ಚಳ್ಳಕೆರೆ :
ಚಿತ್ರದುರ್ಗ: ಬನದ ಹುಣ್ಣಿಮೆಗೆ ಸೌದತ್ತಿ ಯಲ್ಲಮ್ಮನಿಗೆ
ವಿಶೇಷ ಪೂಜೆ
ಸಂಕ್ರಾಂತಿ ಹಾಗು ಬನದ ಹುಣ್ಣಿಮೆಯ ಅಂಗವಾಗಿ, ಚಿತ್ರದುರ್ಗ
ನಗರದ ಸ್ಟೇಡಿಯಂ ರಸ್ತೆ ಬಳಿ ಇರುವ ಸವದತ್ತಿ ರೇಣುಕಾ ಯಲ್ಲಮ್ಮ
ದೇವರಿಗೆ ವಿಶೇಷ ಪೂಜೆಯನ್ನು ಇಂದು ಆಯೋಜಿಸಲಾಗಿತ್ತು.
ಬನದ ಹುಣ್ಣಿಮೆ ಹಾಗು ಸಂಕ್ರಾಂತಿ ಅಂಗವಾಗಿ ದೇವಿಗೆ ಬಗೆ
ಬಗೆಯ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ದೇವಸ್ಥಾನಕ್ಕೆ
ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.
ವಿವಿಧ ಕಡೆಗಳಿಂದ
ಆಗಮಿಸಿದ್ದ ನೂರಾರು ಭಕ್ತರು ದೇವಿಯ ದರ್ಶನ ಪಡೆದುಕೊಂಡು
ಪುನೀತರಾದರು.