ಚಳ್ಳಕೆರೆ : ಶಾಲಾ ಶೈಕ್ಷಣಿಕ ಕಾರ್ಯ ಚಟುವಟಿಕೆಗಳಿಗೆ ಹೊಂದಾಣಿಕೆ ಮಾಡಿಕೊಳ್ಳುವ ದೃಷ್ಟಿಯಿಂದ ಅತಿಥಿ ಶಿಕ್ಷಕರ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಹೇಳಿದ್ದಾರೆ.
ತಾಲ್ಲೂಕಿನ ಆದರ್ಶ ವಿದ್ಯಾಲಯದಲ್ಲಿ ಆಯೋಜಿಸಿದ್ದ
ಅತಿಥಿ ಶಿಕ್ಷಕ / ಶಿಕ್ಷಕಿಯರ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು
ಚಳ್ಳಕೆರೆ ತಾಲೂಕಿನಲ್ಲಿ ಶಿಕ್ಷಕರ ಹುದ್ದೆಗಳು ಖಾಲಿ ಇದ್ದು ಈ ಕೊರತೆಯನ್ನು ನೀಗಿಸಲು 149 ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ.
ನೇಮಕವಾಗಿರುವ ಅತಿಥಿ ಶಿಕ್ಷಕರು. Tch, D ed, B ed, ತರಬೇತಿಯನ್ನು ಪಡೆದು ಬಹಳ ವರ್ಷಗಳ ಕಾಲ ತರಗತಿ ಪ್ರಕ್ರಿಯೆಯಿಂದ ದೂರ ಇದ್ದವರಾಗಿತ್ತಾರೆ.
ಪ್ರಯುಕ್ತ ಶೈಕ್ಷಣಿಕ ವರ್ಷದ ಪ್ರಾರಂಭದಿಂದಲೇ
ನೇಮಕಗೊಂಡಿರುವ ಸದರಿ ಅತಿಥಿ ಶಿಕ್ಷಕ /ಶಿಕ್ಷಕಿಯರಿಗೆ ತರಗತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ.
ಎರಡು ವಿಭಾಗಗಳಾಗಿ ಮಾಡಲಾಗಿ 1ರಿಂದ 3ನೇ ತರಗತಿ ನಲಿಕಲಿ ವಿಭಾಗಕ್ಕೂ ಹಾಗೂ 4,5, 6 ಮತ್ತು 7 ನೇ ತರಗತಿಗೆ ಬೋಧಿಸುವ ಶಿಕ್ಷಕ-ಶಿಕ್ಷಕಿಯರನ್ನು ತಂಡವಾರು ವಿಭಾಗಿಸಿ ವಿಷಯವಾರು ತರಬೇತಿಯನ್ನು ತಾಲೂಕಿನ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಆಯೋಜಿಸಲಾಗಿದೆ.
ಹಿಂದಿನ ಎರಡು ವರ್ಷಗಳಲ್ಲಿ ಶಾಲಾ ಪ್ರಕ್ರಿಯೆಯು ಕ್ರಮವಾಗಿ ನಡೆಯದೇ ಇದ್ದ ಪ್ರಯುಕ್ತ ಮಕ್ಕಳಲ್ಲಿ ಉಂಟಾಗಿರುವ ಕಲಿಕಾ ಹಿನ್ನಡೆ & ನಷ್ಟವನ್ನು ಭರಿಸಲು ಶೈಕ್ಷಣಿಕ ಕಾರ್ಯದ ಮುನ್ನಡೆಗೆ ನಮ್ಮ ಶಿಕ್ಷಕರೊಂದಿಗೆ ಸಹಕಾರಿಯಾಗುವ ದೃಷ್ಟಿಯಿಂದ ಸದರಿ ಅತಿಥಿ ಶಿಕ್ಷಕ ಶಿಕ್ಷಿಕರಿಗೆ ತರಬೇತಿಯನ್ನು ಆಯೋಜಿಸಿ ಅವರಿಗೆ ಆತ್ಯವಶ್ಯಕವಾದ ವಿದ್ಯಾ ಪ್ರವೇಶ,ನಲಿ-ಕಲಿ ಮತ್ತು ಕಲಿಕಾ ಚೇತರಿಕೆ ಉಪಕ್ರಮ-2022ರ ತರಬೇತಿ ಕಾರ್ಯಾಗಾರ ಉಪಯುಕ್ತವಾಗಿದೆ ಎಂದರು.