ಓಬಯ್ಯನಹಟ್ಟಿಯಲ್ಲಿ ವಿಜೃಂಭಣೆಯಿಂದ ನೆಡೆದ ಆಂಜನೇಯಸ್ವಾಮಿ ಕಾರ್ತಿಕತ್ಸೋವದ ರಥೋತ್ಸವ ಸಂಭ್ರಮ.

ನಾಯಕನಹಟ್ಟಿ:: ಗ್ರಾಮೀಣ ಪ್ರದೇಶದ ಜಾನಪದ ಶೈಲಿಯ ತಮಟೆ ಉರುಮೆ ನಂದಿಕೋಲು ಕಲಾತಂಡಗಳೊಂದಿಗೆ ಶ್ರೀ ಆಂಜನೇಯಸ್ವಾಮಿ ರಥೋತ್ಸವ ಜರುಗಿತು.

ನಾಯಕನಹಟ್ಟಿ ::ಡಿ.28. ಸಮೀಪದ ಓಬಯ್ಯನಹಟ್ಟಿ ಗ್ರಾಮದಲ್ಲಿ ನೆಲೆಸಿರುವ ಆರಾಧ್ಯ ದೇವಾ ಶ್ರೀ ಆಂಜನೇಯಸ್ವಾಮಿ ಕಾರ್ತಿಕತ್ಸೋವ ಶನಿವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು.

ಬೆಳಿಗ್ಗೆ 8:00ಯಿಂದಲೇ ಬಣ್ಣ ಬಣ್ಣದ ಬಾವುಟಗಳಿಂದ ಹೂವಿನ ಹಾರಗಳಿಂದ ರಥವನ್ನು ಶೃಂಗಾರ ಮಾಡಲಾಯಿತು. ಮಧ್ಯಾಹ್ನ 2 ಗಂಟೆಗೆ ಶ್ರೀ ಆಂಜನೇಯಸ್ವಾಮಿ ಉತ್ಸವ ಮೂರ್ತಿಯನ್ನು ರಥದಲ್ಲಿ ಸಕಲ ಪೂಜಾ ವಿಧಿ ವಿಧಾನಗಳಿಂದ ಪ್ರತಿಷ್ಠಾಪಿಸಲಾಯಿತು ಇನ್ನೂ ಶ್ರೀ ಆಂಜನೇಯಸ್ವಾಮಿ ರಥೋತ್ಸವಕ್ಕೆ ಗ್ರಾಮದ ಗೂಲ್ಲರಹಟ್ಟಿ ಪೂಜಾರಿ ನಾಗೇಂದ್ರ ವಂಶಸ್ಥರ ಮನೆಯಿಂದ ಬಲಿ ಅನ್ನ ತರಲಾಯಿತು ಕಾಸು ಮೀಸಲು ಮೊಸರು ತುಂಬಾ ಜಿನಿಗಿ ಹಾಲು ತಂದು ಶ್ರೀ ಆಂಜನೇಯಸ್ವಾಮಿ ರಥದ ಗಾಲಿಗಳಿಗೆ ಎಡೆ ಹಾಕಲಾಯಿತು.
ನಂತರ ಮಹಾಮಂಗಳಾರತಿ ನೆರವೇರಿಸಿ ಗ್ರಾಮಸ್ಥರು ರಥಕ್ಕೆ ಚಾಲನೆ ನೀಡಿದರು

ಇನ್ನೂ ರಥೋತ್ಸವ ಮುಂಚಿತವಾಗಿ ಮುಕ್ತಿ ಬಾವುಟ ಹಾರಾಜು ಪ್ರಕ್ರಿಯೆ ನಡೆಯಿತು. ಓಬಯ್ಯನಹಟ್ಟಿ ಹಿರಿಯ ಮುಖಂಡರಾದ ಟಿ ತಿಪ್ಪೇಸ್ವಾಮಿ 75 ಸಾವಿರ ರೂ. ಗಳಿಗೆ ಮುಕ್ತಿ ಬಾವುಟವನ್ನು ಪಡೆದುಕೊಂಡರು.

