ನಾಯಕನಹಟ್ಟಿ ::
ಹೋಬಳಿಯ ರೈತರಿಗೆ ಶೇಂಗಾ ಬೀಜ ವಿತರಣೆ 2022 – 23 ನೇ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆ ಬೀಜ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಇಂದು ಪ್ರಥಮವಾಗಿ ನಾಯಕನಹಟ್ಟಿ ಗೌಡಗೆರೆ ನಲಗೇತನಹಟ್ಟಿ ಗ್ರಾಮ ಪಂಚಾಯತಿಯ ರೈತರಿಗೆ ಶೇಂಗಾ ಬೀಜ ವಿತರಣೆ ಮಾಡಲಾಯಿತು .

ಇನ್ನು ಹೋಬಳಿಯ ಎಲ್ಲಾ ರೈತರಿಗೆ ರೈತ ಸಂಪರ್ಕ ಕೇಂದ್ರದಲ್ಲಿ ನಿಗಧಿಪಡಿಸಿದ ದಿನಾಂಕದಂದು ವಿತರಣೆ ಮಾಡಲಾಗುತ್ತದೆ ಎಂದು ಕೃಷಿ ಅಧಿಕಾರಿ ಹೇಮಂತ್ ನಾಯ್ಕ ಹೇಳಿದರು.

ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಶೇಂಗಾ ಬೀಜ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಚಾಲನೆ ನೀಡಿ ಮಾತನಾಡಿದ ಅವರು.
ಶೇಂಗಾ ಬಿತ್ತನೆ ಬೀಜ ಬೆಳೆಯುವ ರೈತರು ನಮ್ಮ ರೈತ ಸಂಪರ್ಕ ಕೇಂದ್ರದಲ್ಲಿ ಪಾಣಿ ,ಎಫ್ ಐ ಡಿ, ಆಧಾರ್ ಕಾರ್ಡ್ ಮತ್ತು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ರೈತರು ಜಾತಿ ಆದಾಯ ಪ್ರಮಾಣ ಪತ್ರವನ್ನು ನೀಡಿ.
ಶೇಂಗಾ ಬಿತ್ತನೆ ಬೀಜದಲ್ಲಿ ಈ ಬಾರಿ ಎರಡು ವಿಧದ ಶೇಂಗಾ ಬಿತ್ತನೆ ಬೀಜಗಳಿವೆ

ಜನರಲ್ ರವರಿಗೆ -6600, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ -5900, ನೀಡಿ ಶೇಂಗಾ ಬಿತ್ತನೆ ಬೀಜ

ಪಡೆದುಕೊಳ್ಳುವಂತೆ ಮನವಿ ಮಾಡಿದರು.

Namma Challakere Local News
error: Content is protected !!