ಚಳ್ಳಕೆರೆ : ಕೆಲ ಪಕ್ಷದ ಹೆಸರು ಹೇಳಿಕೊಂಡು ಸರಕಾರಿ ಕಛೇರಿಯಲ್ಲಿ ಲೈವ್ ಮಾಡುತ್ತಾ ಸರಕಾರದ ಅದೀನ ಅಧಿಕಾರಿಗಳಿಗೆ ದಕ್ಕೆ ಉಂಟುಮಾಡುವ ಇವರುಗಳನ್ನು ಸಾರ್ವಜನಿಕವಾಗಿ ಪ್ರಶ್ನೆಮಾಡಿದ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಇಂದು ತಹಶೀಲ್ದಾರ್ ಗೆ ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದಿಂದ
ಮನವಿ ಸಲ್ಲಿಸಿದರು.
ನಗರದ ತಾಲೂಕು ಕಛೇರಿಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸಲ್ಲಿಸಿದ ಮನವಿಯಲ್ಲಿ
ಕೆಲ ಮುಖಂಡರು ಪಕ್ಷದ ಹೆಸರು ಹೇಳಿಕೊಂಡು ತಾಲೂಕು ಕಛೇರಿಯಲ್ಲಿ ಹಾಗೂ ಪತ್ರಕರ್ತರ ಮೇಲೆ ಹಲ್ಲೆಮಾಡಿದ್ದಾರೆ ಇಂತವರಿಗೆ ಸೂಕ್ರ ಕಾನೂನು ಕ್ರಮ ಕೈಗೊಂಡು ಪತ್ರಕರ್ತರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ತಹಶೀಲ್ದಾರ್ ಎನ್ ರಘುಮೂರ್ತಿ ಗೆ ಮನವಿ ಸಲ್ಲಿಸಿದ್ದಾರೆ.
ಪತ್ರಕರ್ತ ಟಿ.ಜೆ.ತಿಪ್ಪೇಸ್ವಾಮಿ ಮಾತನಾಡಿ, ಸಾರ್ವಜನಿಕರೊಂದಿಗೆ ಕಾರ್ಯನಿರತವಾಗಿ ಸೇವೆ ಮಾಡುವ ಪತ್ರಕರ್ತರ ಮೇಲೆ ಹಲ್ಲೆ ಮಾಡುವುದು ಖಂಡನೀಯ ಹಾಗೂ ಸರ್ಕಾರದ ಅಧಿಕಾರಿಗಳನ್ನು ಲೈವ್ ಮಾಡಿ ಅವರ ಖಾಸಗಿ ಜೀವನಕ್ಕೆ ದಕ್ಕೆ ಉಂಟುಮಾಡುವ ಇವರಿಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿ ನೀಡಿದರು.
ಮನವಿ ಸ್ವೀಕರಿಸಿದ ತಹಶೀಲ್ದಾರ್ ಎನ್ ರಘುಮೂರ್ತಿ, ಸಮಾಜದ ಸ್ವಾಥ್ಯಕಾಪಾಡುವ ನಿಟ್ಟಿನಲ್ಲಿ ಸಮಾಜ ಸೇವೆ ಮಾಡುವ ಸರಕಾರದ ಅಧಿಕಾರಿಗಳ ಹಾಗೂ ಪತ್ರಕರ್ತರ ಮೇಲೆ ಈ ರೀತಿಯ ಘಟನೆಗಳು ಜರುಗದಂತೆ ಈ ಕೂಡಲೇ ಜಿಲ್ಲಾಧಿಕಾರಿಗಳಿಗೂ ಹಾಗೂ ಜಿಲ್ಲಾ ವರಿಷ್ಠಾಧಿಕಾರಿಗಳಿಗೆ ಪತ್ರ ರವಾನಿಸಿ ಶಿಸ್ತು ಕ್ರಮ ಕೈಗೊಳ್ಳಲು ಶಿಪರಾಸ್ಸು ಮಾಡುವೆ ಎಂದರು.
ಈದೇ ಸಂದರ್ಭದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರು ಪಾಲ್ಗೊಂಡಿದ್ದರು.