಂತ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಗ್ರಾಮ ಅಭಿವೃದ್ಧಿ ಪತದತ್ತ ಸಾಗುತ್ತಿದೆ ಇನ್ನು ಗ್ರಾಮ ಪಂಚಾಯತಿಯ ಅನುದಾನದ ಅಡಿಯಲ್ಲಿ, ಗ್ರಾಮ ಪಂಚಾಯತಿ ವ್ಯಾಪ್ತಿಯ ಯಾವುದೇ ಗ್ರಾಮಗಳಲ್ಲಿ ಯಾವುದೇ ಸಮುದಾಯಕ್ಕೆ ಸೇರಿದ ವ್ಯಕ್ತಿ ಸಾವನಪ್ಪಿದರೆ ಅವರ ಅಂತ್ಯಸಂಸ್ಕಾರಕ್ಕೆ ಗ್ರಾಮ ಪಂಚಾಯಿತಿ ನಿಧಿಯಲ್ಲಿ 5000ಗಳನ್ನು ಕೊಡುವಂತಹ ಮಹತ್ವದ ಕಾರ್ಯ ಈಗಾಗಲೇ ಹಲವು ದಿನಗಳಿಂದ ಕಾರ್ಯಗತಗೊಂಡಿದೆ.
ಅದರಂತೆ ಗ್ರಾಮೀಣ ಪ್ರದೇಶದಲ್ಲಿ ಗುಳೇ ಹೋಗುವಂತ ಜನರನ್ನು ಮನಗಂಡು ಸ್ಥಳದಲ್ಲೇ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೂಲಿ ನೀಡುವ ಮೂಲಕ ದುಡಿಯುವ ಕೈಗಳಿಗೆ ಕೆಲಸ ನೀಡಿ ಗುಳೆ ಪದ್ದತಿಯನ್ನು ತಪ್ಪಿಸಿದೆ.
ಇಂತಹ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಜನಪರವಾದ ಕೆಲಸ ಮಾಡಿದರೆ ವಿನಹಾಕರಣ ಕೆಲವು ಕಿಡಿಗೇಡಿಗಳು ನಮ್ಮ ಸದಸ್ಯರ ಬಗ್ಗೆ ಅಧ್ಯಕ್ಷರ ಬಗ್ಗೆ ಗ್ರಾಮ ಪಂಚಾಯಿತಿ ಬಗ್ಗೆ ಅಪಪ್ರಚಾರ ಮಾಡುತ್ತಾ ಸುಖ ಸುಮ್ಮನೆ ಅನುದಾನ ಅಕ್ರಮ ಎಸಿಗಿದ್ದಾರೆ ಎಂದು ನರೇಗಾ ಯೋಜನೆ ದುರ್ಬಳಕೆಯಾಗಿದೆ ಎಂದು ಅಪಪ್ರಚಾರ ಮಾಡಿ ಮೇಲಾಧಿಕಾರಿಗಳಿಗೆ ದೂರು ನೀಡುವುದು ಸತ್ಯಕ್ಕೆ ದೂರವಾಗಿದೆ.
ಅದರಂತೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಾಡಿಸಿದಂತಹ ಎಲ್ಲಾ ಕಾಮಗಾರಿಗಳಿಗೂ ಸಂಬಂಧ ಪಟ್ಟ ಇಲಾಖೆ ವತಿಯಿಂದ ಅಧಿಕಾರಿಗಳು ಪರಿಶೀಲಿಸಿ ತದನಂತರ ಅನುದಾನ ಬಿಡುಗಡೆ ಮಾಡಿದ್ದಾರೆ ವಿನಹ ಯಾವುದೇ ವಯಕ್ತಿಕವಾಗಿ, ಅಧ್ಯಕ್ಷರಾಗಲಿ ಸದಸ್ಯರಾಗಲಿ ದುರ್ಬಳಕೆ ಮಾಡಿಕೊಂಡಿಲ್ಲ ಇದರಿಂದ ಯಾವುದೇ ತನಿಖೆ ನಡೆಸಿದರು ಕೂಡ ಎಲ್ಲಾ ಸದಸ್ಯರು ನಾವು ಸಿದ್ದರಿದ್ದೇವೆ ಎಂದು ಆರೋಪ ಮಾಡಿದಂತಹ ವ್ಯಕ್ತಿಗಳಿಗೆ ಪ್ರತ್ಯಾರೋಪ ಮಾಡಿದ್ದಾರೆ.
