ಚಳ್ಳಕೆರೆ : ಗ್ರಾಮದಲ್ಲಿ ಶಾಂತಿಭಂಗ ಕದಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಚಳ್ಳಕೆರೆ ತಹಶೀಲ್ದಾರ್ ಎನ್ ರಘುಮೂರ್ತಿ ಹೇಳಿದರು

ಅವರು ಹಿರೇಕೆರೆ ಕಾವಲ್ನಲ್ಲಿ ಪರಿಶೀಲನೆ ನಡೆಸಿ ಗ್ರಾಮದಲ್ಲಿ ಸಾಮರಸ್ಯ ಮುಖ್ಯ ಯಾವುದೇ ವಿವಾದ ವಿದ್ದರೂ ಕೂಡಾ ತಾಲೂಕು ಆಡಳಿತ ಬಗೆಹರಿಸುತ್ತದೆ

ಈ ವಿವಾದ ಬಗೆಹರಿಯುವವರೆಗೆ ಯಾರೂ ಕೂಡ ವಿವಾದಿತ ಜಮೀನನ್ನು ಪ್ರವೇಶ ಮಾಡಕೂಡದೆಂದು ಹಾಗೂ ಯಾರೂ ಕೂಡ ಕಾನೂನನ್ನು ಕೈಗೆತ್ತಿಕೊಳ್ಳುಕೂಡದೆಂದು ತಿಳಿಸಿದ್ದಾರೆ.

ಭೀಮ ಗೊಂಡನಹಳ್ಳಿ ಹಾಗೂ ಗೌಡಗೆರೆ ಗ್ರಾಮದ ತಿಪ್ಪಯ್ಯ ಮತ್ತು ರಾಜು ಇವರು ಸಿ ಆರ್ ಪಿ ಸಿ145 ನೇ ವಿಧಿಯನ್ನು ತಕ್ಷಣ ಹಿಂತೆಗೆದುಕೊಳ್ಳವಂತೆ ಒತ್ತಾಯಿಸಿದ್ದ ಮೇರೆಗೆ ವಿವಾದಿತ ಸ್ಥಳಕ್ಕೆ ಆಗಮಿಸಿ ಹಿರೇಕೆರೆ ಕಾವಲ್ ಸರ್ವೇ ನಂಬರ್ 45 ರಲ್ಲಿ ನಾಲ್ಕು ಎಕರೆ ಜಮೀನಿನ ವಿವಾದ ಸಂಬಂಧಿಸಿದಂತೆ ನಾಯಕನಹಟ್ಟಿ ಪೊಲೀಸ್ ಠಾಣೆಯ ಉಪ ನಿರೀಕ್ಷಕರು, ತಹಸೀಲ್ದಾರ್ ರವರಿಗೆ ಪತ್ರ ಬರೆದು ಜಮೀನಿನ ವಿವಾದವು ಗ್ರಾಮದಲ್ಲಿ ಶಾಂತಿ ಭಂಗವನ್ನುಂಟು ಮಾಡುವ ಸಂಭವವಿರುತ್ತದೆ ಹಾಗೂ ಮುಂದಿನ ದಿನಗಳಲ್ಲಿ ಗಲಭೆ ಹಾಗೂ ಪ್ರಾಣ ಹಾನಿಯಾಗುವ ಸಂಭವವಿರುವುದರಿಂದ ವಿವಾದ ಇತ್ಯರ್ಥವಾಗುವವರೆಗೆ ಸದರಿ ಜಮೀನಿನಲ್ಲಿ ಯಾರು ಕೂಡ ಪ್ರವೇಶ ಮಾಡಿದ ಹಾಗೆ ಕ್ರಿಮಿನಲ್ ಪ್ರೊಸೀಜರ್ ಕೋಡ್ ವಿಧಿ 145 ರನ್ವಯ ಕ್ರಮ ಕೈಗೊಳ್ಳುವಂತೆ ಚಳ್ಳಕೆರೆ ತಹಶಿಲ್ದಾರರ ಅವರಿಗೆ ವರದಿ ಮಾಡಿದ್ದರು

