ವಿದ್ಯಾರ್ಥಿಗಳು ಹೆತ್ತವರಿಗೆ ಕೀರ್ತಿ ತರುವ ಹಾಗೆ ಶಿಕ್ಷಣವನ್ನ ಪಡೆಯಬೇಕು ಗ್ರಾಮ ಪಂಚಾಯತಿ ಅಧ್ಯಕ್ಷ ಈ ಪಾಪಮ್ಮ ಆನಂದಪ್ಪ ಅಭಿಪ್ರಾಯ.

ನಾಯಕನಹಟ್ಟಿ:: ವಿದ್ಯಾರ್ಥಿಗಳು ಶಿಕ್ಷಣ ಪಡೆಯುವ ಮೂಲಕ ಸಾಧನೆ ಮಾಡಿ ಮುಖ್ಯ ವಾಹಿನಿಗೆ ಬರಬೇಕು ಎಂದು ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಪಾಪಮ್ಮ ಆನಂದಪ್ಪ ಹೇಳಿದರು.

ಶುಕ್ರವಾರ ಹೋಬಳಿಯ ಅಬ್ಬೇನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಮಾನವ ಬಂದತ್ವ ವೇದಿಕೆ ಕರ್ನಾಟಕ ಚಿತ್ರದುರ್ಗ ಜಿಲ್ಲೆ ವತಿಯಿಂದ ಆಯೋಜಿಸಿದ್ದ ಅಕ್ಷರದವ್ವ ಸಾವಿತ್ರಿ ಬಾಯಿ ಪುಲೆ ಜನ್ಮದಿನದ ಸ್ಮರಣೆ ಕಾರ್ಯಕ್ರಮವನ್ನ ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಸಾವಿತ್ರಿ ಬಾಯಿ ಪುಲೆ ಮಹಿಳೆಯರಿಗೆ ವಿಶೇಷವಾದ ಗೌರವವನ್ನು ತಂದುಕೊಟ್ಟಿದ್ದಾರೆ ಅವರ ಶಿಕ್ಷಣ ಕಾಳಜಿ ಪ್ರಶ್ನತಿತ ಪ್ರತಿಹಂತದಲ್ಲೂ ಮಹಿಳಾ ಸಮೂಹದ ರಕ್ಷಣೆಯ ಬಗ್ಗೆ ಬಗ್ಗೆ ಚಿಂತನೆ ನಡೆಸುತ್ತಿದ್ದ ಸಾವಿತ್ರಿಬಾಯಿ ಪುಲೆ ನಾಡು ಕಂಡ ಅಪರೂಪದ ಶಿಕ್ಷಕಿ ಎಂದು ತಿಳಿಸಿದರು.

ಇದೆ ವೇಳೆ ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಬಿ ಶಂಕರಸ್ವಾಮಿ ಮಾತನಾಡಿದರು. ಮಹಿಳಾ ಶಿಕ್ಷಣ ಮತ್ತು ಸಾಮಾಜಿಕ ಸುಧಾರಣೆಯಲ್ಲಿ ಪ್ರವರ್ತಕರಾದ ಸಾವಿತ್ರಿಬಾಯಿ ಫುಲೆ ರವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿಯು ಅಳವಡಿಸಿಕೊಳ್ಳಬೇಕು ಶಿಕ್ಷಣಕ್ಕೆ ಹೆಚ್ಚಿನ ಮಹತ್ವವನ್ನು ನೀಡುವ ಮೂಲಕ ಸಮಾಜದಲ್ಲಿ ಸಮಾನತೆಯನ್ನು ನೀಡಿದಂತ ದೇಶದ ಮೊಟ್ಟಮೊದಲ ಶಿಕ್ಷಕಿ ಎಂಬ ಹೆಗ್ಗಳಿಕೆ ಸಾವಿತ್ರಿ ಬಾಯಿ ಪುಲೆ ರವರಿಗೆ ಸಲ್ಲುತ್ತದೆ ಎಂದರು.

ಇನ್ನೂ ಮಾನವ ಬಂಧುತ್ವ ವೇದಿಕೆ ಚಳ್ಳಕೆರೆ ತಾಲೂಕು ಸಂಚಾಲಕ ಆರ್ .ಯನ್ನಪ್ಪ ಪ್ರಸ್ತಾವಿಕವಾಗಿ ಮಾತನಾಡಿದ ಅವರು ಮಾನವ ಬಂದತ್ವ ವೇದಿಕೆ ವಿದ್ಯಾರ್ಥಿಗಳ ಮತ್ತು ಸರ್ವ ಧರ್ಮಗಳ ಅಭಿವೃದ್ಧಿಗೋಸ್ಕರ ಪ್ರತಿವರ್ಷ ಸಾವಿತ್ರಿ ಬಾಯಿ ಪುಲೆ ರವರ ಜಯಂತಿಯನ್ನು ಆಚರಣೆ ಮಾಡುತ್ತಾ ಬಂದಿದ್ದಾರೆ ಮಾನವ ಬಂದತ್ವ ವೇದಿಕೆಯ ಸಂಸ್ಥಾಪಕರಾದ ಸತೀಶ್ ಜಾರಕಿಹೊಳಿ ಅವರು ಇಡೀ ರಾಜ್ಯದಾದ್ಯಂತ ಹಲವಾರು ಕಾರ್ಯಕ್ರಮಗಳನ್ನ ಮಾನವ ಬಂಧುತ್ವ ವೇದಿಕೆಯ ಮೂಲಕ ರಾಜ್ಯದ ಜನತೆಗೆ ನೀಡಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಾದ ನಾಯಕನಹಟ್ಟಿ ಪಟ್ಟಣ ಪಂಚಾಯತಿ ಸದಸ್ಯರಾದ ಎಂ.ಟಿ. ಮಂಜುನಾಥ್,ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ಸದಸ್ಯರಾದ ಪಡ್ಲ ಬೋರಣ್ಣ, ಟಿ. ಶೇಖರಗೌಡ, ಕವಿತಾ ಕುಬೇರಪ್ಪ, ರಾಧಮ್ಮ ಎ.ಪಿ ರೇವಣ್ಣ, ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಪಾಪಣ್ಣ ,ಉಪಾಧ್ಯಕ್ಷ ತಿಪ್ಪೇಸ್ವಾಮಿ , ಗ್ರಾಮಸ್ಥರಾದ ಸುಪುತ್ರ ಬಾಬಣ್ಣ, ಜಯಲಕ್ಷ್ಮಿ, ಮಲ್ಲಿಕಾರ್ಜುನ್. ಚನ್ನಪ್ಪ, ಶಾಲೆಯ ಮುಖ್ಯ ಶಿಕ್ಷಕರಾದ ಡಿ, ಕೊಟ್ರೇಶ್, ಶಿಕ್ಷಕರಾದ ರಾಘವೇಂದ್ರ, ಹುಲಿಕುಂಟೆಪ್ಪ, ರೂಪಶ್ರೀ, ರಾಜಣ್ಣ, ಶಿವಣ್ಣ, ಸಣ್ಣ ಪಾಲಯ್ಯ, ಓಬಣ್ಣ, ಸೇರಿದಂತೆ ಶಾಲೆಯ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು

About The Author

Namma Challakere Local News
error: Content is protected !!