ಇದೇ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಬಂಡೆ ಕಪಿಲೆ ಓಬಣ್ಣ ಮಾತನಾಡಿದರು ಶ್ರೀ ಆಂಜನೇಯಸ್ವಾಮಿ ರಥೋತ್ಸವನ್ನು ಕಾರ್ತಿಕ ಮಾಸದಲ್ಲಿ ಗ್ರಾಮದ ಹಿರಿಯ ಮಾರ್ಗದರ್ಶನದ ಮೇರೆಗೆ ರಥೋತ್ಸವನ್ನು ಗ್ರಾಮದ ಎಲ್ಲಾ ಸಮುದಾಯದವರು ಸೇರಿ ಅದ್ದೂರಿಯಾಗಿ ಆಚರಣೆ ಮಾಡುತ್ತಾರೆ ಆದ್ದರಿಂದ ಶ್ರೀ ಆಂಜನೇಯಸ್ವಾಮಿ ಆಶೀರ್ವಾದ ಗ್ರಾಮದ ಪ್ರತಿಯೊಬ್ಬರ ಮೇಲೆ ಇರಲಿ ಎಂದರು.

ಇದೇ ವೇಳೆ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಡಿ.ಎಚ್ ಪರಮೇಶ್ವರಪ್ಪ ಮಾತನಾಡಿದರು.
ಓಬಯ್ಯನಹಟ್ಟಿ ಗ್ರಾಮದಲ್ಲಿ ಪ್ರತಿವರ್ಷದಂತೆ ಶ್ರೀ ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವ ಕಾರ್ತಿಕ ಸಂದರ್ಭದಲ್ಲಿ ಸಂಪ್ರದಾಯದಂತೆ ಗ್ರಾಮದಲ್ಲಿ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಿಂದ ಪಾದಗಟ್ಟೆ ಅವರಿಗೆ ರಥೋತ್ಸವ ನಡೆಯಲಿದೆ ಈ ಬಾರಿ ಉತ್ತಮ ಮಳೆ ಬೆಳೆ ಆದ ಕಾರಣ ಬಹಳ ಉತ್ತಮ ಸಂತೋಷ ಸಡಗರದಿಂದ ಹಬ್ಬವನ್ನು ಆಚರಿಸುತ್ತೇವೆ ಎಂದರು.

ಇನ್ನೂ ಗ್ರಾಮದ ಯುವಕರು ರಥೋತ್ಸವದ ವೇಳೆ ಆಂಜನೇಯಸ್ವಾಮಿ ಸ್ಮರಿಸುವ ಮೂಲಕ ಭಕ್ತಿಯನ್ನು ಸಮರ್ಪಿಸಿದರು.

ಇದೇ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷರಾದ ಬಾಲರಾಜ್, ಪಾಟೀಲ್ ಪಿ.ಎಂ ಮಹದೇವಣ್ಣ, ಸಣ್ಣ ಬೋರಯ್ಯ, ದಳವಾಯಿ, ಕಾಕಸೂರಯ್ಯ, ಅಜ್ಜಣ್ಣ, ಮ್ಯಾಕಲ ಮಲ್ಲಯ್ಯ,ಮರಡಿ ಬೋರಯ್ಯ, ಗಣೇಶ್ ಬೋರಯ್ಯ, ಕೃಷ್ಣರೆಡ್ಡಿ,ಶ್ರೀನಿವಾಸರೆಡ್ಡಿ, ದೊಡ್ಡ ನಾಗಯ್ಯ, ಕಾಮಯ್ಯ,ಬೋರಜ್ಜಯ್ಯ, ಓ ಸೋಮಶೇಖರಪ್ಪ, ಕುರುಬರು ಸಣ್ಣಣ್ಣ, ಕರಡಿ ಚಿನ್ನಮಲ್ಲಯ್ಯ, ತಿಪ್ಪೇಸ್ವಾಮಿ, ಮಾಳಜ್ಜಯ್ಯ, ರಮೇಶ, ನಾಗಭೂಷಣ, ಶ್ರೀನಿವಾಸ, ದೇವರಾಜ್, ಹಳ್ಳದ ಕಪಿಲೆ ಸಣ್ಢತಿಪ್ಪಯ್ಯ, ಆಂಬ್ಯುಲೆನ್ಸ್ ಚಿನ್ನಮಲ್ಲಯ್ಯ, ಗ್ರಾಮ ಪಂಚಾಯಿತಿ ಹಾಲಿ ಸದಸ್ಯರಾದ ಓ ಸೋಮಶೇಖರ, ಲಕ್ಷ್ಮೀ ಮಹದೇವಣ್ಣ, ಗೀತಮ್ಮ ಸಿ. ಕುಮಾರ, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಹಾಗೂ ಗ್ರಾಮದ ಎಲ್ಲಾ ಸಮುದಾಯದ ಮುಖಂಡರು ಮತ್ತು ಸಮಸ್ತ ಓಬಯ್ಯನಹಟ್ಟಿ ಗ್ರಾಮಸ್ಥರು ಉಪಸ್ಥಿತರಿದ್ದರು.

About The Author

Namma Challakere Local News

You missed

error: Content is protected !!