ಚಳ್ಳಕೆರೆ : ಇಂದಿನ ಆಧುನಿಕ ಯುಗದಲ್ಲಿ ಹದಿಹರಿಯದ ವಯಸ್ಸಿನ ಯುವಕ ಯುವತಿಯರು ಪ್ರೀತಿ ಪ್ರೇಮ ಎಂಬ ನೆಪದಲ್ಲಿ ತಮಗೆ ತಾವೇ ವಂಚನೆ ಮಾಡಿಕೊಳ್ಳುವುದು, ಮೋಸ ಹೋಗುವಂತ ಪ್ರಕರಣಗಳು ಇಂದು ನಾವು ಕಾಣಬಹುದಾಗಿದೆ ಎಂದು ತಾಲೂಕು ಪಂಚಾಯತಿ ಕಾರ್ಯನಿರ್ವಣ ಅಧಿಕಾರಿ ಶಶಿಧರ್ ಹೇಳಿದರು.
ಅವರು ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದಂತಹ ಲಿಂಗತ್ವ ಆಧಾರಿತ ದೌರ್ಜನ್ಯ ವಿರುದ್ಧ ರಾಷ್ಟ್ರೀಯ ಅಭಿಯಾನ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಶಿಶು ಅಭಿವೃದ್ಧಿ ಮಕ್ಕಳ ಕಲ್ಯಾಣ ಅಧಿಕಾರಿ ಹರಿಪ್ರಸಾದ್, ಗೀತಾ, ಜಯಶ್ರೀ, ವರ್ಗ, ವಕೀಲರಾದ ಸುಮಲತಾ, ನಾಗರತ್ಮ, ಶಾಂತವೀರಮ್ಮ, ಅಂಗನವಾಡಿ ಕಾರ್ಯಕರ್ತೆಯರು, ಎನ್ ಅರ್ ಎಲ್ ಎಂ.ಕಾರ್ಯಕರ್ತರು, ಹಾಗು ಸಾರ್ವಜನಿಕರು ಹಾಜರಿದ್ದರು.