ಚಳ್ಳಕೆರೆ :
ಚಿತ್ರದುರ್ಗ: ಎಂಜಿ ವೃತ್ತದಿಂದ ಜೆಎಂಐಟಿವರೆಗೆ ರಸ್ತೆ
ಅಗಲೀಕರಿಸಿ
ಚಿತ್ರದುರ್ಗ ನಗರದ ಗಾಂಧಿ ವೃತ್ತದಿಂದ ಜೆಎಂಐಟಿ ವೃತ್ತದವರೆಗೆ,
ರಸ್ತೆ ಅಗಲೀಕರಣ ಮಾಡಬೇಕೆಂದು, ನಾಗರೀಕ ಹಿತ ರಕ್ಷಣಾ
ವೇದಿಕೆ ಬುಧವಾರ ಎಡಿಸಿಗೆ ಮನವಿ ಸಲ್ಲಿಸಿದರು.
ಜಿಲ್ಲಾಡಳಿತ
ಮತ್ತು ನಗರಸಭೆ ರಸ್ತೆ ಅಗಲೀಕರಣ ಮಾಡುವುದು ಸ್ವಾಗತರ್ಹ,
ನಗರದ ಚಳ್ಳಕೆರೆ ಗೇಟ್ ನಿಂದ ಕನಕ ವೃತ್ತದ ವರೆಗೆ ರಸ್ತೆ
ಅಗಲೀಕರಣಕ್ಕೆ ತೀರ್ಮಾನಿಸಲಾಗಿದೆ. ಇದರ ಜೊತೆಗೆ ಎಂಜಿ
ವೃತ್ತದಿಂದ ಜೆಎಂಐಟಿವರೆಗೆ ಸರ್ಕಾರಿ ಅಳತೆ ಪ್ರಕಾರ ರಸ್ತೆ
ಅಗಲೀಕರಣ ಮಾಡಬೇಕೆಂದು ಒತ್ತಾಯಿಸಿದ್ದಾರೆ.