ಅದರಂತೆ ಚಳ್ಳಕೆರೆ ತಹಶೀಲ್ದಾರ್ ಹಾಗೂ ದಂಡಾಧಿಕಾರಿಗಳು ಆದೇಶ ಹೊರಡಿಸಿ ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾಗುವವರೆಗೂ ಯಾರೂ ಕೂಡ ಈ ಜಮೀನಿನ ಪ್ರವೇಶ ಮಾಡಕೂಡದೆಂದು ಅಲ್ಲಿಯವರೆಗೆ ಈ ಜಮೀನಿನ ಒಡೆತನವನ್ನು ರಾಜಸ್ವ ನಿರೀಕ್ಷಕರು ನಾಯಕನಹಟ್ಟಿ ಹೋಬಳಿ ಇವರು ನಿರ್ವಹಿಸುವಂತೆ ಆದೇಶ ನೀಡಿದ್ದರು

ಅಂದಿನಿಂದ ಈ ಜಮೀನು ಸರ್ಕಾರದ ಸುಪರ್ದಿಯಲ್ಲಿದ್ದು ಈ ಜಮೀನಿಗೆ ಅಕ್ರಮವಾಗಿ ವಿವಾದಿತ ವ್ಯಕ್ತಿಗಳು ಪ್ರವೇಶ ಮಾಡಿದ್ದಾರೆ ಎಂದು ದೂರು ನೀಡಿದ ಹಿನ್ನೆಲೆಯಲ್ಲಿ ಇಂದು ನಾಯಕನಹಟ್ಟಿ ಪೊಲೀಸ್ ಠಾಣೆಯ ಉಪನಿರೀಕ್ಷಕರು ತಹಶೀಲ್ದಾರ ಎನ್ ರಘುಮೂರ್ತಿ ರವರು ವಿವಾದಿತ ಸ್ಥಳಕ್ಕೆ ಭೇಟಿ ನೀಡಿ ಉಭಯ ಪಾರ್ಟಿಗಳನ್ನು ಕರೆಯಿಸಿ ನ್ಯಾಯಾಲಯದಿಂದ ಅಂತಿಮ ಆದೇಶ ಆಗುವವರಿಗೆ ಯಾರೂ ಕೂಡ ವಿವಾದಿತ ಪ್ರದೇಶವನ್ನು ಪ್ರವೇಶ ಮಾಡಕೂಡದು ಗ್ರಾಮದಲ್ಲಿ ದ್ವೇಷ ಅಸೂಯೆ ಮತ್ತು ಮತ್ಸರದಂತಹ ಭಾವನೆಗಳನ್ನು ಕೈಬಿಡಬೇಕು ಗ್ರಾಮದಲ್ಲಿ ಸಾಮರಸ್ಯವನ್ನು ಇಟ್ಟುಕೊಂಡು ಸಹಬಾಳ್ವೆ ಮಾಡಬೇಕು ಯಾರಾದರೂ ಕಾನೂನು ಕೈಗೆತ್ತಿಕೊಂಡರೆ ನಿರ್ಧಾಕ್ಷಿಣ್ಯವಾಗಿ ಕ್ರಮಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡುವುದರ ಜೊತೆಗೆ ಆದಷ್ಟು ಬೇಗ ವಿವಾದವನ್ನು ನ್ಯಾಯಾಲದಲ್ಲಿ ಬಗೆಹರಿಸಿ ತಾತ್ವಿಕ ನೆಲೆಗಟ್ಟಿನಲ್ಲಿ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದರು.

ಕಂದಾಯ ಇಲಾಖೆಯ ಇತರೆ ಮೂಲ ಸಮಸ್ಯೆಗಳು ಯಾವುದಾದರೂ ಇದ್ದಲ್ಲಿ ತಕ್ಷಣ ನಿಮ್ಮ ಮನೆ ಬಾಗಿಲಿಗೆ ಬಂದು ಸೇವೆ ಒದಗಿಸಲಾಗುವುದೆಂದು ಮನವಿ ಮಾಡಿದರು

ಇದೇ ಸಂದರ್ಭದಲ್ಲಿ ಪೊಲೀಸ್ ಉಪನಿರೀಕ್ಷಕ ಶಿವರಾಜ್ , ರಾಜಸ್ವನಿರೀಕ್ಷಕ ಚೇತನ್ ಕುಮಾರ್, ಗ್ರಾಮ ಲೆಕ್ಕಾಧಿಕಾರಿ ಹರೀಶ್ ಮುಂತಾದವರು ಉಪಸ್ಥಿತರಿದ್ದರು

Namma Challakere Local News
error: Content is protected !!