ಚಳ್ಳಕೆರೆ :
ಚಳ್ಳಕೆರೆ ತಾಲೂಕಿನ ಚಿಕ್ಕಮ್ಮನಹಳ್ಳಿ ಗ್ರಾಮದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಅದ್ಯಕ್ಷರಾದ ಶಶಿಕಲಾ ಸುರೇಶಬಾಬು ನೂತನ ಕನಕದಾಸರ ಪ್ರತಿಮೆಗೆ ಪೂಜೆ ನೆರವೇರಿಸಿ ಸಭೆ ಕುರಿತು ಮಾತನಾಡಿದರು .
ನಾಡಿನ ಜನತೆಗೆ ಕುಲ ಕುಲವೆಂದು ಹೊಡೆದಾಡದಿರಿ,ನಿಮ್ಮ ಕುಲದ ನೆಲೆಯನ್ನೆನಾದರು ಬಲ್ಲಿರಾ ಎಂದು ಜಗತ್ತಿಗೆ ಸಾರುತ್ತಾ,ತನ್ನ ಅನಂತ ಧೃಡ ಸಂಕಲ್ಪದ ಭಕ್ತಿಯಿಂದ ಶ್ರೀಕೃಷ್ಣ ಪರಮಾತ್ಮನನ್ನೆ ಒಲಿಸಿಕೊಂಡ ಮಹಾತ್ಮ ದಾಸಶ್ರೇಷ್ಠ ಶ್ರೀ ಭಕ್ತ ಕನಕದಾಸರು ಸುಮಾರು ಐದು ನೂರು ವರ್ಷಗಳ ಹಿಂದೆಯೇ ಜಾತಿ ಜಾತಿಗಳ ಮದ್ಯೆ ಸಂಘರ್ಷವಿರಬಾರದು ಎಂದು ತಿಳಿಸಿದ ಮಹಾನ್ ಚೇತನ್ ಇಂದು ಕನಕದಾಸರು, ಅಂಬೇಡ್ಕರ್, ಬಸವಣ್ಣ , ವಾಲ್ಮೀಕಿಯಂತಹ ಮಹಾನ ದಾರ್ಶನಿಕರನ್ನ ಜಾತಿಗಳಿಗೆ ಸೀಮಿತಗೊಳಿಸಿ ಜಯಂತಿಗಳನ್ನು ಮಾಡತಿರುವುದು ವಿಷಾದನೀಯ ಸಂಗತಿ ಎಂದು ತಿಳಿಸಿದರು.
ಸಭೆ ಕುರಿತು ಪ್ರೋ ಶಿವಲಿಂಗಪ್ಪ , ಕೆಡಿಪಿ ಸದಸ್ಯರಾದ ಕೆಸಿ. ನಾಗರಾಜು, ಕುರುಬ ಸಮಾದ ಅದ್ಯಕ್ಷರಾದ ಆರ್ ಮಲ್ಲೇಶಪ್ಪ, ಎಲ್ಐಸಿ ಪರಸಪ್ಪ ಮಾತನಾಡಿದರು.
ಈ ಸಂದರ್ಭದಲ್ಲಿ ನಗರಸಭೆ ಸ್ಥಾಯಿ ಸಮಿತಿ ಮಾಜಿ ಅದ್ಯಕ್ಷರಾದ ರಾಘವೇಂದ್ರ, ರಾಜ್ಯ ಕುರುಬರ ಸಂಘದ ಮಾಜಿ ನಿರ್ದೇಶಕರಾದ ಕಂದಿಕೆರೆ ಸುರೇಶಬಾಬು, ಗ್ರಾಮ ಪಂಚಾಯತ್ ಮಾಜಿ ಅದ್ಯಕ್ಷರಾದ ಗುರುಮೂರ್ತಿ, ನೀಲಪ್ಪ, ಅಂಗಡಿಗೌಡ ಭೀಮಣ್ಣ, ತಿಪ್ಪೇರುದ್ರಪ್ಪ , ವೆಂಕಟೇಶ್, ತಿಪ್ಪೇಸ್ವಾಮಿ, ಉಮೇಶ್ , ಬಂಡರ ತಿಪ್ಪೇಸ್ವಾಮಿ , ಶಿವಲಿಂಗಪ್ಪ , ರುದ್ರಪ್ಪ ಉಪಸ್ಥಿತರಿದ್ದರು