.
.
ಚಳ್ಳಕೆರೆ: ಶಿವಮೊಗ್ಗ ಹಾಲು ಒಕ್ಕೂಟದ ಅಡಿಯಲ್ಲಿ
ಕಾರ್ಯನಿರ್ವಹಿಸುತ್ತಿರುವ ಹಾಲು ಉತ್ಪಾದಕ ಸಹಕಾರ
ಸಂಘಗಳು ಗುಣಮಟ್ಟದ ಹಾಲು ತಯಾರಿಸುವ ಮೂಲಕ
ಉತ್ತಮ ಲಾಭ ಗಳಿಸುವತ್ತ ಗಮನಹರಿಸಬೇಕು ಎಂದು
ಒಕ್ಕೂಟದ ನಿರ್ದೇಶಕ ಬಿ ಸಿ ಸಂಜೀವಮೂರ್ತಿ ತಿಳಿಸಿದರು.
ನಗರದ ಚೇಂಬರ್ ಆಫ್ ಕಾಮರ್ಸ್ ಕಲ್ಯಾಣ
ಮಂಟಪದಲ್ಲಿ ಆಯೋಜಿಸಿದ್ದ ಹಾಲು ಉತ್ಪಾದಕ ಸಹಕಾರ
ಸಂಘಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು
ಶಿವಮೊಗ್ಗ ಹಾಲು ಒಕ್ಕೂಟವು ಹಾಲು ಉತ್ಪಾದಕ ರೈತರಿಗೆ
ಹಲವು ಸೌಲಭ್ಯಗಳನ್ನು ನೀಡುತ್ತಿದ್ದು ಇದರಿಂದಾಗಿ
ರೈತರಿಗೆ ಅನುಕೂಲವಾಗುತ್ತಿದೆ ಗ್ರಾಮೀಣ ಪ್ರದೇಶಗಳಲ್ಲಿ
ನಿಂತು ಹೋಗಿದ್ದ ಹಾಲು ಒಕ್ಕೂಟಗಳನ್ನು ಪುನಶ್ಚತನ
ಗೊಳಿಸುವ ಉದ್ದೇಶದಿಂದ ಉತ್ತಮ ರೀತಿಯಲ್ಲಿ ಕಾರ್ಯ
ನಿರ್ವಹಿಸುತ್ತಿದ್ದು ರೈತರು ಉತ್ತಮ ಗುಣಮಟ್ಟದ ಹಾಲನ್ನು
ನೀಡಿದಾಗ ಸಂಸ್ಥೆಯ ಜೊತೆಗೆ ರೈತರು ಸಹ ಸ್ವಾವಲಂಬನೆ
ಜೀವನ ಕೊಂಡುಕೊಳ್ಳಬಹುದಾಗಿದೆ ಈ ನಿಟ್ಟಿನಲ್ಲಿ ಎಲ್ಲಾ
ರೈತರು ಹಾಗೂ ಹಾಲು ಉತ್ಪಾದಕ ಸಹಕಾರ ಸಂಘಗಳು
ಉತ್ತಮ ಲಾಭಗಳಿಸಲು ಸಹಕಾರಿಯಾಗುತ್ತದೆ ಎಂದರು.
ಈ
ವೇಳೆ ರೈತರು ಒಕ್ಕೂಟದಿಂದ ದೊರೆಯುತ್ತಿರುವ ಸೌಲಭ್ಯಗಳ
ಬಗ್ಗೆ ಅಧಿಕಾರಿಗಳಿಂದ ಮಾಹಿತಿ ತಿಳಿದುಕೊಂಡರು.
ಕಾರ್ಯಕ್ರಮದಲ್ಲಿ ಶಿವಮೊಗ್ಗ ಹಾಲು ಒಕ್ಕೂಟದ ನೂತನ
ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಶಿವಮೊಗ್ಗ ಹಾಲು ಒಕ್ಕೂಟದ
ಅಧಿಕಾರಿಗಳು ಹಾಗೂ ನಿರ್ದೇಶಕ ಸದಸ್ಯರು
ಉಪಸ್ಥಿತರಿದ್ದರು.