ಚಳ್ಳಕೆರೆ : ಪ್ರತಿ ವರ್ಷದಂತೆ ಈ ಬಾರಿಯೂ ಕೂಡ ಸರಕಾರದಿಂದ ರೈತರಿಗೆ‌ ನೀಡುವ ಬೆಳೆ ಸಂರಕ್ಷಣೆಗೆ ಅವಶ್ಯವಾದ ತಾಡಪಲ್ ವಿತರಣೆಯು ಲಾಟರಿ ಪ್ರಕ್ರಿಯೆಯ ಮೂಲಕ ನಡೆಯಿತು.

ಸರಕಾರದ ಮಾರ್ಗಸೂಚಿ ಪ್ರಕಾರ ಲಾಟರಿ ಮೂಲಕ ಫಲಾನುಭವಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ತಾಲೂಕಿನ ಹತ್ತು ಗ್ರಾಪಂ.ಗಳ ರೈತರು ಹಾಗೂ ಫಲಾನುಭವಿಗಳು ಸಾಕ್ಷಿಯಾದರು.

ಹೌದು‌ ಕೃಷಿ ಇಲಾಖೆಯ ಪಾರದರ್ಶಕತೆ ಮೂಲಕ ಎಸಿ, ಎಸ್ಟಿ‍ ಹಾಗೂ ಹಿಂದುಳಿದ ವರ್ಗಗಳ ನಿಗಧಿತ ಫಲಾನುಭವಿಗಳನ್ನು ಗುರುತಿಸಿ ಕೊಡುವ ತಾಡಪಲ್ ವಿತರಣೆಗೆ ಚಳ್ಳಕೆರೆ ಕಸಬಾ ಹೋಬಳಿಯ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಹೇಮಂತ್ ನಾಯ್ಕ್ ಸಮ್ಮುಖದಲ್ಲಿ ರೈತರು ಲಾಟರಿ ತೆಗೆಯುವ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಿದರು.

ಇದೇ ಸಂಧರ್ಭದಲ್ಲಿ ಕೃಷಿ ಸಹಾಯಕ ಅಧಿಕಾರಿ ತಿಪ್ಪೇಸ್ವಾಮಿ, ವೀರಣ್ಣ, ಗಂಗಾಧರ್, ಮಂಜುನಾಥ್, ಓಂಕಾರಪ್ಪ, ತಿಪ್ಪೇಸ್ವಾಮಿ, ರೈತ ಮುಖಂಡ ತಿಪ್ಪೇಸ್ವಾಮಿ, ಚಿದಾನಂದಪ್ಪ, ರಾಜಣ್ಣ, ಆನಂದ, ಬಾಲೆನಹಳ್ಳಿ ಒಟಿ ತಿಪ್ಪೇಸ್ವಾಮಿ ಇತರರು ಇದ್ದರು

ಪರಿಶಿಷ್ಟ ಜಾತಿಗೆ 218 ಅರ್ಜಿ, ಪರಿಶಿಷ್ಟ ಪಂಗಡಕ್ಕೆ 249 , ಇತರೆ 468 ಅರ್ಜಿಗಳು ,
ಒಟ್ಟಾರೆ 935 ಅರ್ಜಿಗಳು ಬಂದಿವೆ, ಆದರೆ ಸರಕಾರದಿಂದ ಕೇವಲ ಪರಿಶಿಷ್ಟ ಜಾತಿಗೆ 50, ಪರಿಶಿಷ್ಟ ಪಂಗಡಕ್ಕೆ 50 , ಇತರೆಗೆ 350 ಮೀಸಲು ತಾಡಪಲ್ ವಿರಣೆಗೆ ಆದೇಶ ನೀಡಿದೆ ಎನ್ನಲಾಗಿದೆ

ಆಯ್ಕೆಯಾದ
ಪರಿಶಿಷ್ಟ ಜಾತಿ, ಪಂಗಡದ ಫಲಾನುಭವಿಗಳು ಸರಕಾರದ ವಂತಿಕೆ 214 ರೂ. ಹಾಗೂ ಇತರೆ ವರ್ಗದ ಫಲಾನುಭವಿಗಳು 1071 ವಂತಿಕೆ ನೀಡಿ ತಾಡಪಲ್ ಪಡೆದುಕೊಳ್ಳಬೇಕು ಎಂದು ಕೃಷಿ ಅಧಿಕಾರಿ ಹೇಮಂತ್ ನಾಯ್ಕ ಹೇಳಿದ್ದಾರೆ

About The Author

Namma Challakere Local News
error: Content is protected !!