filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 2621440;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 34;

ಚಳ್ಳಕೆರೆ: ಚಳ್ಳಕೆರೆ ನಗರಸಭೆ
ವ್ಯಾಪ್ತಿಯ ಹಳೇಟೌನ್‌ನ
ಶಾನುಭೋಗರ ಬೀದಿ ಮತ್ತು ಪಾವಗಡ
ರಸ್ತೆಯ ಶ್ರೀಗುರುರಾಘವೇಂದ್ರ
ಕಲ್ಯಾಣ ಮಂಟಪದಲ್ಲಿ ಕಾನೂನು
ವಿರುದ್ಧವಾಗಿ ಶೌಚಾಲಯದ
ಮಲವನ್ನು ಮನುಷ್ಯರಿಂದ ತಗೆಸಿದ
ಹಿನ್ನೆಲೆಯಲ್ಲಿ ಎರಡೂ ಪ್ರಕರಣಗಳನ್ನು
ದಾಖಲಿಸಲಾಗಿದೆ.

ನಗರದ ಹಳೇಟೌನ್‌ ಶಾನುಭೋಗರ
ಬೀದಿಯಲ್ಲಿರುವ ರುದ್ರಮುನಿಸ್ವಾಮಿ
ತಮ್ಮ ವಾಸದಮನೆಗೆ ಅಳವಡಿಸಿದರುವ
ಮಲದ ಗುಂಡಿಯನ್ನು
ಯಂತ್ರೋಪಕರಣ ಬಳಸದೆ
ಅವೈಜ್ಞಾನಿಕವಾಗಿ ಪರಿಶಿಷ್ಟ ಜಾತಿಯವರಿಂದ
ಸ್ವಚ್ಚಗೊಳಿಸಿದ ಹಿನ್ನೆಲೆಯಲ್ಲಿ ಅವರ ವಿರುದ್ದ ಜಿಲ್ಲಾ
ಮ್ಯಾನುಯಲ್ ಸ್ಕ್ಯಾವೆಂಜರ್ –
ಸಪಾಯಿ ಕರ್ಮಚಾರಿಗಳ ಸೇವಾ ಸಮಿತಿ ದೂರು
ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲು
ಮಾಡಲಾಗಿರುತ್ತದೆ.

ಇನ್ನೂ ಘಟನೆ ನಡೆದ ಸ್ಥಳಕ್ಕೆ ಡಿವೈಎಸ್ ಪಿ ಬಿಟಿ.ರಾಜಣ್ಣ ಬೇಟಿ‌ನೀಡಿ ಪರೀಶಿಲನೆ ನಡೆಸಿದ್ದಾರೆ.

ರುದ್ರಸ್ವಾಮಿ ಇತರೆ ಐದು ಜನರ
ಮೇಲೆ ಪ್ರಕರಣ ದಾಖಲಾಗಿದೆ. ನಗರಸಭೆಯ
ಕಂದಾಯ ನಿರೀಕ್ಷಕ ಓ.ಮಂಜುನಾಥ
ದೂರು ನೀಡಿರುತ್ತಾರೆ.

ಮತ್ತೊಂದು ಪ್ರಕರಣದಲ್ಲಿ ಪಾವಗಡ
ರಸ್ತೆಯ ಗುರುರಾಘವೇಂದ್ರ
ಕಲ್ಯಾಣಮಂಟಪದ ಆವರಣದಲ್ಲಿರುವ
ಮಲದಗುಂಡಿಯನ್ನು
ಸ್ವಚ್ಚಗೊಳಿಸುವ
ಸಂದರ್ಭದಲ್ಲಿ ರಂಗಸ್ವಾಮಿ (48) ಬಿದ್ದು
ಮೃತಪಟ್ಟಿದ್ದು, ಕಲ್ಯಾಣಮಂಟಪದ
ಮಾಲೀಕ ಜೆ.ಗುರುವೀರನಾಯಕರ
ವಿರುದ್ಧ ಪೊಲೀಸರು ಪ್ರಕರಣ
ದಾಖಲಿಸಿದ್ದಾರೆ.

ಕಂದಾಯ ನಿರೀಕ್ಷಕ ಕೆ. ಗುರುಪ್ರಸಾದ್ ದೂರು ನೀಡಿದ್ದು,
ಪಿಎಸ್‌ಐ ಕೆ.ಸತೀಶ್‌ನಾಯ್ಕ ಎರಡೂ
ಪ್ರಕರಣ ದಾಖಲಿಸಿ ತನಿಖೆ
ಮುಂದುವರೆಸಿದ್ದಾರೆ.

ಘಟನಾ ಸ್ಥಳಕ್ಕೆ ಡಿವೈಎಸ್ ಪಿ ಬಿಟಿ ರಾಜಣ್ಞ ಸೇರಿದಂತೆ,
ನೈರ್ಮಲ್ಯ
ಇಂಜಿನಿಯರ್ ಸೇರಿದಂತೆ ನಗರಸಭೆಯ ಕಂದಾಯ
ನಿರೀಕ್ಷಕರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

About The Author

Namma Challakere Local News

You missed

error: Content is protected !!