ಚಳ್ಳಕೆರೆ : ರಾಜ್ಯದಲ್ಲಿ ಮುಂದಿನ ಬಾರಿ ಜೆಡಿಎಸ್ ಅಧಿಕಾರಕ್ಕೆ ತರಬೇಕು ಎಂದು ಪಣತೊಟ್ಟು ನಿಂತ ಮಧ್ಯ ಕರ್ನಾಟಕ ಭಾಗದ ವೀರಶೈವ ಸಮುದಾಯದ ಪ್ರಬಲ ಮುಖಂಡ ಕೆ.ಸಿ.ವೀರೇಂದ್ರರವರಿಗೆ ಎಂಎಲ್‌ಸಿ ಟಿಕೆಟ್ ಕೊಡುವುದಾಗಿ ಭರವಸೆ ನೀಡಿ, ಕೊನೆಗಳಿಗೆಯಲ್ಲಿ ಟಿಕೆಟ್ ಕೈ ತಪ್ಪಿಸಿರುವುದು ಈ ಭಾಗದ ಕಾರ್ಯಕರ್ತರಿಗೆ ತುಂಬಾ ನೋವಾಗಿದೆ ಎಂದು ತಾಲೂಕು ಅಧ್ಯಕ್ಷ ಪಿ.ತಿಪ್ಪೆಸ್ವಾಮಿ ಹೇಳಿದ್ದಾರೆ.
ಅವರು ನಗರದ ರೋಟರಿ ಬಾಲ ಭವನದಲ್ಲಿ ವಿಧಾನ ಪರಿಷತ್ ಚುನಾವಣೆಯಲ್ಲಿ ಕೆಸಿ.ವೀರೇಂದ್ರ ಪಪ್ಪಿರವರಿಗೆ ಟಿಕೆಟ್ ಕೊಡುವುದಾಗಿ ಭರವಸೆ ನೀಡಿದ್ದರು, ಕೊನೆಗಳಿಗೆಯಲ್ಲಿ ಟಿಕೆಟ್ ಕೈ ತಪ್ಪಿದ್ದ ಕಾರಣ ವರಿಷ್ಠರ ಈ ನಿಲುವಿಗೆ ಆಕ್ರೋಶ ವ್ಯಕ್ತಪಡಿಸಿ ಎಚ್ಚರಿಕೆ ನೀಡುವುದರ ಮೂಲಕ ಸಭೆಯಲ್ಲಿ ಮಾತನಾಡಿದರು.
ಚಿತ್ರದುರ್ಗ ಜಿಲ್ಲೆಯ ಈಭಾಗಕ್ಕೆ ಎಂಎಲ್‌ಸಿ ಟಿಕೆಟ್ ನೀಡಿ ಪಕ್ಷದಲ್ಲಿ ಸ್ಥಾನ ನೀಡಿದ್ದಾರೆ ಮುಂದಿನ ದಿನಗಳಲ್ಲಿ ಕನಿಷ್ಠ ಎರಡರಿಂದ ಮೂರು ಸ್ಥಾನಗಳನ್ನು ಗೆದ್ದು ವರಿಷ್ಠರ ಆಸೆಯಂತೆ ರಾಜ್ಯದಲ್ಲಿ ಜೆಡಿಎಸ್ ಪಕ್ಷ 123 ಸ್ಥಾನಗಳ ಗೆದ್ದು ಸ್ವತಂ ಬಲದ ಮೇಲೆ ನಾವು ಅಧಿಕಾರಕ್ಕೆ ಬರತಿದ್ದೆವೆ ಆದರೆ ಕೊನೆ ಗಳಿಗೆಯಲ್ಲಿ ಟಿಕೆಟ್ ನೀಡದೆ ಅಪಾರ ಕಾರ್ಯಕರ್ತರಿಗೆ ನೋವುಂಟು ಮಾಡಿದ್ದರೆ, ವರಿಷ್ಠರ ಈ ಮಲತಾಯಿ ದೋರಣೆ ಸರಿಯಲ್ಲ, ಈಡೀ ಮಧ್ಯಕರ್ನಾಟದ ದಿಂದ ಪ್ರತಿನಿಧಿಸುವ ಹಾಗೂ ಪಕ್ಷ ಸಂಘಟನೆ ಮಾಡುವ ಕೆಸಿ.ವೀರೇಂದ್ರರವರನ್ನು ಅಮವಾನಿಸಿರುವುದು ನಮ್ಮನೆಲ್ಲಾ ಅವಮಾನಿಸದಂತೆ ಅವರಿಗೆ ಮುಂದಿನ ದಿನಗಳಲ್ಲಿ ಪಕ್ಷದಲ್ಲಿ ಉತ್ತಮ ಸ್ಥಾನಮಾನ ನೀಡಿ ಸಂವಿಧಾನಿಕ ಹುದ್ದೆ ನೀಡಬೇಕು ಇಲ್ಲವಾದರೆ ಈಡೀ ಜಿಲ್ಲೆಯ ಮೂರು ಕ್ಷೇತ್ರಗಳ ಕಾರ್ಯಕರ್ತರು ಸಂಪೂರ್ಣವಾಗಿ ರಾಜಿನಾಮೆ ನೀಡಿ ಅನ್ಯಪಕ್ಷದ ಕಡೆ ಮುಖ ಮಾಡಬೇಕಾದಿತು ಎಂದು ವರಿಷ್ಟರಿಗೆ ಎಚ್ಚರಿಕೆ ನೀಡಿದರು.
