ಚಳ್ಳಕೆರೆ :
ಸಾರ್ವಜನಿಕರು ಸಕಾಲದಲ್ಲಿ ತೆರಿಗೆ ಪಾವತಿ ಮಾಡಿ
ಗ್ರಾಮಗಳ ಅಭಿವದ್ಧಿ ಕಾರ್ಯಗಳಿಗೆ ಸಹಕರಿಸ ಬೇಕು
ಎಂದು ತಾಲೂಕು ಪಂಚಾಯಿತಿ ಇಒ ಶಶಿಧರ್ ಕಿವಿಮಾತು
ಹೇಳಿದರು.
ತಾಲೂಕಿನ ವಿವಿಧ ಗ್ರಾಮಪಂಚಾಯಿಗಳಿಗೆ ಕರವಸುಲಾತಿ
ಆಂದೋಲನ ಕಾರ್ಯಕ್ರಮದಲ್ಲಿ ಶುಕ್ರವಾರ ಭಾಗವಹಿಸಿ
ಕರವಸುಲಾತಿ ಮಾಡುವ ಮೂಲಕ ಚಾಲನೆ ನೀಡಿದರು.
ಗ್ರಾಮಗಳ ಅಭಿವದ್ದಿಯಿಂದ ಮನೆ ಕಂದಾಯ,ನೀರಿನ
ಕಂದಾಯ, ವ್ಯಾಪಾರ ಹಾಗೂ ಮಳಿಗೆಗಳ ಕರ,
ಪರವಾನಿಗೆ ಶುಲ್ಕ ಸೇರಿದಂತೆ ನಾನಾ ರೀತಿಯ
ತೆರಿಗೆಯನ್ನು (ಕರ) ಕಟ್ಟು ನಿಟ್ಟಾಗಿ ವಸೂಲಿ ಮಾಡಿ
ಸಂಪನ್ಮೂಲ ಕ್ರೋಢೀಕರಿಸಿಕೊಳ್ಳುವಂತೆ ಗ್ರಾಪಂ ಪಿಡಿಇ
ಹಾಗೂ ಸಿಬ್ಬಂದಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರು ಪಿಡಿಒ ಹಾಗೂ
ಸಿಬ್ಬಂದಿಗಳು ಉಪಸ್ಥಿತರಿದ್ದು ಅತಿ ಹೆಚ್ಚು ಕರವಸೂಲಿ
ಮಾಡಿದ ಪಿಡಿಒಗಳಿಗೆ ಬಹುಮಾನ ನೀಡಿ
ಸನ್ಮಾನಿಸುವುದಾಗಿ ಇದೇ ಸಂದರ್ಭದಲ್ಲಿ ಭರವಸೆ
ನೀಡಿದರು.