ಚಳ್ಳಕೆರೆ : ನಗರಸಭೆಯ ಸೀಲ್ ಗಳು ಬೇಕಾಬಿಟ್ಟಿಯಾಗಿ ಇರುವುದು ಹಾಗೂ ಕಂದಾಯ ಕಟ್ಟಿದ ರಶೀದಿಗಳನ್ನು ದಾಖಲು ಮಾಡಿಕೊಳ್ಳದೆ ಸಾರ್ವಜನಿಕರಿಗೆ ವಂಚನೆ ಮಾಡುತ್ತಿರುವ ನಗರಸಭೆ ಅಧಿಕಾರಿಗಳ ವಿರುದ್ಧ ಬಿಜೆಪಿ ಮುಖಂಡ ಪಟೇಲ್ ಕೆಬಿ.ಕೃಷ್ಣೆಗೌಡ ರವರು ಜಿಲ್ಲಾಧಿಕಾರಿ ಕಛೇರಿ ಮೆಟ್ಟಿಲು ಹತ್ತಿರುವುದು ಕಂಡುಬಂದಿದೆ.
ಅದರಂತೆ ನಗರಸಭೆಯ ಸೀಲ್ ಬಳಸಿದವರ ಮೇಲೆ ತನಿಖೆ ಮಾಡದೆ ಇರುವುದು ಯಾವ ಉದ್ದೇಶಕ್ಕೆ ಎಂದು ಪ್ರಶ್ನಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ
ಇನ್ನೂ ಅಧಿಕಾರಿಗಳ ವೈಪಲ್ಯ ಇದೆ ಎಂದು ಅವರನ್ನು ಅಮಾನತ್ತು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಸಭೆ
ವಿಷಯ: ಶ್ರೀ ಜಗರೆಡ್ಡಿ ಮಾನ್ಯ ಪೌರಾಯುಕ್ತರು ಚಳ್ಳಕೆರೆ ನಗರಸಭೆ ಇವರನ್ನು ಇಲಾಖ ವಿಚಾರಣೆ
ಕಾಯ್ದಿರಿಸಿ ಕೂಡಲೇ ಅಮಾನತ್ತು ಮಾಡುವ ಬಗ್ಗೆ
ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಮಾನ್ಯ ಜಿಲ್ಲಾಧಿಕಾರಿಗಳಾದ ತಾವುಗಳ ಚಳ್ಳಕೆರೆ ನಗರ
ಕಚೇರಿಯಲ್ಲಿ ನಡೆದಿರುವ ನಗರ ಸಭೆಯ ಸೀಲುಗಳು ಬೇಕಾ ಬಿಟ್ಟಿಯಾಗಿ
ದುರುಪಯೋಗವಾಗಿರುವುದು ಹಾಗೂ ಐ.ಸಿ.ಐ.ಇ.ಐ ಬ್ಯಾಂಕ್ ಸೀಲುಗಳ ನಕಲಿ ಮೊಹರು ಹಾಕಿದ ಚಲನ್
ಗಳು ನಗರ ಸಭೆ ಕಚೇರಿಯಲ್ಲಿ ನಿಡೀರುವು ತಮ್ಮ ತನಿಖೆಯಲ್ಲಿ ತಿಳಿದುಬಂದಿರುತ್ತದೆ. ಮುಂದುವರೆದು ಈ
ನಕಲಿ ಬ್ಯಾಂಕ್ ಸೀಲುಗಳನ್ನು ಮೊಹರು ಹಾಕಿದ ಚಲನ್ ಗಳ ಹಾಗೂ ಸರ್ಕಾರಿ ಕಚೇರಿಯಾದ ನಗರ
ಸಭೆಯ ಸೀಲುಗಳ ಬೇಕಾಬಿಟ್ಟಿ ದುರುಪಯೋಗ ಮೂಲ ಕಂಡುಹಿಡಿಯಲು ಹೆಚ್ಚಿನ ತನಿಖೆಗೆ ನಗರ ಸಭಾ
ಕಚೇರಿ ವ್ಯಾಪ್ತಿಯ ಅರಕ್ಷಕ ಠಾಣೆಯಲ್ಲಿ ಶಂಕಿತರ ಕುರಿತು ದೂರು ದಾಖಲಿಸಲು ನಿಯಾಮನುಸಾರ ಕ್ರಮ
ಕೈಗೊಳ್ಳಲು ದಿನಾಂಕ:13/12/2024 ರಂದು ಸೂಚಿಸಿರುತ್ತೀರಿ. ಆದರೆ ಮಾನ್ಯ ಜಿಲ್ಲಾಧಿಕಾರಿಗಳ ತಮ್ಮಗಳ
ನಿರ್ದೇಶನವಿದ್ದರು ಕೂಡ ಇಂದಿನವರೆಗೆ ಮಾನ್ಯ ಚಳ್ಳಕೆರೆ ನಗರ ಸಭೆಯ ಪೌರಾಯುಕ್ತರು ಅರಕ್ಷಕ
ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸದೆ ತಮ್ಮಗಳ ನಿರ್ದೇಶನವನ್ನು ಸ್ಪಷ್ಟವಾಗಿ ಉಲ್ಲಂಘಿಸಿರುತ್ತಾರೆ ಆದ
ಕಾರಣ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾದಂಡಾಧಿಕಾರಿಗಳಾದ ತಾವುಗಳೂ ತಮ್ಮಗಳ ಆದೇಶವನ್ನು
ಉಲ್ಲಂಘಿಸಿರುವ ಶ್ರೀ ಜಗರೆಡ್ಡಿ ಮಾನ್ಯ ಪೌರಾಯುಕ್ತರು ಚಳ್ಳಕೆರೆ ನಗರಸಭೆ ಇವರನ್ನು ಇಲಾಖ ವಿಚಾರಣೆ
ಕಾಯ್ದಿರಿಸಿ ಕೂಡಲೇ ಅಮಾನತ್ತು ಮಾಡಲು ಕೋರಿದೆ.