ಚಳ್ಳಕೆರೆ :
ಚಿತ್ರದುರ್ಗ: ಡಿ 31 ಕ್ಕೆ ಸಾರಿಗೆ ಬಸ್ ಗಳಿರಲ್ಲ
ರಾಜ್ಯದಾದ್ಯಂತ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ
ಕೆ ಎಸ್ ಆರ್ ಟಿಸಿ ನೌಕರರು ಅನಿರ್ಧಿಷ್ಟಾವಧಿ ಮುಷ್ಕರ
ಮಾಡುತ್ತಿದ್ದು, ಅದೇ ರೀತಿ ಚಿತ್ರದುರ್ಗದಲ್ಲಿಯೂ ಮಾಡಲಾಗುತ್ತಿದೆ.
ಇದರಿಂದ ಬರುವ 31ರಿಂದ ಬಸ್ ಗಳು ರಸ್ತೆಗಿಳಿಯುವುದಿಲ್ಲ.
ಮುಷ್ಕರಕ್ಕೆ ಪ್ರಯಾಣಿಕರು ಸಹ ಸಹಕರಿಸಬೇಕು.
ನಾವು ಶಕ್ತಿ
ಯೋಜನೆಯಲ್ಲಿ ನಿದ್ದೆಯಿಂದ ದುಡಿಯುತ್ತಿದ್ದೇವೆ. ಸರ್ಕಾರ ನಮ್ಮ
ಬೇಡಿಕೆಗಳನ್ನು ಈಡೇರಿಸುವವರೆಗೂ ಮುಷ್ಕರ ನಿಲ್ಲಲ್ಲವೆಂದು
ಸಾರಿಗೆ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ರಹೀಂ
ಹೇಳಿದ್ದಾರೆ.