ಚಳ್ಳಕೆರೆ : ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಮನೆಗೊಂದು ಗಿಡ ನೆಡುವ ಕಾರ್ಯಕ್ರಮ
ನಗರದಲ್ಲಿ ಜೂನ್ 12 ರ ಭಾನುವಾರ, ಟಿ.ಆರ್. ನಗರ ಪಾರ್ಕ್ ಡಿ.ವೈ.ಎಸ್.ಪಿ. ಆಫೀಸ್ ಪಕ್ಕ, ಗ್ರೀನ್ ಸ್ಟೆಪ್ಸ್ ಸಂಸ್ಥೆ ಮತ್ತು ನಗರಸಭೆ ಚಳ್ಳಕೆರೆ ಇವರ ಸಹಯೋಗದಲ್ಲಿ ವಿಶ್ವ
ಪರಿಸರ ದಿನಾಚರಣೆ ಪ್ರಯುಕ್ತ ಮನೆ-ಮನೆಗೆ
ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು,
ಸೀಬೆ, ನೇರಳೆ, ಮಾವು,
ಅಂಜೂರ ಮತ್ತು ಸೀತಾಫಲ ಗಿಡಗಳನ್ನು ಉಚಿತವಾಗಿ ನೆಡಲಾಗುವುದು,
ನಗರದ ಆಸಕ್ತರು 8050666070 ತಮ್ಮ ಮನೆಯ ವಿಳಾಸವನ್ನು
ಮೇಸೇಜ್ ಮಾಡುವುದರ ಮೂಲಕ ಮಾಹಿತಿಯನ್ನು ನೀಡಬಹುದು.
ಸಂಘಟಕರು
ಸಂಚಾಲಕರು:
ಸವಿತ, ಹೆಚ್.ಕೆ
ಎಂ. ಶಿವಕುಮಾರ್, ಹೆಚ್.ವಿ. ಕೃಷ್ಣಮೂರ್ತಿ,
ಗಣೇಶ್, ರವಿತೇಜ, ಅಭಿನಂದನ್
ಬಯಲುಸೀಮೆಯನ್ನು ಹಸಿರು ನಾಡನ್ನಾಗಿ
ಮಾಡಲು ಇದೇ ಕಾರ್ಯಕ್ರಮದಲ್ಲಿ ಉದ್ಘಾಟನೆಗೆ ನಗರಸಭೆ ಅಧ್ಯಕ್ಷೆ ಸುಮಕ್ಕ, ಉಪಾಧ್ಯಕ್ಷೆ ಮಂಜುಳಾ, ಸದಸ್ಯ ಎಸ್.ಜಯಣ್ಣ, ವಿಶುಕುಮಾರ್, ಭಾಗವಹಿಸುವರು
ಮುಖ್ಯ ಅತಿಥಿಗಳಾಗಿ ತಹಶೀಲ್ದಾರ್ ಎನ್ ರಘುಮೂರ್ತಿ, ಡಿವೈಎಸ್ಪಿ ಕೆ.ವಿ.ಶ್ರೀಧರ್, ಪೌರಾಯುಕ್ತೆ ಟಿ. ಲೀಲಾವತಿ, ಸಾಮಾಜಿಕ ವಲಯ ಅರಣ್ಯಾಧಿಕಾರಿ ಎಸ್.ಬಾಬು ಭಾಗವಹಿಸುವರು ಎಂದು ಸಂಚಾಲಕರಾದ ಹೆಚ್.ಕೆ.ಸವಿತ ಹೇಳಿದ್ದಾರೆ.