ಚಿತ್ರದುರ್ಗ : ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಮದುರೆ ಗ್ರಾಮ ಪಂಚಾಯಿತಿಯ ಶ್ರೀ ಚಿನ್ಮೂಲಾದ್ರಿ ಶೀಲಾಪುರಿ ಮಹಾಸಂಸ್ಥಾನ ಭಗೀರಥ , ಬ್ರಹ್ಮ ಪೀಠ ವಿದ್ಯಾನಗರ , ಸುಕ್ಷೇತ್ರ ಆವರಣದಲ್ಲಿ ಅಖಿಲ ಭಾರತ ಭಗೀರಥ ಜಯಂತೋತ್ಸವ ಸಮಾವೇಶವನ್ನು ಜೂನ್ 4 ರಂದು ಮುಖ್ಯಮಂತ್ರಿ ಬಸವರಾಜ ಎಸ್ ಬೊಮ್ಮಾಯಿ ಅವರು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಸ್ವಚ್ಛ ಭಾರತ್ ಮಿಷನ್ ಯೋಜನೆಯ ಘಟಕಾಂಶಗಳು ಹಾಗೂ ಬೂದು ನೀರು ನಿರ್ವಹಣೆ ಸಂಸ್ಕರಣಾ ವಿಧಾನದ ಮಾದರಿಗಳ ಮಾಹಿತಿ ಮಳಿಗೆಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಯೋಜನೆಯ ಕುರಿತು ಭಿತ್ತಿಪತ್ರ , ಕರಪತ್ರ ಹಂಚುವ ಮೂಲಕ ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಹಸಿ ಕಸ ಮತ್ತು ಒಣ ಕಸ ವಿಂಗಡಣೆ, ಶೌಚಾಲಯ ಬಳಕೆ ಮತ್ತು ನಿರ್ವಹಣೆ ಶುಚಿತ್ವ ಮತ್ತು ನೈರ್ಮಲ್ಯ, ಬೂದು ನೀರು ನಿರ್ವಹಣೆ ಕುರಿತು ಸಾರ್ವಜನಿಕರು, ಭಕ್ತಾಧಿಗಳಿಗೆ ಜಾಗೃತಿ ಮೂಡಿಸಲಾಯಿತು .
ಕಾರ್ಯಕ್ರಮದಲ್ಲಿ ಜಿಲ್ಲಾ ತಾಲೂಕು ಮಟ್ಟದ ಅಧಿಕಾರಿಗಳು , ಸಹಾಯಕ ನಿರ್ದೇಶಕರು , ಸ್ವಚ್ಛ ಭಾರತ್ ಮಿಷನ್ ಜಿಲ್ಲಾ ಸಮಾಲೋಚಕರು, ತಾಂತ್ರಿಕ ಸಂಯೋಜಕರು, ತಾಂತ್ರಿಕ ಸಹಾಯಕರು, ಗ್ರಾಮ ಪಂಚಾಯಿತಿ ಸಿಬ್ಬಂದಿ ಉಪಸ್ಥಿತರಿದ್ದರು