ಜೆಡಿಎಸ್ ಪಕ್ಷದ ನಿಯೋಜಿತ ಅಭ್ಯರ್ಥಿ ಎಂ.ರವೀಶ್ ಕುಮಾರ್ ಮಾತನಾಡಿ, ನಮ್ಮ ಪಕ್ಷದ ವರಿಷ್ಟರು ಈರೀತಿಯಾದ ನಿರ್ಧಾರ ತೆಗೆದುಕೊಳ್ಳಬಾರದಿತ್ತು, ಮುಂಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಿಂದ ಮೂರು ಸ್ಥಾನಗಳು ಗೆದ್ದು ಕೈ ಬಲಪಡಿಸುತ್ತಿದ್ದೆವು, ಆದರೆ ಅವರ ನಿರ್ಣಯ ಸರಿಯಲ್ಲ ಒಂದು ವೇಳೆ ಈ ಮೊದಲೇ ನಮಗೆ ಸೂಚನೆ ಟಿಕೆಟ್ ಇಲ್ಲ ಎಂದು ಸೂಚನೆ ನೀಡಿದ್ದರೆ, ಈತೆರನಾದ ನೋವುಂಟಾಗುತ್ತಿರಲಿಲ್ಲ, ನನ್ನ 2018ರ ಚುನಾವಣೆಯಲ್ಲಿ ನಾನು ಸೋತಾಗಲೂ ಈ ತೆರನಾದ ನೋವು ಉಂಟಾಗಿರಲಿಲ್ಲ ಆದರೆ ಕೆ.ಸಿ.ವೀರೇಂದ್ರ ಪಪ್ಪಿ ರವರಿಗೆ ಟಿಕೆಟ್ ಕೈ ತಪ್ಪಿರುವುದರಿಂದ ತುಂಬಾ ನೋವಾಗಿದೆ ಎಂದು ಭಾವುಕರಾದರು.
ಈಡೀ ಚಿತ್ರದುರ್ಗ ಜಿಲ್ಲೆಯಲ್ಲಿ ಕೆ.ಸಿ.ವೀರೇಂದ್ರ ಪಪ್ಪಿರವರು ಜೆಡಿಎಸ್ ಪಕ್ಷದ ಉಸಿರು ಅವರು ಅವರು ಸುಮಾರು ಹತ್ತರಿಂದ ಹದಿನೈದು ವರ್ಷಗಳ ಕಾಲ ಜೆಡಿಎಸ್ ಪಕ್ಷದಲ್ಲಿ ನಿರಂತರ ಒಡನಾಟ ಬೆಳೆಸಿ, ಪಕ್ಷವನ್ನು ಜೀವಂತವಾಗಿ ಇರಲು ಕಾರಣಿ ಭೂತರಾಗಿದ್ದಾರೆ ಆದ್ದರಿಂದ ಮುಂದಿನ ದಿನಗಲ್ಲಿ ವರಿಷ್ಟರು ಈ ತೆರನಾದ ಗೊಂದಲ ಮಾಡದೆ ಉನ್ನತ ಸ್ಥಾನ ಮಾನ ನೀಡಬೇಕು ಒತ್ತಾಯಿಸಿದರು.
