ಚಳ್ಳಕೆರೆ : ಈಡೀ ಚಿತ್ರದುರ್ಗ ಜಿಲ್ಲೆಯಲ್ಲಿ ಕೆ.ಸಿ.ವೀರೇಂದ್ರ ಪಪ್ಪಿರವರು ಸುಮಾರು ಹತ್ತರಿಂದ ಹದಿನೈದು ವರ್ಷಗಳ ಕಾಲ ಜೆಡಿಎಸ್ ಪಕ್ಷದಲ್ಲಿ ನಿರಂತರ ಒಡನಾಟ ಬೆಳೆಸಿ, ಪಕ್ಷವನ್ನು ಜೀವಂತವಾಗಿ ಇರಲು ಕಾರಣಿ ಭೂತರಾಗಿದ್ದಾರೆ ಎಂದು ಮಾಜಿ ತಾಪಂ.ಸದಸ್ಯ ಹೆಚ್.ಸಮರ್ಥರಾಯ್ ಹೇಳಿದ್ದಾರೆ

ಚಳ್ಳಕೆರೆ ನಗರದ ಪ್ರವಾಸಿ ಮಂದಿರದಲ್ಲಿ ಕೆ.ಸಿ.ವೀರೇಂದ್ರ ಪಪ್ಪಿರವರ ವಿಧಾನ ಪರಿಷತ್‌ಗೆ ಟಿಕೆಟ್ ಕೈ ತಪ್ಪಿದಕ್ಕೆ ವರಿಷ್ಠರ ಈ ನಿರ್ಧಾರಕ್ಕೆ ಎಚ್ಚರಿಕೆ ನಿಡಲು ಆಯೋಜಿಸಿದ್ದ ಸಭೆಯಲ್ಲಿ ಗಾಂಧಿನಗರ, ಮದಕರಿನಗರ, ಅಂಬೇಡ್ಕರ್‌ನಗರ, ಹಳೆನಗರ, ನಗರಂಗೆರೆ, ಹಿರಿಯೂರು ಮೊಳಕಾಲ್ಮುರು, ರಾಂಪುರ, ಪರುಶುರಾಂಪುರ, ಹೊಸದುರ್ಗದ ಬಂದ ಅಭಿಮಾನಿಗಳು ಹಾಗೂ ನಗರದ ಅಭಿಮಾನಿಗಳು ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಈಡೀ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಹೊಸ ಚೈತನ್ಯ ನೀಡುವುದಲ್ಲಿ ಕೆಸಿ.ವೀರೇದ್ರರ ಪ್ಪಪಿರವರ ಪಾತ್ರ ತುಂಬಾ ಇದೆ.
ಕಳೆದ 2018ರಲ್ಲಿ ಚಿತ್ರದುರ್ಗ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ವೈಯಕ್ತಿಕ ವರ್ಚಸ್‌ನಿಂದ ಸುಮಾರು ಮತಗಳನ್ನು ಗಳಿಸಿ ಪಕ್ಷ ಸಂಘಟನೆಯನ್ನು ಮಾಡಿದ್ದಾರೆ. ಹೊರ ಜಿಲ್ಲೆಗಳಿಂದ ಬರುವ ಹಲವು ಕಾರ್ಯರ್ತರಿಗೆ ವೈಯಕ್ತಿಕ ಸಹಾಯ ಮಾಡುವುದರ ಮೂಲಕ ಪಕ್ಷ ಸಂಘನೆಯ ಬೆಳವಣಿಗೆಗೆ ಕಾರಣ ಕರ್ತರಾಗಿದ್ದಾರೆ. ವಿಧಾನ ಪರಿಷತ್ ಚುನಾವಣೆಗೆ ಟಿಕೆಟ್ ನೀಡುವುದಾಗಿ ಭರವಸೆ ನೀಡಿ ಕೊನೆ ಗಳಿಕೆಯಲ್ಲಿ ವರಿಷ್ಠರು ಟಿಕೆಟ್ ಕೊಡದೆ ಮಧ್ಯ ಕರ್ನಾಟಕ ಈ ಭಾಗದ ಪಕ್ಷದ ಕಾರ್ಯಕರ್ತರಿಗೆ ಅನ್ಯಯ ಮಾಡಿದ್ದಾರೆ. ಸಾವಿರಾರು ಅಭಿಮಾನಿಗಳ ಮನಸ್ಸಿಗೆ ಘಾಸಿ ಉಂಟು ಮಾಡಿದ್ದಾರೆ ಎಂದರು.

