ಚಳ್ಳಕೆರೆ :
ಚಳ್ಳಕೆರೆ: ಜೀವ ಕೈಲಿಡಿದು ಶಾಲೆಗೆ ಹೋಗುವ ಮಕ್ಕಳು
ಚಳ್ಳಕೆರೆಯ ಮೈರಾಡ ಕಾಲೋನಿ, ಬೊಮ್ಮ ಸಂದ್ರ ಗ್ರಾಮದ
ವಿದ್ಯಾರ್ಥಿಗಳು, ಜೀವದ ಹಂಗು ತೊರೆದು ಶಾಲೆಗೆ ಹೋಗುತ್ತಿದ್ದಾರೆ.
ಸರಿಯಾದ ಬಸ್ ಸೌಕರ್ಯವಿಲ್ಲ, ಇದರಿಂದ ಆಟೋಗಳ ಮೇಲೆ
ಒಳಗೆ ಮತ್ತು ಕೆಲವರು ಜೋತು ಬಿದ್ದಿರುತ್ತಾರೆ. ಜೀವ ಕೈಯಲ್ಲಿಡಿದು
ಶಾಲೆಗೆ ಹೋಗುತ್ತಾರೆ.
ಹಲವು ಬಾರಿ ಬಸ್ ಸೌಲಭ್ಯ ಕಲ್ಪಿಸುವಂತೆ
ಮನವಿ ಮಾಡಿದ್ದರು ಪ್ರಯೋಜನವಾಗಿಲ್ಲ. ಆದ್ದರಿಂದ ಈ ಬಾರಿ
ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಅವರಿಗೆ ಬಸ್ ಸೌಲಭ್ಯ
ಕಲ್ಪಿಸುವಂತೆ ಒತ್ತಾಯಿಸಿದ್ದಾರೆ.