ಮಾಜಿ ತಾಪಂ.ಸದಸ್ಯ ಹೆಚ್.ಸಮರ್ಥರಾಯ್ ಮಾತನಾಡಿ, ಕಳೆದ 2018ರಲ್ಲಿ ಚಿತ್ರದುರ್ಗ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ವೈಯಕ್ತಿಕ ವರ್ಚಸ್‌ನಿಂದ ಸುಮಾರು ಮತಗಳನ್ನು ಗಳಿಸಿ ಪಕ್ಷ ಸಂಘಟನೆಯನ್ನು ಮಾಡಿದ್ದಾರೆ. ವಿಧಾನ ಪರಿಷತ್ ಚುನಾವಣೆಗೆ ಟಿಕೆಟ್ ನೀಡುವುದಾಗಿ ಭರವಸೆ ನೀಡಿ ಕೊನೆ ಗಳಿಕೆಯಲ್ಲಿ ವರಿಷ್ಠರು ಟಿಕೆಟ್ ಕೊಡದೆ ಮಧ್ಯ ಕರ್ನಾಟಕ ಈ ಭಾಗದ ಪಕ್ಷದ ಕಾರ್ಯಕರ್ತರಿಗೆ ಅನ್ಯಯ ಮಾಡಿದ್ದಾರೆ. ಸಾವಿರಾರು ಅಭಿಮಾನಿಗಳ ಮನಸ್ಸಿಗೆ ಘಾಸಿ ಉಂಟು ಮಾಡಿದ್ದಾರೆ ಎಂದರು.
ನಗರಸಭೆ ಉಪಾಧ್ಯಕ್ಷ ಟಿ.ವಿಜಯ್‌ಕುಮಾರ್, ಮಾತನಾಡಿ, ವರಿಷ್ಟರ ಇಂತಹ ಅತುರದ ವರಿಷ್ಠಾರ ನಿರ್ಧಾರದಿಂದ ಮಧ್ಯ ಕರ್ನಾಟಕದ ಭಾಗದ ಕಾರ್ಯರ್ತರಿಗೆ ನೋವಾಗಿದೆ. ಇಷ್ಟಾದರೂ ಕೂಡ ರಾಜ್ಯ ನಾಯಕರ ಬಗ್ಗೆ ವಿಶ್ವವಾಸ ಇಟ್ಟುಕೊಂಡಿದ್ದಾರೆ. ವರಿಷ್ಠರ ಇಂತಹ ತೀರ್ಮಾನಗಳಿಂದ ಜಿಲ್ಲೆಯಲ್ಲಿ ಪಕ್ಷಕ್ಕೆ ದೊಡ್ಡ ಅಘಾತವಾಗುತ್ತದೆ ಆದ್ದರಿಂದ ಮುಂದಿನ ದಿನಗಳಲ್ಲಿ ಒಳ್ಳೆಯ ಸ್ಥಾನಮಾನ ನೀಡಿದರೆ ಮುಂಬರುವ ಚುನಾವಣೆಯಲ್ಲಿ ಗೆಲುವು ಸಾಧಿಸಿ ನಿಮ್ಮ ಕೈ ಬಲಪಡಿಸುತ್ತೆವೆ ಎಂದು ಎಚ್ಚರಿಕೆ ನೀಡಿದರು.
ಈದೇ ಸಂಧರ್ಭದಲ್ಲಿ ನಗರಸಭೆ ಸದಸ್ಯ ವಿ.ವೈ.ಪ್ರಮೋದ್, ಪ್ರಶಾಂತ್, ಚೆನ್ನಿಗರಾಮಯ್ಯ, ಹೆಗ್ಗೆರೆ ಆನಂದಪ್ಪ, ಚಂದ್ರಣ್ಣ, ಶಿವಣ್ಣ, ಮಂಜನಾಥ್, ಸಂತೋಷ್, ಶ್ರೀಧರ್‌ಚಾರ್, ವಿಜಯ್‌ಕುಮಾರ್, ಭಿಮಣ್ಣ, ಗಾಡಿತಿಪ್ಪೆಸ್ವಾಮಿ, ಲೋಕೇಶ್, ಸೋಮಣ್ಣ, ಚಂದ್ರಣ್ಣ ಚನ್ನರಾಮಯ್ಯ, ಚಂದ್ರಶೇಖರ್, ರಾಜನಾಯ್ಕ, ಪ್ರಸನ್ನಕುಮಾರ್, ಮುಖಂಡ ಪ್ರಶಾಂತ್, ದೊಡ್ಡೆರಿ ಶಿವಣ್ಣ, ಗಂಗಾಂಧಾರ್, ವೆಂಕಟೇಶ್, ಬೊಮ್ಮಸಮುದ್ರ ತಿಪ್ಪಣ್ಣ, ಕುಡಿರುಡಿಹಳ್ಳಿ ಗಂಗಾಧರ್, ಹಬ್ಬು, ಟಿಪ್ಪು, ಅಲ್ಲ ಭಕ್ಷಿ, ಜಿಲಾನ್, ನನ್ನಿವಾಳ ನಾಗರಾಜ್, ಇನ್ನೂ ಮುಂತಾದವರು ಹಾಜರಿದ್ದರು.