ಚಳ್ಳಕೆರೆ : ಗಡಿಭಾಗದ ಹೋಬಳಿಗಳು ಅಭಿವೃದ್ಧಿ ಕಾಣಬೇಕಾದರೆ ಅಲ್ಲಿನ ರಸ್ತೆ, ಚರಂಡಿ ಹಾಗೂ ಆಸ್ಪತ್ರೆ ಈಗೇ ಮೂಲಭೂತ ಸೌಲಭ್ಯಗಳನ್ನು ನೀಡಿದಾಗ ಮಾತ್ರ ಅಭಿವೃದ್ಧಿ ಕಾಣುತ್ತವೆ ಎಂದು
ಶಾಸಕ ಟಿ.ರಘುಮೂರ್ತಿ ಹೇಳಿದರು.

ಅವರು ತಾಲೂಕಿನ ಪರುಶುರಾಂಪುರ ಹೋಬಳಿಯಲ್ಲಿ ಪಾವಗಡ ಹಾಗೂ ಚಳ್ಳಕೆರೆ ಮಾರ್ಗದ ರಸ್ತೆ ಅಗಲೀಕರಣಕ್ಕೆ ಲೋಕೋಪಯೋಗಿ ಇಲಾಖೆಯಿಂದ ವೀಕ್ಷಣೆ ಮಾಡಿ ಮಾತನಾಡಿದರು, ಆಂದ್ರದ ಗಡಿಯನ್ನು ಅಂಚಿಕೊಂಡಿರುವ ಪರುಶುರಾಂಪುರ ತಾಲೂಕು ಕೇಂದ್ರದಿಂದ ದೂರ ಉಳಿದಿದೆ ಇಲ್ಲಿನ ಜನರ ಆಶಯಕ್ಕೆ ತಕ್ಕಂತೆ ವಿಶಾಲವಾದ ರಸ್ತೆ ಅಗಲೀಕರಣ ಸುಮಾರು 6 ಕೋಟಿ ರೂ. ವೆಚ್ಚದಲ್ಲಿ ವಿಸ್ತರಣೆ ಮಾಡಲಾಗುತ್ತದೆ,

ಅದರಂತೆ ಇಲ್ಲಿನ ಸಾರ್ವಜನಿಕರು ಸಹಕಾರ ನೀಡಬೇಕು, ರಸ್ತೆ ಅಗಲೀಕರಣವಾದರೆ ನಗರ ದೊಡ್ಡದಾಗುತ್ತದೆ, ಇದರಿಂದ ವಾಹನ ಸವಾರರಿಗೆ ಹಾಗೂ ಅಂಗಡಿ‌ ಮುಗ್ಗಟು ವ್ಯಾಪಾರ ವಹಿವಾಟು ನಡೆಸಲು ಅನುಕೂಲವಾಗುವಂತೆ ಮಾಡಲಾಗುತ್ತದೆ ಎಲ್ಲಾರ ಸಹಕಾರ ಮುಖ್ಯವಾಗುತ್ತದೆ ಎಂದರು.

ಲೋಕೋಪಯೋಗಿ ಇಲಾಖೆ ವತಿಯಿಂದ ಅಪೆಂಡಿಕ್ಸ್ ಸಿ ಯೋಜನೆಯಡಿ ಸುಮಾರು 6.00ಕೋಟಿ ರೂಗಳ ವೆಚ್ಚದಲ್ಲಿ ಪರಶುರಾಂಪುರ ಗ್ರಾಮದ ರಸ್ತೆ ಅಗಲೀಕರಣದ ಕಾಮಗಾರಿಯ ವೀಕ್ಷಣೆ ಮಾಡಿ ಅಧಿಕಾರಿಗಳೊಂದಿಗೆ ಮತ್ತು ಮುಖಂಡರೊಂದಿಗೆ ಕಾಮಗಾರಿಯ ಬಗ್ಗೆ ಚರ್ಚಿಸಿದರು .

ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ವಿಜಯ್ ಭಾಸ್ಕರ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಎಂ.ಆರ್.ರುದ್ರೇಶ್, ಗ್ರಾಮ ಪಂಚಾಯಿತಿ ಸದಸ್ಯರುಗಳು, ತಾಲ್ಲೂಕು ಪಂಚಾಯತ್ ಕೆಡಿಪಿ ನಾಮ ನಿರ್ದೇಶನ ಸದಸ್ಯರಾದ ಬಸವರಾಜ್, ಜಿಲ್ಲಾ ಗ್ಯಾರೆಂಟಿ ಸಮಿತಿಯ ಸದಸ್ಯರಾದ ಚನ್ನಕೇಶವ, ಮುಖಂಡರುಗಳಾದ ನಾಗಭೂಷಣ, ಗುಜ್ಜಾರಪ್ಪ, ಕೃಷ್ಣಪ್ಪ, ಬಾಬು, ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!