ಚಳ್ಳಕೆರೆ : ಐತಿಹಾಸಿಕ ಘಟನೆಗಳ ಜೊತೆಗೆ ಅಂತಹ ವ್ಯಕ್ತಿಗಳನ್ನ ಸ್ಮರಿಸಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ ಎಂದು ಉಪಪ್ರಚಾರ್ಯ ತುಂಗಭದ್ರಾಪ್ಪ ಹೇಳಿದ್ದಾರೆ
ಚಳ್ಳಕೆರೆ ತಾಲೂಕಿನ ಪರಶುರಾಂಪುರ ಗ್ರಾಮದ ಸರ್ಕಾರಿ ಕೆಪಿಎಸ್ ಶಾಲೆಯ ಪ್ರೌಢಶಾಲಾ ವಿಭಾಗದಲ್ಲಿ ಮಳೆಬಿಲ್ಲು ಕಾಯ೯ಕ್ರಮದಲ್ಲಿ ಇತಿಹಾಸ ಹಬ್ಬವನ್ನ ಆಚರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಲಿಕಾ ಚೇತರಿಕೆ ಕಾರ್ಯಕ್ರಮದಲ್ಲಿ ಶಾಲಾ ಪ್ರಾರಂಭದಲ್ಲಿ ವಿದ್ಯಾರ್ಥಿಗಳು ಸಂತಸದಿಂದ ಶಾಲೆಗೆ ಆಗಮಿಸಲು, ಸರ್ಕಾರ ಮಳೆಬಿಲ್ಲು ಎಂಬ ಕಾರ್ಯಕ್ರಮದಲ್ಲಿ 15 ದಿನಗಳವರೆಗೆ ಪ್ರತಿ ನಿತ್ಯ ಬೇರೆ ಬೇರೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಜತೆ ಈದಿನ ಇತಿಹಾಸ ಹಬ್ಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಇತಿಹಾಸ ಶಿಕ್ಷಕ ಅಶೋಕ ರೆಡ್ಡಿ ಮಾತನಾಡಿ, ವಿದ್ಯಾರ್ಥಿಗಳು ಐತಿಹಾಸಿಕ ವ್ಯಕ್ತಿಗಳ ವೇಷ ಭೂಷಣವನ್ನು ಹಾಕಿಕೊಂಡು ಕಾರ್ಯಕ್ರಮದಲ್ಲಿ ಭಾಗವಹಿಸುವುದರ ಮೂಲಕ ಇತಿಹಾಸವನ್ನು ಮತ್ತೆ ನಮ್ಮೆಲ್ಲರ ಕಣ್ಣು ಮುಂದೆ ತಂದರು ಎಂದು ಹೇಳಿದರು.
ಬೆಳಿಗ್ಗೆಯಿಂದಲೇ ಪ್ರೌಢಶಾಲಾ, ಬಾಲಕರ ,ಬಾಲಕಿಯರ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಇತಿಹಾಸ ಹಬ್ಬದ ವಸ್ತು ಪ್ರದರ್ಶನ ನೋಡಲು ಕಾತುರದಿಂದ ಸಾಲಿನಲ್ಲಿ ಬಂದು ಜನಪದ ಕಲೆಗಳು , ಐತಿಹಾಸಿಕ ಘಟನೆಗಳ ,ವ್ಯಕ್ತಿಗಳು ಚಿತ್ರ , ಅಪರೂಪದ ನಾಣ್ಯ , ಹಳೆ ಕಾಲದ ದಿನ ನಿತ್ಯದ ಸಲಕರಣೆ ,ಕೃಷಿ ಉಪಕರಣಗಳು , ವಿವಿಧ ಸಂಸ್ಕೃತಿಗಳ ಪರಿಚಯ , ಭೂಪಟಗಳು ಸೇರಿದಂತೆ ಗತಕಾಲದ ವೈಭವ ಕೈ ಬೀಸಿ ಕರೆದ ಇತಿಹಾಸ ಹಬ್ಬ ಎಂದು ವೀಕ್ಷಣೆ ವೇಳೆ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ವೇಳೆಯಲ್ಲಿ ಉಪ ಪ್ರಚಾಯ೯ ತುಂಗಭದ್ರಾಪ್ಪ , ಹಿರಿಯ ಶಿಕ್ಷಕ ಅಶೋಕ ರೆಡ್ಡಿ , ಶಿವಾನಂದ , ವಿರೇಂದ್ರ ,ಶಿವಾನಂಪ್ಪ , ವಾಣಿ , ಗೀತಾ ಹಾಗೂ ವಿದ್ಯಾರ್ಥಿಗಳು ಇದ್ದರು.