ತಿಮ್ಮಪ್ಪಯ್ಯನಹಳ್ಳಿ ಗ್ರಾ.ಪಂ. ನೂತನ ಅಧ್ಯಕ್ಷರಾಗಿ ಟಿ.ಶೈಲಜಾ ಮಂಜಣ್ಣ ಆಯ್ಕೆ.
ನಾಯಕನಹಟ್ಟಿ ::ಹೋಬಳಿಯ ತಿಮ್ಮಪ್ಪಯ್ಯನಹಳ್ಳಿ ಗ್ರಾಮ ಪಂಚಾಯತಿಗೆ ಶುಕ್ರವಾರ ನಡೆದ ಅಧ್ಯಕ್ಷ ಆಯ್ಕೆ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಶ್ರೀಮತಿ ಟಿ.ಶೈಲಜಾ ಮಂಜಣ್ಣ, ಅವರು ಆಯ್ಕೆಯಾದರು.
ಒಟ್ಟು 18 ಸದಸ್ಯರ ಬಲವುಳ್ಳ ಈ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನವು ಪರಿಶಿಷ್ಟ ಜಾತಿ ಪಂಗಡಕ್ಕೆ ಮೀಸಲಾಗಿತ್ತು ಹಿಂದಿನ ಅಧ್ಯಕ್ಷೆ ಅನಿತಾ ರವಿಕುಮಾರ್ ಅವರ ರಾಜನಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆಸಲಾಯಿತು ಅಧ್ಯಕ್ಷ ಸ್ಥಾನಕ್ಕೆ ಟಿ.ಶೈಲಜಾ ಮಂಜಣ್ಣ ಒಬ್ಬರೇ ನಾಮಪತ್ರ ಸಲ್ಲಿಸಿದ ಕಾರಣದಿಂದ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಚುನಾವಣೆ ಪ್ರಕ್ರಿಯೆಯಲ್ಲಿ 15 ಜನ ಸದಸ್ಯರು ಹಾಜರಿದ್ದರು ಚುನಾವಣಾ ಅಧಿಕಾರಿಯಾಗಿ ತಾಲೂಕು ಪಂಚಾಯಿತಿ ಇಒ ಶಶಿಧರ್ ಆಯ್ಕೆ ಮಾಡಿ ಘೋಷಿಸಿದರು.
ಇದೇ ವೇಳೆ ಸದಸ್ಯ ಬಂಡೆ ಕಪಿಲೆ ಓಬಣ್ಣ ಮಾತನಾಡಿದರು ತಿಮ್ಮಪ್ಪಯ್ಯನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರ ಎರಡನೇ ಅವಧಿಗೆ ಪರಿಶಿಷ್ಟ ಜಾತಿ ಮಹಿಳಾ ಸ್ಥಾನಕ್ಕೆ ಮೀಸಲಾಗಿತ್ತು ಮೊದಲಿಗೆ ಎಸ್ ಅನಿತಾ ರವಿಕುಮಾರ್ ಆಯ್ತು ಮಾಡಲಾಗಿತ್ತು 15 ತಿಂಗಳ ಬಳಿಕ ಅವರಿಗೆ ರಾಜೀನಾಮೆ ಕೊಡಿಸಿ ಇಂದು ಸರ್ವ ಸದಸ್ಯರು ಸಹಕಾರದಲ್ಲಿ ಶ್ರೀಮತಿ ಟಿ ಶೈಲಜಾ ಮಂಜಣ್ಣ ಅವರನ್ನು ಅವಿರೋಧವಾಗಿ ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದರು.
ಮುಖಂಡರಾದ ಜಿ. ತಿಪ್ಪೇಸ್ವಾಮಿ( ಕೋಟೆಪ್ಪ) ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಜಿ.ವಿ. ಕರಿಯಣ್ಣ, ಜಯಣ್ಣ ಪ್ರಸನ್ನ ಚಿತ್ರದುರ್ಗ, ದೇವೇಂದ್ರಪ್ಪ, ತಿಪ್ಪೇಸ್ವಾಮಿ, ವೆಂಕಟೇಶ್ ಬಂಜಿಗೆರೆ, ಕೆಂಚಣ್ಣ,
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಎಂ. ತಿಪ್ಪೇಸ್ವಾಮಿ ರಾಮಸಾಗರ, ಸದಸ್ಯರಾದ ಸೋಮಶೇಖರ್, ಕೆ ತಿಪ್ಪೇಸ್ವಾಮಿ, ವಿಜಯ್ ಕುಮಾರ್, ಡಿ ರೇವಣ್ಣ, ಎಸ್ ಅನಿತಾ ರವಿಕುಮಾರ್, ಪಾಲಮ್ಮ ಜಿ. ಬೋರಯ್ಯ, ಗೀತಮ್ಮಸಿ. ಕುಮಾರ್, ಮಲ್ಲಮ್ಮ ಕಾಮಯ್ಯ, ಶಾಂತಮ್ಮ ಬಸವರಾಜ್, ಲಕ್ಷ್ಮಿಮಹದೇವಣ್ಣ, ಅಶೋಕ್, ಬಸಕ್ಕ ತಿಪ್ಪೇಸ್ವಾಮಿ,
ಇನ್ನೂ ಸ್ಥಳದಲ್ಲಿ ಗ್ರಾಮ ಪಂಚಾಯಿತಿ ಪಿಡಿಓ ಶ್ರೀನಿವಾಸ್ , ಸಿಬ್ಬಂದಿಗಳಾದ ಕಾರ್ಯದರ್ಶಿ ನಾಗರಾಜ್ ನಾಯ್ಕ, ಕಂಪ್ಯೂಟರ್ ಆಪರೇಟರ್ ಸಂತೋಷ್, ಬಿಲ್ ಕಲೆಕ್ಟರ್ ಬಿ. ತಿಪ್ಪೇಸ್ವಾಮಿ, ಕಾಯಕ ಮಿತ್ರ ಉಮಾ, ಸೇರಿದಂತೆ ತಿಮ್ಮಪ್ಪಯ್ಯನಹಳ್ಳಿ ಸಮಸ್ತ ಊರಿನ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಗ್ರಾಮಸ್ಥರು ಉಪಸ್ಥಿತರಿದ್ದರು