ಯಾವ ಮಾನದಂಡದ ಮೇಲೆ ಟಿ.ಎ.ಶರವಣರವರಿಗೆ ಟಿಕೆಟ್ ನೀಡಿದ್ದೀರಿ ಆದರೆ ನಮ್ಮ ಪಪ್ಪಿ ರವರಿಗೆ ಯಾಕೆ ಕೊಡಲಿಲ್ಲ ಎಂಬುದು ವರಿಷ್ಠರು ಕಾರ್ಯಕರ್ತರಿಗೆ ಉತ್ತರ ನೀಡಬೇಕಿದೆ.

ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ವಿಧಾನಸಭಾ ಕ್ಷೇತ್ರಗಳಿಂದ ಗೆಲ್ಲಿಸಿಕೊಳ್ಳುವ ಶಕ್ತಿ ಕೆ.ಸಿ.ವೀರೇಂದ್ರ ಪಪ್ಪಿಗೆ ಇದೆ.
ರಾಜ್ಯದಲ್ಲಿ ಪ್ರಬಲವಾದ ವೀರಶೈವ ಸಮಾಜವತಿಯಿಂದ ಪ್ರತಿನಿಧಿಸಿದ ಕೆಸಿ.ವೀರೇಂದ್ರ ಪಪ್ಪಿರವರು ಜಿಲ್ಲೆಯ ಎಲ್ಲಾ ಹಂತದ ಚುನಾವಣೆಯಲ್ಲಿ ಪಕ್ಷದ ಜೊತೆಗೆ ಗುರುತಿಸಿಕೊಂಡು ಅವರು ವೈಯಕ್ತಿಕ ಸಹಯಾಧನ ಮಾಡುವ ಮೂಲಕ ಪಕ್ಷದ ಸಂಘಟನೆಯ ಮಾಡಿದ್ದಾರೆ ಎಂದರು.

ನಗರಸಭೆ ಉಪಾಧ್ಯಕ್ಷ ಟಿ.ವಿಜಯ್‌ಕುಮಾರ್, ಮಾತನಾಡಿ, ನಿದನವಾಗಿ ರಾಜಕೀಯದಲ್ಲಿ ಸಾಗುವುದು ದೀರ್ಘಕಾಲದ ಪಕ್ಷದ ನಿಷ್ಠೆಗೆ ಬಧ್ಧರಾಗಿದ್ದಾರೆ, ಅವರ ನಡೆಗೆ ಆಮೆಯ ನಡೆಗೆ ಪಕ್ಷದ ನಿಷ್ಠವಂತ ಇವರಿಗೆ ಟಿಕೆಟ್ ನೀಡದೆ ನಿರಾಕರಿಸಿರುವುದು ದುರಂತ, ಈಡೀ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದ ಆಲದ ಮರದ ಬೇರು ಅದರ ಕೊಂಬೆಗಳು ಕಾರ್ಯಕರ್ತರು ಎನ್ನಬಹುದು.
ಹಣ ಎಲ್ಲಾರಿಂದ ಸಿಗಬಹುದು ಆದರೆ ಒಳ್ಳಯ ವ್ಯಕ್ತಿ ಸಿಗಲು ಸಾಧ್ಯವಿಲ್ಲ ಇಂತಿಹ ಗುಣವಂತ ಹಣ ಹಾಗೂ ಒಳ್ಳೆಯ ತನವಿರುವ ಪಪ್ಪಿಯನ್ನು ವರಿಷ್ಠರು ಕೈ ಬಿಟ್ಟಿರುವುದು ಖಂಢನೀಯ,

