ಚಳ್ಳಕೆರೆ : ಮನುಷ್ಯ ಯಾವಾಗಲೂ ಸದಾ ದೇವರ ದ್ಯಾನದಿಂದ ಇದ್ದರೆ ಅನಿಗೆ ಮುಕ್ತಿ ಸಿಗುತ್ತದೆ ಎಂದು ಶ್ರೀ ಸಾಯಿಬಾಬಾ ಸೇವಾ ಟ್ರಸ್ಟ್ ನ ಅಧ್ಯಕ್ಷ ಬಿಸಿ.ಸಂಜೀವಮೂರ್ತಿ ಹೇಳಿದರು.
ನಗರದ ಪಾವಗಡ ರಸ್ತೆಯ ಶ್ರೀ ಸಾಯಿಬಾಬಾ ಮಂದಿರದಲ್ಲಿ
ನೂತನ ವರ್ಷದ ವಾಲ್ ಕ್ಯಾಲೆಂಡರ್ ಮತ್ತು ಪಾಕೆಟ್ ಕ್ಯಾಲೆಂಡರ್. ಬಿಡುಗಡೆಯನ್ನು ಶ್ರೀ ನರಹರಿ ಸದ್ಗುರುಪೀಠದ ಪೀಠಾಧ್ಯಕ್ಷ ಶ್ರೀ ರಾಜಾರಾಮ್ ಸ್ವಾಮೀಜಿಯವರು ಹಸ್ತದಿಂದ ಬಿಡುಗಡೆ ಮಾಡಿಸಿ ಮಾತನಾಡಿದರು
ನಾವು ನಡೆದು ಬಂದ ದಾರಿಯನ್ನು ಯಾವತ್ತು ಮರೆಯಬಾರದು, ಅದರಂತೆ ಮುಂದೆ ನಾವು ಯಾವ ರೀತಿ ಸಮಾಜದಲ್ಲಿ ಬದುಕುತ್ತೆವೆ ಎಂಬುದು ಗುರಿಯನ್ನು ಹೊಂದಿರಬೇಕು, ಅದರಂತೆ ಹಿಂದಿನ ವರ್ಷದಲ್ಲಿ ಹಾಗದ ಕೆಲಸ ಕಾರ್ಯಗಳನ್ನು ಈ ನೂತನ ವರ್ಷದಲ್ಲಿ ಪೂರ್ಣಗೊಳಿಸಲು ಪ್ರಯತ್ನ ಪಡೆಯಬಕು
ಎಂದರು.
ಶ್ರೀ ನರಹರಿ ಸದ್ಗುರುಪೀಠದ ಪೀಠಾಧ್ಯಕ್ಷ ಶ್ರೀ ರಾಜಾರಾಮ್ ಸ್ವಾಮೀಜಿಯವರು ತಮ್ಮ ಹಸ್ತದಿಂದ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ದೇವಾಲಯಯಲ್ಲಿ ದೇವರ ದ್ಯಾನ ಎಷ್ಟು ಮುಖ್ಯವೋ ಅದೇ ರೀತಿಯಲ್ಲಿ ನಮ್ಮ ನೆರೆಹೊರೆಯರನ್ನು ಪ್ರೀತಿಯಿಂದ ಕಾಣಬೇಕು, ಹೇಳುವುದು ಆಚಾರ ಮಾಡುವುದು ಅನಾಚಾರ ಎಂಬಂತೆ ಇರಬಾರದು ಎಂದರು.
ಇನ್ನೂ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಯಿ ಮಂದಿರದ ಟ್ರಸ್ಟ್ ಅಧ್ಯಕ್ಷರಾದ ಬಿ.ಸಿ. ಸಂಜೀವ್ ಮೂರ್ತಿ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಪತ್ರಕರ್ತರಾದ ಕೊರ್ಲಕುಂಟೆ ತಿಪ್ಪೇಸ್ವಾಮಿ ಆಗಮಿಸಿದ್ದರು,
ಈ ಸಂದರ್ಭದಲ್ಲಿ ಟ್ರಸ್ಟ್ ನ ಉಪಾಧ್ಯಕ್ಷ .ಕೆಎಂ. ಜಗದೀಶ್, ಡಾ.ಜಯಕುಮಾರ್, ಸಹಕಾರ್ಯ ದರ್ಶಿ ಬಿಸಿ.ಸತೀಶ್ ಕುಮಾರ್ ,ಟ್ರಸ್ಟಿಗಳಾದ ಬಿವಿ ಚಿದಾನಂದಮೂರ್ತಿ, ಎಂ ಆರ್ ರವಿಪ್ರಸಾದ್, ಶ್ರೀನಾಥ್, ಹಾಗೂ ಪುಷ್ಪ ಸಂಜೀವ ಮೂರ್ತಿ ಮತ್ತು ರಶ್ಮಿ ಸತೀಶ್ ಕುಮಾರ್, ಹಾಗೂ ಸಾಯಿ ಸದ್ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.