ಚಳ್ಳಕೆರೆ : ಖಾಸಗಿ ಬಸ್ ಚಾಲಕರು, ಹಾಗೂ ಮಾಲೀಕರೊಂದಿಗೆ ಶಾಮಿಲಾಗಿ ಸರ್ಕಾರಿ ಬಸ್ ಗಳಿಗಳನ್ನು ಸರಿಯಾದ ಸಮಯಕ್ಕೆ ಬಿಡದೆ ಸರಕಾರಕ್ಕೆ ವಂಚನೆ ಮಾಡುತ್ತಿದ್ದ ಎಂಟು ಜನ ಕೆಎಸ್ ಆರ್ ಟಿ ಸಿ ಬಸ್ ಚಾಲಕ ,ಕಂ ನಿರ್ವಾಹಕರನ್ನು ಅಮಾನತು ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಹೌದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಸಾರಿಗೆ ಡಿಪೋದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಮಾರು ಎಂಟು ಜನ ಚಾಲಕ ಹಾಗೂ ನಿರ್ವಾಹಕರು ಅಮಾನತು ಘಟನೆ ತಡವಾಗಿ ಬೆಳೆಗೆ ಬಂದಿದೆ.
ಚಿತ್ರದುರ್ಗ ಮಾರ್ಗ ಹಾಗೂ ಪಾವಗಡ ಮಾರ್ಗವಾಗಿ ಚಲಿಸುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ಗಳನ್ನು ನಿಗದಿತ ಸಮಯಕ್ಕೆ ಬಿಡದೆ ಖಾಸಗಿ ಬಸ್ ಮಾಲೀಕ ಹಾಗೂ ಚಾಲಕರೊಂದಿಗೆ ಶಾಮಿಲಾಗಿ ಖಾಸಗಿ ಬಸ್ ಮಾಲೀಕರೊಂದಿಗೆ ಹಣ ಪಡೆದು ಇಲಾಖೆಗೆ ಹಾಗೂ ಸರ್ಕಾರಕ್ಕೆ ವಂಚನೆ ಮಾಡುತ್ತಿದ್ದ ಚಾಲಕ ,ಕಂ ನಿರ್ವಾಹಕರನ್ನು ಕೆಎಸ್ಆರ್ಟಿಸಿ ಭದ್ರತಾ ಮತ್ತು ಜಾಗೃತಿ ಶಾಖೆಯ
ಬೆಂಗಳೂರು
ಮೇಲಾಧಿಕಾರಿಗಳು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಇನ್ನು ಈ ಘಟನೆಗೆ ಸಂಬಂಧಿಸಿದಂತೆ ಖಾಸಗಿ ಬಸ್ ಮಾಲೀಕರಾದ ಪ್ರವೀಣ್ ಕುಮಾರ್ ದೂರನು ನೀಡಿದ್ದು , ಈ ದೂರಿನ ಅನ್ವಯ ಅಮಾನತು ಮಾಡಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಪ್ರವೀಣ್ ಕುಮಾರ್ ಹೇಳಿದ್ದಾರೆ..
ಸಾರಿಗೆ ಸಂಸ್ಥೆಗಳ ನಷ್ಟ ತಪ್ಪಿಸೋಕೆ ಬಸ್ ದರ ಏರಿಕೆ
ಮಾಡಿದರೆ ಇತ್ತ ಸಾರಿಗೆ ಬಸ್ ಚಾಲಕರು ಇಂತಹ ಕೃತ್ಯಕ್ಕೆ ಇಳಿದಿರುವುದು ಕಂಡು ಬಂದಿದೆ.
ಚಳ್ಳಕೆರೆ ನಗರದ ಸರಕಾರಿ ಸಾರಿಗೆ ಬಸ್
ಘಟದಲ್ಲಿನ ಬಸ್ ಚಾಲಕರು ಖಾಸಗಿ ನಿಗದಿತ ಸಮಯಕ್ಕೆ
ಸರಿಯಾಗಿ ಬಸ್ ಬಿಡಬೇಕಾದ ಸಾರಿಗೆ ಚಾಲಕರು ಖಾಸಗಿ
ಬಸ್ ಮಾಲಿಕರಿಂದ ಫೋನ್ ಫೇ ಮೂಲಕ ಹಣ
ಹಾಕಿಸಿಕೊಂಡಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ ಎನ್ನಲಾಗಿದೆ.
ಇನ್ನೂ ಗ್ರಾಮೀಣ ಭಾಗಕ್ಕೆ ಸರಿಯಾಗಿ ಬಸ್
ಬಿಡದೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬೊಕ್ಕಸಕ್ಕೆ
ನಷ್ಟವನ್ನುಂಟು ಮಾಡಿದ್ದಾರೆ.
