ಚಳ್ಳಕೆರೆ: ರೈತರಿಗೆ ನೀಡುವ ಬಿತ್ತನೆ ಬೀಜ ಕಳಪೆಯಿಂದ ಕೂಡಿದೆ ಇದರಿಂದ ಸಾವಿರಾರು ರೂಪಾಯಿ ಖರ್ಚು ಮಾಡಿ ಬೀಜ ಖರೀದಿಸಿದ ರೈತನಿಗೆ ಕಷ್ಟವಾಗುತ್ತದೆ ಇದರಿಂದ ಶೇಂಗಾ ಬೀಜ ಸರಬರಾಜು ಮಾಡಿರುವ ಸರ್ಕಾರದ ನಡೆ ಖಂಡಿಸಿ ತಾ.ಕಚೇರಿ ಬಳಿ ಅಖಂಡ ಕರ್ನಾಟಕ ರೈತ ಸಂಘದಿಂದ ಬೃಹತ್ ಚಳವಳಿ ನಡೆಸಿ ತಹಶೀಲ್ದಾರ್ ಗೆ ಮನವಿ ಸಲ್ಲಿಸಿದರು.
ರಾಜ್ಯಾಧ್ಯಕ್ಷ ಸೋಮುಗುದ್ದು ರಂಗಸ್ವಾಮಿ ಮಾತನಾಡಿ ತಾಲ್ಲೂಕಿನ ರೈತ ಸಂಪರ್ಕ ಕೇಂದ್ರಗಳಿಗೆ ಬೂಸ್ಟ್ ಬಂದಿರುವ ಕಳಪೆ ಶೇಂಗಾ ಕಾಯಿ ವಿತರಣೆ ಮಾಡಿದ್ದು, ರೈತರು ಬಿತ್ತನೆ ಮಾಡಿದರೆ ಮೊಳಕೆಯಾಗುವುದಿಲ್ಲ ಅಂತಹ ಕಳಪೆ ಶೇಂಗಾ ವಿತರಣೆ ಮಾಡಿದರೆ ರೈತರು ಬೀದಿ ಬೀಳಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕಿನಾದ್ಯಂತದ ಮಳೆಯಾಗಿದ್ದು, ರೈತರು ಶೇಂಗಾ ಬಿತ್ತನೆ ಮಾಡಲು ಮುಂದಾಗಿದ್ದಾರೆ. ಆದರೆ ರೈತರಿಗೆ ಕೃಷಿ ಇಲಾಖೆಯಿಂದ ಸಬ್ಸಿಡ್ ದರದಲ್ಲಿ ವಿತರಣೆ ಮಾಡುವ ಬಿತ್ತನೆ ಶೇಂಗಾ ಬೀಜವು ಗುಣಮಟ್ಟವಿಲ್ಲ.
ಗುಣಮಟ್ಟವಿಲ್ಲದ ಬಿತ್ತನೆ ಶೇಂಗಾ ಬೀಜವನ್ನು ಹಿಂದಿರುಗಿಸಬೇಕು ಎಂದು ಒತ್ತಾಯ ಮಾಡಿದರು.
ಸ್ಥಳಕ್ಕೆ ಕೃಷಿ ಉಪನಿರ್ದೇಶಕ ಶಿವಕುಮಾರ್, ಕೃಷಿ ಸಹಾಯಕ ನಿರ್ದೇಶಕ ಆಶೋಕ್ ಭೇಟಿ ನೀಡಿ, ಕೃಷಿ ಇಲಾಖೆಯಿಂದ ಬಿತ್ತನೆ ಶೇಂಗಾ ಬೀಜಗಳ ಕುರಿತು ರೈತರಿಗೆ ಸ್ಪಷ್ಟನೆ ನೀಡಿದರು.
ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಬಸವರಾಜ್. ಗೌರವ ಅಧ್ಯಕ್ಷ ಶಿವಣ್ಣ, ತಾಲ್ಲೂಕು ಅಧ್ಯಕ್ಷ ಗಿರೀಶ್ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಶೇಷಾದ್ರಿ ಹಾಗೂ ರೈತ ಮುಖಂಡರು ಇದ್ದರು.