ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ ರಘುಮೂರ್ತಿ ರವರು ಹೊಸದುರ್ಗ ನಗರದ ಬ್ರಹ್ಮ ವಿದ್ಯಾನಗರದಲ್ಲಿ ನಡೆದ ಸ್ವಾಮೀಜಿಗಳ 26ನೇ ವರ್ಷದ ಪಟ್ಟಾಭಿಷೇಕ ಮಹೋತ್ಸವ ಅಂಗವಾಗಿ ನಡೆಯುವ ಕಾರ್ಯಕ್ರಮದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಹೊಸದುರ್ಗ ನಗರದ ಬ್ರಹ್ಮ ವಿದ್ಯಾನಗರದ ಸುಕ್ಷೇತ್ರ ಶ್ರೀ ಭಗೀರಥ ಪೀಠದ ಸಾಗರ ಚಕ್ರವರ್ತಿ ಮಹಾ ಮಂಟಪದಲ್ಲಿ ಇಂದು ನಡೆಯುವ ಜಗದ್ಗುರು ಶ್ರೀಶ್ರೀಶ್ರೀ ಡಾ. ಪುರುಷೂತ್ತಮಾನಂದ ಪುರಿ ಮಹಾಸ್ವಾಮೀಜಿ ಯವರ 26ನೇ ವರ್ಷದ ಪಟ್ಟಾಭಿಷೇಕ ಮಹೋತ್ಸವದ ಸಭೆಯ ಕಾರ್ಯಕ್ರಮ ಮತ್ತು ಸಾಣೇಹಳ್ಳಿ ಮಠದ ಶ್ರೀಶ್ರೀಶ್ರೀ ಡಾ. ಪಂಡಿತಾರಾಧ್ಯ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಜಿ ರವರಿಗೆ ಕಾಯಕಯೋಗಿ ಶ್ರೀ ಸಿದ್ದರಾಮೇಶ್ವರ ಪ್ರಶಸ್ತಿ ಲಭಿಸಿದ ಕಾರಣ ಸ್ವಾಮೀಜಿಗಳನ್ನು ಸನ್ಮಾನಿಸಿ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