ಖಾಸಗಿ ಬಸ್ ಮಾಲಿಕ ಪ್ರವೀಣ್ ರಾಜ್ಯ ರಸ್ತೆ ಸಾರಿಗೆ
ಚಾಲಕ ಹಾಗೂ ನಿರ್ವಾಹರ ವಿರುದ್ದು ದೂರು ನೀಡಿದ
ಬೆನ್ನಲ್ಲೇ 8 ಜನ ಬಸ್ ಚಾಲಕರನ್ನು ಅಮಾನತು
ಮಾಡಲಾಗಿದ್ದು ತನಿಖೆ ಮಾಡಿದರೆ ಇನ್ನು ಹಲವು
ಚಾಲಕರು ಖಾಸಗಿ ಬಸ್ ಮಾಲಿಕರಿಂದ ಹಣ
ಪಡೆದಿರುವುದು ಬಯಲಾಗಲಿದೆ ಎನ್ನುತ್ತಾರೆ.
ರಾಜ್ಯ ರಸ್ತೆ ಸಾರಿಗೆ ಬಸ್ ಚಾಲಕ ಮಂಜುನಾಥ,
ಜಗದೀಶ.ಆರ್, ರವಿಕುಮಾರ.ಎಸ್. ಪ್ರಕಾಶ.ಈ.
ಸಿದ್ದಲಿಂಗಯ್ಯ ಮಠಪತಿ, ಮಹಾಸ್ವಾಮಿ ಇವರು ಖಾಸಗಿ
ಬಸ್ ಮಾಲೀಕರ ಮತ್ತು ನಿರ್ವಾಹಕರಿಂದ ದಿನವೊಂದಕ್ಕೆ
ರೂ:200, 300, 600 ರೂಪಾಯಿ ಗಳನ್ನು ಪೋನ್ಪೇ ಮುಖಾಂತರ
ಮತ್ತು ನಗದಾಗಿ ಹಣ ಪಡೆದು ಚಿತ್ರದುರ್ಗ-ಪಾವಗಡ-
ಚಿತ್ರದುರ್ಗ, ಚಿತ್ರದುರ್ಗ-ಮಲ್ಲಸಮುದ್ರ
ಮಾರ್ಗಗಳಲ್ಲಿ ನಿಗಮದ ವಾಹನಗಳನ್ನು ಸರಿಯಾಗಿ
ಕಾರ್ಯಾಚರಣೆ ಮಾಡದೇ ಸಂಸ್ಥೆಗೆ ಮತ್ತು ಸಾರಿಗೆ
ಆದಾಯ ನಷ್ಟವಾಗಲು ಕಾರಣರಾಗಿರುತ್ತಾರೆ.
ಡಿಪೋ
ಮ್ಯಾನೇಜರ್, ವಿಭಾಗೀಯ ನಿಯಂತ್ರಣಾಧಿಕಾರಿಗಳು,
ಕೆ.ಎಸ್.ಆರ್.ಟಿ.ಸಿ., ಚಿತ್ರದುರ್ಗ ವಿಭಾಗ, ಚಿತ್ರದುರ್ಗ
ಮಂಜುನಾಥ ಇವರ ಮೇಲೆ ದೂರು ನೀಡಿದ್ದು,
ನಿಯಂತ್ರಾಣಾಧಿಕಾರಿಗಳು, ಘಟಕ ವ್ಯವಸ್ಥಾಪಕರು
ಯಾವುದೇ ಕ್ರಮ ಕೈಗೊಂಡಿರುವುದಿಲ್ಲ.
ಭದ್ರತಾ ಮತ್ತು ಜಾಗೃತಿ ಶಾಖೆಯ
ಬೆಂಗಳೂರು ಇವರಿಗೆ ಫೋನ್ ಮುಖಾಂತರ ವಿಚಾರ
ತಿಳಿಸಿ ಅವರು ದೂರು ನೀಡಿದಾಗ ತನಿಖೆ ನಡೆಸಿ ಎಂಟು
ಜನರನ್ನು ಅಮಾನತು ಮಾಡಿದ್ದಾರೆ.
ನೀನು ಕೊಟ್ಟಿರುವಂತಹ ದೂರ
ನಿಯಂತ್ರಾಣಾಧಿಕಾರಿಗಳ ಕಛೇರಿಯಲ್ಲಿ
ಮೇಲಾಧಿಕಾರಿಗಳು ನಮ್ಮ ಹತ್ತಿರ ಲಿಖಿತ ಹೇಳಿಕೆಯನ್ನು
ಪ್ರತಿಗಳನ್ನು ವಾಟ್ಸಪ್ ಮುಖಾಂತರ ಕಳುಹಿಸಿದ ನಂತರ
ಅದೇ
ದಿನ ಚಿತ್ರದುರ್ಗ ವಿಭಾ ತೆಗೆದುಕೊಂಡು ಕಾನೂನು ಕ್ರಮ
ಕೈಗೊಂಡಿರುತ್ತಾರೆ.
ಇನ್ನೂ ಹೆಚ್ಚಿನ ತನಿಖೆ ಕೈಗೊಳ್ಳಲು ಲೋಕಾಯುಕ್ತ ಕಛೇರಿಗೆ ಅರ್ಜಿ ನೀಡಿದ ಪ್ರವೀಣ್ ಕುಮಾರ್, ಚಳ್ಳಕೆರೆ ಡಿಪೋದಲ್ಲಿ ಆಗುವಂತಹ ಅಕ್ರಮಗಳನ್ನು ತನಿಖೆ ಮಾಡಿ ಎಂದು ದೂರು ನೀಡಿದ್ದಾರೆ ಎನ್ನಲಾಗಿದೆ.