ಚಳ್ಳಕೆರೆ :
ಹೊಸದುರ್ಗ: ರಸ್ತೆಯಲ್ಲಿದ್ದ ತೊಗರಿ ತೆಗೆದ ಮಾಜಿ
ಶಾಸಕ
ಹೊಸದುರ್ಗದ ವಿವಿ ಸಾಗರದ ಹಿನ್ನೀರಿನ ಮುಳುಗಡೆ ಪ್ರದೇಶಗಳಿಗೆ
ಮಾಜಿ ಶಾಸಕ ಗೂಳಿ ಹಟ್ಟಿ ಶೇಖರ್ ಇಂದು ಭೇಟಿ ನೀಡಿದರು.
ಸಮಸ್ಯೆ ಆಲಿಸಿ ಹಿಂತಿರುಗುವಾಗ ರಸ್ತೆಯಲ್ಲಿಯೆ ಒಕ್ಕಲು ಮಾಡಲು
ಹಾಕಿದ್ದ ತೊಗರಿಯನ್ನು ಕಾರಿನಿಂದಿಳಿದು ತಾವೇ ಸ್ವತಃ ತೆಗೆದರು.
ನಂತರ ರೈತರಿಗೆ ರಸ್ತೆಯಲ್ಲಿ ಒಕ್ಕಲು ಮಾಡಬಾರದು, ಇದರಿಂದ ರಸ್ತೆ
ಹಾಳಾಗುವ ಜೊತೆಗೆ ವಾಹನಗಳ ಸಂಚಾರಕ್ಕೆ ತೊಂದರೆ ಆಗುತ್ತದೆ
ಎಂದು ತಿಳಿಸಿದರು.