ಚಳ್ಳಕೆರೆ : ರಾಜ್ಯ ಮಟ್ಟದ 5ನೇ ಹಮಾಲಿ ಕಾರ್ಮಿಕರ ಸಮ್ಮೆಳಕ್ಕೆ ಎರಡು ದಿನ ಪೂರ್ವ ದಿನವೇ ನಗರದಲ್ಲಿ ಬೃಹತ್ ಎತ್ತಿನ ಗಾಡಿ ರ್ಯಾಲಿ ಅದ್ದೂರಿಯಾಗಿ ಜರುಗಿತು
ನಗರದ ಪ್ರವಾಸಿ ಮಂದಿರದಿಂದ ಹೊರಟ ರ್ಯಾಲಿ ಬೆಂಗಳೂರು ರಸ್ತೆಯ ಎಪಿಎಂಸಿವರೆಗೆ ಸುಮಾರು 50 ಎತ್ತಿನ ಗಾಡಿಗಳ ಮೂಲಕ ಬೃಹತ್ ರ್ಯಾಲಿ ಸಾಗಿತು.
ಭವಿಷ್ಯನಿಧಿ, ಪಿಂಚಣಿ, ವಸತಿ ಯೋಜನೆ ಜಾರಿಗಾಗಿ ಕನಿಷ್ಠ ವೇತನ ಹಮಾಲಿ ದರಗಳ ಜಾರಿಗಾಗಿ ಎಪಿಎಂಸಿ ತಿದ್ದುಪಡಿ ಕಾಯ್ದೆ ವಾಪಸ್ಸಾತಿಗಾಗಿ ಒತ್ತಾಯಿಸಿ ಸುಮಾರು ಮೂರು ಜಿಲ್ಲೆಗಳಿಂದ ಬಂದ ಹಮಾಲಿ ಕಾರ್ಮಿಕರು ಈ ಬೃಹತ್ ರ್ಯಾಲಿ ಗೆ ಸಾಕ್ಷಿ ಕರಿಸಿದರು.
ರ್ಯಾಲಿಗೆ ಚಾಲನೆ ನೀಡಿದ ರಾಜ್ಯ ಅಧ್ಯಕ್ಷ ಕೆ.ಮಹಾಂತೇಶ್ ಹಾಗೂ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸಂದರಂ, ಸೈಯದ್ ಮುಜೀಬ್, ತಾಲೂಕು ಅಧ್ಯಕ್ಷ ಟಿ.ನಿಂಗಣ್ಣ, ಪ್ರಧಾನ ಕಾರ್ಯದರ್ಶಿ ಟಿ.ತಿಪ್ಪೇಸ್ವಾಮಿ, ಚನ್ನಕೇಶವ, ನಾಗರಾಜ್, ದುರ್ಗಾವರ ಬೋರಯ್ಯ, ರತ್ಮಮ್ಮ, ನಾಗರಾಜ್, ತಿಪ್ಪೇಸ್ವಾಮಿ, ಸುರೇಶ್, ಶಿವಣ್ಣ, ಚಂದ್ರನಾಯ್ಕ್, ಜಯಣ್ಣ, ಗಾಡಿ ತಿಪ್ಪೇಸ್ವಾಮಿ, ಐಟಿಯುಸಿ ತಿಪ್ಪೇಸ್ವಾಮಿ, ಇತರರು ಪಾಲ್ಗೊಂಡಿದ್ದರು