ಚಳ್ಳಕೆರೆ : ಗ್ರಾಮದಲ್ಲಿ ಸಾಮರಸ್ಯದ ಜೀವನ ತುಂಬಾ ಅಗತ್ಯವಾದದು

ಅಂತಹ ಜೀವನ ಮನುಷ್ಯನಿಗೆ ತುಂಬಾ ಮುಖ್ಯವಾದದ್ದು

ಕೇವಲ ದಾರಿ, ಸ್ಮಶಾನ ಇಂತಹ ವಿಚಾರಗಳಲ್ಲಿ ಗಲಾಟೆ ಮಾಡಿಕೊಂಡು ಗ್ರಾಮದಲ್ಲಿ ಗಲಭೆ ಸೃಷ್ಟಿಸಬಾರದು.

ಗ್ರಾಮದಲ್ಲಿ ದ್ವೇಷ ಅಸೂಯೆ ಬಿಟ್ಟು ಸಾಮರಸ್ಯದ ಜೀವನ ನಡೆಸಬೇಕು ಎಂದು ತಹಶೀಲ್ದಾರ್ ಎನ್ ರಘುಮೂರ್ತಿ ಹೇಳಿದ್ದಾರೆ.

ಚಳ್ಳಕೆರೆ ತಾಲೂಕಿನ ಕಾಟಂದೇವರ ಕೋಟೆ ಗ್ರಾಮದಲ್ಲಿ ದಾರಿ ವಿವಾದ ಕಳೆದ ಹಲವು ವರ್ಷಗಳಿಂದ ತಲೆದೂರಿತ್ತು ಆದರೆ ಇಂದು ತಹಶೀಲ್ದಾರ್ ನೇತೃತ್ವದಲ್ಲಿ ಸಮಸ್ಯೆ ತಿಳಿಗೊಳಿಸಿದ್ದಾರೆ.

ಗ್ರಾಮದ ಸರ್ವೆ ನಂಬರ್ 106 ರಲ್ಲಿ ದಾರಿ ವಿವಾದವನ್ನು ಸಂಬಂಧಿಸಿದಂತೆ ಶಿವಣ್ಣ ಮತ್ತು ರವಿಕುಮಾರ್ ಇವರೊಂದಿಗೆ ಹಾಗೂ ಗ್ರಾಮಸ್ಥರೊಂದಿಗೆ ಸುದೀರ್ಘ ಚರ್ಚೆ ನಡೆಸಿ ಪರಿಸ್ಥಿತಿ ತಿಳಿ ಮಾಡಿದರು

ತಾಲೂಕಿನಲ್ಲಿ ಕಳೆದ ಎರಡು ದಿನಗಳ ಹಿಂದೆ ಇತರದ್ದೆ ಪ್ರಕರಣ ವಿವಾದಕ್ಕೆ ಸಂಬಂಧಿಸಿದಂತೆ ಒಂದು ಪ್ರಾಣ ಹಾನಿಯಾಗಿದೆ ಬಹುತೇಕ ಗ್ರಾಮಗಳಲ್ಲಿ ಇಂತಹ ದಾರಿ ಸಮಸ್ಯೆಗಳಿವೆ ಇಂತಹ ಕೃತ್ಯಗಳನ್ನು ತಡೆಗಟ್ಟಲು ತಾಲೂಕು ಆಡಳಿತದಿಂದ ಪರಿಣಾಮಕಾರಿಯಾದ ಒಂದು ಕಾರ್ಯಸೂಚಿಯನ್ನು ಹಮ್ಮಿಕೊಳ್ಳಲಾಗಿದೆ ಯಾವುದೇ ರಸ್ತೆ ಸಮಸ್ಯೆಗೆ ಸಂಬಂಧಿಸಿದ ವಿವಾದ ವಿದ್ದಲ್ಲಿ ತಕ್ಷಣ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರೆ ಅತೀ ತುರ್ತಾಗಿ ಸಮಸ್ಯೆ ತಿಳಿಗೊಳಿಸುವ ಪಣ ತೊಟ್ಟಿದ್ದಾರೆ.

ತಹಶೀಲ್ದಾರ್ ಎನ್ ರಘುಮೂರ್ತಿ ಮಾಧ್ಯಮದೊಂದಿಗೆ ಮಾತನಾಡಿ
ಅರ್ಜಿ ಕೊಟ್ಟ ಕಾಲಮಿತಿಯೊಳಗೆ ಈ ಸಮಸ್ಯೆಗಳನ್ನು ಬಗೆಹರಿಸಲು ಕಂದಾಯ ಇಲಾಖೆ ಪಣತೊಟ್ಟಿದೆ ಯಾವುದೇ ಕಾರಣಕ್ಕೂ ಗ್ರಾಮದಲ್ಲಿ ಈ ವಿಚಾರದಲ್ಲಿ ವ್ಯಾಜ್ಯಗಳು ಮತ್ತು ಕಲಹಗಳು ಹಾಗದಂತೆ ಸಹಬಾಳ್ವೆ ಹಾಗೂ ಸಾಮರಸ್ಯದಿಂದ ಜೀವನ ನಡೆಸುವಂತೆ ತಾಲೂಕಿನ ಎಲ್ಲಾ ಸಾರ್ವಜನಿಕರಿಗೆ ಮನವಿ ಮಾಡಿದರು

ವಿವಾದ ಇರುವವರನ್ನು ಕರೆಸಿ ಅವರಿಗೆ ತಾಂಬೂಲ ವಿನಿಮಯ ಮಾಡುವುದರ ಮೂಲಕ ಗ್ರಾಮದಲ್ಲಿ ಸಾಮರಸ್ಯ ಮೂಡಿಸಿದ್ದಾರೆ

ಇದೇ ಸಂದರ್ಭದಲ್ಲಿ ರಾಜಸ್ವ ನಿರೀಕ್ಷಕ ರಫೀಕ್ ಸಾಬ್, ತಾಲೂಕು ಸರ್ವೆ ಅಧಿಕಾರಿ ಪ್ರಸನ್ನಕುಮಾರ್ , ಪಿಡಬ್ಲ್ಯೂಡಿ ಕಂಟ್ರಾಕ್ಟರ್ ರವಿಕುಮಾರ್, ಮಾಜಿ ಗ್ರಾಮ ಪಂಚಾಯತಿ ಸದಸ್ಯ ಶಿವಣ್ಣ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು

About The Author

Namma Challakere Local News
error: Content is protected !!