ನಾಯಕನಹಟ್ಟಿ::
ಹೋಬಳಿಯ ಮಲ್ಲೂರ ಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗುಡ್ಡದಕಪಿಲೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು….

ಈ ವೇಳೆ ಮುಖ್ಯಶಿಕ್ಷಕಿ ಸೌಭಾಗ್ಯ ಮಾತನಾಡಿ
ರಾಜ್ಯದಲ್ಲಿ ಅತಿ ಕಡಿಮೆ ಮಳೆ ಬೀಳುವ ಪ್ರದೇಶವೆಂದರೆ ನಾಯಕನಹಟ್ಟಿ ಹೋಬಳಿ ಬಯಲುಸೀಮೆಯದ್ದೆ ಖ್ಯಾತಿ ಪಡೆದಿದೆ ಅತಿಹೆಚ್ಚು ಬಿಸಿಲು ಬೀಳುವ ಪ್ರದೇಶ ಹಾಗೂ ಕಡಿಮೆ ಮರ-ಗಿಡಗಳು ಇರುವ ಗಿಡಗಳನ್ನು ನೆಡುವ ಮೂಲಕ ಹಸಿರಕರಣ ಮತ್ತು ಪರಿಸರವನ್ನು ಸಂರಕ್ಷಣೆ ಮಾಡಲು ವಿದ್ಯಾರ್ಥಿಗಳು ಮತ್ತು ಗ್ರಾಮದ ಯುವ ಪೀಳಿಗೆ ಎಲ್ಲರೂ ಶ್ರಮವಹಿಸಿಬೇಕು ಎಂದು ಹೇಳಿದರು….

ಶಾಲಾ-ಕಾಲೇಜುಗಳು, ಎಲ್ಲಾ ಕಡೆಗಳಲ್ಲಿ ಸಸಿಗಳನ್ನು ನೆಟ್ಟು ಪರಿಸರದ ಸಂರಕ್ಷಣೆ ಮಾಡುವ ಜವಾಬ್ದಾರಿ ಪ್ರತಿಯೊಬ್ಬರ‌ ಮೇಲಿದ ಎಂದು ಹೇಳಿದರು…

ಈ ಸಂದರ್ಭದಲ್ಲಿ ಅತಿಥಿ ಶಿಕ್ಷಕ ಮಹಾಂತೇಶ್, ಮತ್ತು ಅಡಿಗೆ ಸಿಬ್ಬಂದಿ ದಾದಮ್ಮ, ಮತ್ತು ಸಣ್ಣ ಮದಮ್ಮ, ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು

Namma Challakere Local News
error: Content is protected !!