ಚಳ್ಳಕೆರೆ :
ಚಿತ್ರದುರ್ಗ: ಕೇಂದ್ರದ ವಿರುದ್ಧ ಗುಡುಗಿದ ರೈತರು
ಕೇಂದ್ರ ಸರ್ಕಾರ ಎಂಎಸ್ ಪಿಯನ್ನು ಕೂಡಲೇ ಜಾರಿಗೆ
ತರುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ
ಸಂಘಟನೆಯ ಪದಾಧಿಕಾರಿಗಳು ಹಾಗು ರೈತರು ಜಿಲ್ಲಾಧಿಕಾರಿ
ಕಚೇರಿ ಬಳಿ ಪ್ರತಿಭಟನೆ ನಡೆಸಿದರು. ಇದಕ್ಕು ಮುನ್ನ ಚಿತ್ರದುರ್ಗ
ನಗರದ ಪ್ರವಾಸಿ ಮಂದಿರದ ಬಳಿಯಿಂದ ಮೆರವಣಿಗೆ ಮೂಲಕ
ಜಿಲ್ಲಾಧಿಕಾರಿ ಕಚೇರಿ ತಲುಪಿದರು.
ಕೇಂದ್ರ ಸರ್ಕಾರದ ವಿರುದ್ಧ
ಘೋಷಣೆಗಳನ್ನ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ
ಕೊಟ್ಟ ಭರವಸೆಯಂತೆ ಎಂಎಸ್ ಪಿ ಜಾರಿಗೆ ತರುವಂತೆ
ಆಗ್ರಹಿಸಿದರು.