ಕೆಸಿ.ವೀರೇಂದ್ರರವರು ಎಂದು ಕೂಡ ಅಧಿಕಾರದ ಹಿಂದೆ ಹೊದವರಲ್ಲ ಆದರೆ ನಿವೇ ಆಸೆ ಹುಟ್ಟಿಹಾಕಿ ಇಗ ಕೊನೆಗಳಿಗೆಯಲ್ಲಿ ಅಧಿಕಾರ ಕೊಡುವುದಕ್ಕಿಂತ ಅವಮಾನ ಮಾಡಿದಂತಾಗಿದೆ ಎಂದರು.
ಸಾಮಾಜಿಕ ಕಾರ್ಯಕರ್ತ ಹೆಚ್.ಎಸ್.ಸೈಯದ್ ಮಾತನಾಡಿ, ಇಂತಹ ಅತುರದ ವರಿಷ್ಠಾರ ನಿರ್ಧಾರದಿಂದ ಮಧ್ಯ ಕರ್ನಾಟಕದ ಭಾಗದ ಕಾರ್ಯರ್ತರಿಗೆ ನೋವಾಗಿದೆ. ಇಷ್ಟಾದರೂ ಕೂಡ ರಾಜ್ಯ ನಾಯಕರ ಬಗ್ಗೆ ವಿಶ್ವವಾಸ ಇಟ್ಟುಕೊಂಡಿದ್ದಾರೆ. ವರಿಷ್ಠರ ಇಂತಹ ತೀರ್ಮಾನಗಳಿಂದ ಜಿಲ್ಲೆಯಲ್ಲಿ ಪಕ್ಷಕ್ಕೆ ಬೆಳೆಯುವುದಕ್ಕಿಂತ ಕುಂದುಹೊಗುತ್ತದೆ ಆದ್ದರಿಂದ ಮುಂದಿನ ದಿನಗಳಲ್ಲಿ ಒಳ್ಳೆಯ ಸ್ಥಾನ ಮಾನ ನೀಡಿದರೆ ಮುಂಬರುವ ಚುನಾವಣೆಯಲ್ಲಿ ಗೆಲುವು ಸಾಧಿಸಿ ನಿಮ್ಮ ಕೈ ಬಲಪಡಿಸುತ್ತೆವೆ ಎಂದರು.

ಈದೇ ಸಂದರ್ಭದಲ್ಲಿ ನಗರಸಭೆ ಸದಸ್ಯ ಹೊಯ್ಸಳ ಗೊವಿಂದರಾಜು, ಜೆಡಿಎಸ್ ಕಾರ್ಯಕರ್ತ ಕೆಸಿ.ವೀರೇಂದ್ರ ಅಭಿಮಾನಿ ಮುರುಳಿ, ಹಿರಿಯೂರು ಮಂಜುನಾಥ್, ಶಿವಮೊಗ್ಗದ ಕಾರ್ಯಕರ್ತೆ ವಾಣಿಗಣೇಶ್, ಸೈಯದ್, ಟಿ.ಜೆ.ವೆಂಕಟೇಶ್, ಪ್ರಭು, ನನ್ನಿವಾಳ ನಾಗರಾಜ್, ಭಿಮಣ್ಣ, ಚಳ್ಳಕೆರೆ ಉಪ್ಪಾರಹಟ್ಟಿ ,ದೊಡ್ಡೆರಿ, ಈದೇ ಸಂಧರ್ಭದಲ್ಲಿ ಪ್ರಶಾಂತ್ ಪಚ್ಚಿ ಅಭಿಮಾನಿ ಬಳಗ, ನಾಯಕನಹಟ್ಟಿ, ಮನಮೈನಹಟ್ಟಿ, ಮಹದೇವಪುರ, ಬಾಲೇನಹಳ್ಳಿ, ರಾಂಜೋಗಿಹಳ್ಳಿ, ಮದಕರಿಪುರ, ಹಾಗೂ ಚಿತ್ರದುರ್ಗ ಜಿಲ್ಲೆಯ ಸಮಸ್ತ ಅಭಿಮಾನಿ ಬಳಗದವತಿಯಿಂದ ಆಯೋಜಿಸಿದ್ದ ಸಭೆಯಲ್ಲಿ ನೂರಾರು ಕಾರ್ಯಕರ್ತ ಅಭಿಮಾನಿಗಳು ಭಾಗವಹಿಸಿದ್ದರು.

Namma Challakere Local News
error: Content is protected !!