ಇನ್ನು ಗೌರಸಮುದ್ರ ಮಾರಮ್ಮ ದೇವಿ ನೆಲೆಸಿದ ತುಮಲು ಪ್ರದೇಶದಲ್ಲಿ ನಾಲ್ಕು ದಿಕ್ಕುಗಳಿಗೆ ನಾಲ್ಕು ಹೈಟೆಕ್ ಶೌಚಾಲಯಗಳನ್ನು ನಿರ್ಮಿಸುವುದರ ಮೂಲಕ ಭಕ್ತಾದಿಗಳಿಗೆ ಪುಣ್ಯದ ಕಾರ್ಯ ಮಾಡುತ್ತಿದ್ದೇವೆ,
ಜೊತೆಯಲ್ಲೇ ಶ್ರೀ ಗೌರಸಮುದ್ರ ಮಾರಮ್ಮ ದೇವಿಯ ಕಲ್ಯಾಣಿಯನ್ನು ನಿರ್ಮಿಸುವುದರ ಮೂಲಕ ದೇವಿಯ ಕೃಪೆಗೆ ಪಾತ್ರರಾಗಿದ್ದೇವೆ.
ಅದರಂತೆ ಗೌರಸಮುದ್ರ ಗ್ರಾಮದ ಪುಣ್ಯ ಸ್ಥಳಕ್ಕೆ ಹೊರ ರಾಜ್ಯಗಳಿಂದ ಬಂದಂತಹ ಭಕ್ತಾಧಿಗಳಿಗೆ ತುಂಬಾ ಕಿರಿಕಿರಿ ಮಾಡುವಂತ ಗ್ರಾಮದ ಮಧ್ಯೆ ಇರುವ ಮಧ್ಯಪಾನದ ಅಂಗಡಿ ತೆರವಿಗೆ ಸುಮಾರು ದಿನಗಳ ಕಾಲ ಸತ್ಯಾಗ್ರಹ ನಡೆಸಿ ತೆರುವು ಮಾಡುವಲ್ಲಿ ಎಲ್ಲಾ ಸದಸ್ಯರು ಶ್ರಮವಿದೆ.
ಇನ್ನೂ ಗ್ರಾಮದ ಪಕ್ಕದಲ್ಲಿ ಇರುವ ಹಳೆಯದಾದ ಪ್ರಯಾಣಿಕರ ಯಮ ಕೂಪವಾದ ಪಾಳುಬಿದ್ದ ಬಾವಿ ತೆರವಿಗೆ ಎಷ್ಟೊ ಹೋರಾಟಗಳು ನಡೆದವು ಕೊನೆಗೆ ಪಾಳು ಬಿದ್ದ ಬಾವಿ ಮುಚ್ಚಿಸಿ ವಾಹನ ಸವಾರರಿಗೆ ಅನುಕೂಲ ಮಾಡಿಕೊಟ್ಟಿದೆ.
ಆದರೆ ಕೆಲವು ಕಿಡಿಗೇಡಿಗಳು ಅಪಪ್ರಚಾರ ಮಾಡುತ್ತ ನಮ್ಮ ಬಗ್ಗೆ ಇಲ್ಲ ಸಲದ ಹೇಳಿಕೆಗಳನ್ನು ನೀಡುತ್ತಾ ದೂರುಗಳನ್ನು ಕೊಡುತ್ತಾ ಇರುವುದು ಸರಿಯಲ್ಲ ಯಾವುದೇ ದೂರು ನೀಡಿದರು ನಾವು ಆ ದೂರಿಗೆ ಪ್ರತ್ಯುತ್ತರು ನೀಡಲು ಸಿದ್ದರಿದ್ದೇವೆ ಯಾವುದೇ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿಲ್ಲ ಪ್ರಸ್ತುತ ಬ್ಯಾಂಕ್ ಖಾತೆಯಲ್ಲಿ 73,70,392 ರೂ. ಇದೆ. ನಾವು ತನಿಖೆಗೂ ಸಿದ್ದರಿದ್ದೆವೆ ಎಂದಿದ್ದಾರೆ.
ಇದೇ ಸಂದರ್ಭದಲ್ಲಿ ಗ್ರಾಮ
ಪಂಚಾಯಿತಿ ಅಧ್ಯಕ್ಷ ಎಂ.ಓಬಣ್ಣ , ಸದಸ್ಯರಾದ ಶಶಿಕುಮಾರ್, ಎಚ್ಎಂ ಈರಣ್ಣ, ಮಲ್ಲಯ್ಯ, ಮಲ್ಲೇಶಿ, ಬೊಮ್ಮಣ್ಣ, ತಿಪ್ಪೇಸ್ವಾಮಿ, ಹಾಗೂ ಮಾಜಿ ಸದಸ್ಯರು ಹಾಜರಿದ್ದರು

